ರಾಜ್ಯ ಮಟ್ಟದ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್: ಡಾ| ಭರತ್

DOCTOR-1

ಶಿವಮೊಗ್ಗ: ಭಾರತೀಯ ದಂತ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದಿಂದ ನ.೯ ಮತ್ತು ನ.೧೦ ರಂದು ಜೆಎನ್‌ಎನ್‌ಸಿಇ ಕ್ರಿಕೆಟ್ ಮೈದಾನದಲ್ಲಿ ಸಹ್ಯಾದ್ರಿ ಡೆಂಟಿಸ್ಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ರಾಜ್ಯಮಟ್ಟದ ಕ್ರೀಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ರಾಜಧ್ಯಕ್ಷ ಡಾ.ಭರತ್ ಎಸ್.ವಿ. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಂತ ವೈದ್ಯರನ್ನು ಪ್ರಧಾನವಾಗಿಟ್ಟುಕೊಂಡ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಮೂರು ಮಹಿಳಾ ತಂಡಗಳು ಸೇರಿದಂತೆ ಒಟ್ಟು ೧೮ ಕ್ರಿಕೆಟ್ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಇದು ಎರಡು ದಿನದ ಪಂದ್ಯಾವಳಿಯಾಗಿದ್ದು, ಮಹಿಳೆಯರಿಗೆ ೬ ಓವರ್, ಪುರುಷರಿಗೆ ೮ ಓವರ್‌ಗಳನ್ನು ನಿಗಧಿಪಡಿಸಲಾಗಿದೆ. ಪಂದ್ಯಾವಳಿಗಳು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ರವರೆಗೆ ನಡೆಯಲಿದೆ. ಗೆದ್ದ ತಂಡಕ್ಕೆ ಟ್ರೋಪಿ ನೀಡಲಾಗುವುದು ಎಂದರು.


ದಂತ ವೈದ್ಯರ ಸಂಘವು ಈಗಾಗಲೇ ಟೆನ್ನಿಸ್, ಗಾಲ್ಫ್ ಸೇರಿ ದಂತೆ ಹಲವು ಕ್ರೀಡೆಗಳನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತ ಬಂದಿದೆ. ಈ ಬಾರಿ ಶಿವಮೊಗ್ಗದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್‌ನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸಂಘ ಒಳಗೊಂಡಿದೆ. ಶಿವಮೊಗ್ಗ ಜಿಯಲ್ಲಿ ೧೮೦ಕ್ಕೂ ಹೆಚ್ಚು ಸದಸ್ಯರು ಸದಸ್ಯತ್ವ ಪಡೆದಿzರೆ ಎಂದರು.
ನ.೯ರ ಬೆಳಿಗ್ಗೆ ೯ಕ್ಕೆ ಉದ್ಘಾಟನಾ ಸಮಾರಂಭ ಆಯೋಜಿಸಿದ್ದು, ಈ ಸಮಾರಂಭಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಎಂಎಲ್‌ಸಿ ಡಿ. ಎಸ್. ಅರುಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿzರೆ.
ಸಮಾರೋಪ ಸಮಾರಂಭ ನ.೧೦ರ ಸಂಜೆ ೫ಕ್ಕೆ ನಡೆಯಲಿದ್ದು, ಈ ಸಮಾರಂಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್‌ಸಿ ಡಾ.ಧನಂಜಯ ಸರ್ಜಿ ಭಾಗವಹಿಸಲಿzರೆ. ಸಚಿವ ಮಧು ಬಂಗಾರಪ್ಪಅವರು ಉದ್ಘಾಟನಾ ಸಮಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಧ್ಯಕ್ಷ ಡಾ. ಸಾತ್ವಿಕ್, ಕಾರ್ಯದರ್ಶಿ ಡಾ.ಜಯಭಾರತ ರೆಡ್ಡಿ, ಪದಾಧಿಕಾರಿಗಳಾದ ಡಾ. ವಿಕ್ರಮ್ ಎಸ್., ಡಾ.ನಟರಾಜ್, ಡಾ.ವಿಶ್ವಾಸ್ ಇನ್ನಿತರರಿದ್ದರು.