ರಾಜ್ಯ ಮಟ್ಟದ ೧೯ನೇ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…

2

ಶಿವಮೊಗ್ಗ : ಮನಸ್ಸಿಗೆ ಆನಂದವನ್ನು ನೀಡುವ ಸಾಹಿತ್ಯ ಬೇಕಾಗಿದೆ ಎಂದು ಉಡುಪಿಯ ಕು.ಪವಿತ್ರಾ ಎನ್.ದೇವಾಡಿಗ ಹೇಳಿದರು.
ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿ ಚುಂಚನಗಿರಿ ಟ್ರಸ್ಟ್ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ೧೯ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದ ಅಭಿರುಚಿಯನ್ನು ಶಾಲಾ ಹಂತ ದಲ್ಲಿಯೇ ಬೆಳೆಸಬೇಕಾಗಿದೆ. ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳ ಹುಳುಗಳನ್ನಾಗಿಸದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸು ವಂತೆ ಮಾಡಬೇಕಾಗಿದೆ. ಕನ್ನಡ ಸಾಹಿತ್ಯಕ್ಕೆ ಶ್ರೀಮಂತವಾದ ಪರಂಪರೆ ಇದೆ ಇಂತಹ ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ. ಮಕ್ಕಳಲ್ಲಿ ರುವ ಪ್ರತಿಭೆಗಳನ್ನು ಗುರುತಿಸು ವಂತಹ ಕೆಲಸ ಆಗಬೇಕಾಗಿದೆ ಉತ್ತಮ ಪರಿಸರವನ್ನುಂಟು ಮಾಡಿದಲ್ಲಿ ಕಲಿಕೆ ಉತ್ತಮವಾಗಲು ಸಾಧ್ಯವಾಗುತ್ತದೆ ಎಂದರಲ್ಲದೆ ಜಿಯಲ್ಲಿ ಕಳೆದ ಅನೇಕ ವರ್ಷ ಗಳಿಂದ ಮಕ್ಕಳ ಸಾಹಿತ್ಯಕ್ಕೆ ವಿಶೇಷ ವಾದ ರೀತಿಯಲ್ಲಿ ಕೃಷಿ ಮಾಡುತ್ತಿರುವುದು ಅಭಿನಂದನಿಯ ವಾಗಿದೆ. ಇದು ರಾಜದ್ಯಂತ ವಿಸ್ತರಿಸಬೇಕಾಗಿದೆ. ಸರ್ಕಾರಗಳು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ಯನ್ನು ನೀಡಬೇಕಾಗಿದೆ ಎಂದರು.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ.ಮಾನ್ವಿ ಕರೂರು ಅವರು ಮಾತನಾಡಿ, ಇತಿಹಾಸದ ಪುನರ್ ವಿಮರ್ಶೆ ಆಗಬೇಕಾಗಿದೆ. ನಾವು ಓದಿದ ಇತಿಹಾಸದಲ್ಲಿ ರಾಣಿ ಚನ್ನಬೈರಾದೇವಿ ಹಾಗೂ ಕೆಳದಿ ಚಂಪಕಾಳ ಬಗ್ಗೆಯಾಗಲಿ ಕೆಳದಿ ರಾಣಿ ಚನ್ನಮ್ಮಾಳ ಬಗ್ಗೆಯಾಗಲಿ ಎಲ್ಲಿಯೂ ಸರಿಯಾಗಿ ಬರೆಯಲೆ ಇಲ್ಲ. ಇತಿಹಾಸ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖ ಗಳಿದ್ದಂತೆ ಆದರೆ ಪುರುಷ ಪ್ರಧಾನ ವಾದ ವ್ಯವಸ್ಥೆಯಲ್ಲಿ ಮಹಿಳೆಯ ಇತಿಹಾಸವನ್ನು ಅಳಿಸಲಾಗಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದರು.
ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ ಗುಣಾತ್ಮಕ ಶಿಕ್ಷಣ ಮರೆಮಾಚಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡ ವರಿಗೆ ಮಾಸಿಕ ಹತ್ತು ಸಾವಿರ ಸಂಬಳ ಕೊಡಲಾಗುತ್ತಿದೆ. ಪ್ರಸ್ತುತ ಹತ್ತು ಸಾವಿರದಲ್ಲಿ ಒಬ್ಬ ಮನುಷ್ಯ ಜೀವನ ಸಾಗಿಸುತ್ತಿರುವುದು ಬಹಳ ಕಷ್ಟಕರವಾಗಿದೆ. ಇದು ಒಂದು ರೀತಿಯ ಸರ್ಕಾರಿ ಜೀತ ಎಂದು ನಾನು ಭಾವುಸುತ್ತೇನೆ. ಈ ರೀತಿಯ ಜೀತ ಪದ್ದತಿಯಿಂದಾಗಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಸಾಧ್ಯವಾದದು ಎಂದರು.
ಕನ್ನಡ ಸಾಹಿತ್ಯಕ್ಕೆ ಭವ್ಯ ಪರಂಪರೆ ಇದೆ ಹಿರಿಯರು ತಮ್ಮ ಬುದ್ಧಿ ಬೆವರನ್ನು ಬಸಿದು ಈ ಭಾಷೆಯನ್ನು ಶ್ರೀಮಂತ ಗೊಳಿಸಿzರೆ. ಆದಿಕವಿಪಂಪನಿಂದ ಮಹಾಕವಿ ಕುವೆಂಪು ಅವರವರೆಗೆ ಮನುಷ್ಯಪರ ಕಾಳಜಿ ಕನ್ನಡ ಸಾಹಿತ್ಯದ ಜೀವದ್ರವ್ಯವಾಗಿದೆ. ೧೨ನೇ ಶತಮಾನದ ವಚನ ಚಳುವಳಿ ವಿಶ್ವಕ್ಕೆ ನೀಡಿದ ಅನನ್ಯ ಅರಿವಿನ ಬೆಳಕಾಗಿದೆ. ಖಡ್ಗವಾಗಲಿ ಕಾವ್ಯ- ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ ಎಂಬ ಬಂಡಾಯದ ಘೋಷಣೆ ವಾಸ್ತವದ ಅರಿವನ್ನು ತೆರೆದಿಟ್ಟಿತು. ವಾಸ್ತವಕ್ಕೆ ಬೆನ್ನುಮಾಡುವ, ಸಮಕಾಲೀನ ಸಂಕಟಗಳಿಗೆ ಸ್ಪಂದಿಸದೇ ಬರೆಯುವ ಸಾಹಿತ್ಯ ಶೋಭೆಯಲ್ಲ. ನಾಡಿನ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊ ಯ್ಯುವ ಕೆಲಸ ಆಗಬೇಕಾಗಿದೆ ಎಂದರಲ್ಲದೇ, ಅರಣ್ಯವಾಸಿ ರೈತರಿಗೆ ನ್ಯಾಯ ಸಿಗಬೇಕಾಗಿದೆ. ಮರ, ಗಿಡ, ಪ್ರಾಣಿ, ಪಕ್ಷಿಗಳು ನಾಶವಾಗುವುದನ್ನು ನಾನು ವಿರೋಧಿಸುತ್ತೇನೆ. ಅರಣ್ಯ ನಮ್ಮ ಜೀವನದ ಅವಿಭಾಜ್ಯ ಅಂಗವೂ ಹೌದು. ಪಾಶ್ಚಾತ್ಯರಲ್ಲಿ ಅರಣ್ಯ ಎಂದರೆ ಜನವಸತಿ ರಹಿತ ಕಾಡು ಎಂದು ಪರಿಗಣಿಸಲಾಗಿದೆ. ನಮ್ಮನಲ್ಲಿ ಕಾಡಿನೊಳಗೇ ಬದುಕು ಕಟ್ಟಿಕೊಂಡ ಸೋಲಿಗರು, ಗೊಂಡರು, ಮಲೆಮಾದಿಗರು, ಹಸಲರು ಹಾಗೇ ನಮ್ಮೂರಿನಲ್ಲಿ ವಾಸಿಸುವ ಕುಣಬಿ ಜನಾಂಗದ ವರೂ ಇzರೆ. ಇವರ ಜೀವನಕ್ಕೆ ಸರ್ಕಾರ ಇನ್ನೂ ಯಾವುದೇ ದಾರಿ ತೋರಿಸಲಿಲ್ಲ. ಅರಣ್ಯದಲ್ಲಿ ವಾಸಿಸು ವವರು ೭೫ ವರ್ಷದ ದಾಖಲೆ ಕೊಡಬೇಕು ಎಂಬ ಕಾನೂನು ಹೊರಬಂದಿದೆ. ೭೫ ವರ್ಷದ, ಸ್ವಾತಂತ್ರ ಪೂರ್ವದ ದಾಖಲೆಗಳು ಸರ್ಕಾರೀ ಕಛೇರಿಗಳ ಇಲ್ಲವಾಗಿದೆ, ಕಾಡಿನಲ್ಲಿ ವಾಸಿಸುವ, ಅಕ್ಷರದ ಅರಿವು ಗೊತ್ತಿರದ ಅನಕ್ಷರಸ್ಥ ೭೫ ವರ್ಷದ ದಾಖಲೆ ಇಡಲು ಹೇಗೆ ಸಾಧ್ಯ? ಸರ್ಕಾರದ ಈ ಅಧಿನಿಯಮವನ್ನು ಕನಿಷ್ಟ ೨೫ ವರ್ಷ ಗಳಿಗೆ ಸೀಮಿತಗೊಳಿಸಿ ಅರಣ್ಯ ವಾಸಿಗಳಿಗೆ ನ್ಯಾಯ ಕೊಡಿ ಎಂಬುದು ನನ್ನ ನಿರ್ಧಾರವಾಗಿದೆ. ಇಲ್ಲವಾದಲ್ಲಿ ಅವರ ಬದುಕು ಅತಂತ್ರವಾಗಿಯೇ ಸಾಗುತ್ತದೆ.
ಸಾವು ಬದುಕುಗಳು ಸಮಾನ ವಾಗಿರುವ ನಮ್ಮ ಜೀವನದಲ್ಲಿ ಮೇಲು ಕೀಳೆಂಬುದಿಲ್ಲ . ನಾವು ಜತಿ, ಧರ್ಮದ ಯಾವ ಭಾವನೆಯೂ ಇಲ್ಲದ ಬಿಳಿಯ ಹೂವುಗಳು.ಪಕ್ಷ,ರಾಜಕೀಯದ ಬಗ್ಗೆ ಯೋಚನೆಯೇ ಇಲ್ಲದ ಮಂತ್ರ ಮುಗ್ಧರು.ಆದರೆ ಇತ್ತೀಚೆಗೆ ಶಾಲಾ ಪಠ್ಯ ಪುಸ್ತಕದ ವಿಷಯದಲ್ಲಿ ಆಗಿರುವ ಗೊಂದಲಗಳನ್ನು ನಾನು ಅರಿತಿದ್ದೇನೆ. ಈ ಪಠ್ಯ ರಚನೆಯಲ್ಲಿ ಜತಿ, ಧರ್ಮಗಳನ್ನು ತಂದು ವಿಷ ಬೀಜವನ್ನು ಬಿತ್ತಿ, ನಮ್ಮೊಳಗೆ ಆತಂಕವನ್ನು ಸೃಷ್ಠಿಸುವ ಮನಸ್ಸು ಗಳು ಹೆಚ್ಚಾಗಿವೆ. ಈ ಸಮ್ಮೇಳನದ ಮೂಲಕ ನಾನು ತಿಳಿಸಲು ಇಚ್ಚಿಸುತ್ತೇನೆ. ಶಾಲಾ ಪಠ್ಯದ ವಿಷಯದಲ್ಲಿ ರಾಜಕೀಯ ಸಲ್ಲದು . ಪಠ್ಯವನ್ನು ಪಕ್ಷ ಆಧಾರಿತವಾಗಿ ಬದಲಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು.ಪಕ್ಷದ ಹೊರತಾದ ಒಂದು ಸ್ವತಂತ್ರ ಸಮಿತಿ ಅಥವಾ ಆಯೋಗವನ್ನು ರಚಿಸುವಂತಾಗ ಬೇಕು ಎಂಬುದು ನನ್ನ ಕಳಕಳಿಯಾಗಿದೆ. ಪ್ರೌಢ ಶಾಲೆಗಳಲ್ಲಿ ಕನಿಷ್ಟ ಎರಡು ಜನ ಶಿಕ್ಷಕಿಯರು ಇರುವ ಅಗತ್ಯ ಹಾಗೂ ಅನಿವಾರ್ಯವಿದೆ. ಹದಿಹರೆಯ ಎನ್ನುವುದು ಬದುಕಿನ ಬಹಳ ಮುಖ್ಯ ಕ್ಷಣ. ಆ ಹೊತ್ತಿನಲ್ಲಿ ನಮ್ಮ ದೇಹದಲ್ಲಿ ಬಹಳ ವ್ಯತ್ಯಾಸ ಆಗುವ ವಯಸ್ಸು. ಈವಯೋಮಾನದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ನಾವು ಬದಲಾಗುತ್ತೇವೆ. ಪ್ರೌಢ ಶಾಲೆಯ ಓದಿನ ಪ್ರತಿ ಕ್ಷಣವೂ ಸೂಕ್ಷ್ಮ ಸಂವೇದನೆಯ ಗಳಿಗೆಗಳು. ಸಾಮಾನ್ಯವಾಗಿ ಹಳ್ಳಿಯ ಬಹಳಷ್ಟು ಫ್ರೌಢ ಶಾಲೆಗಳಲ್ಲಿ ಶಿಕ್ಷಕರೇ ತುಂಬಿ ಹೋಗಿzರೆ. ಶಿಕ್ಷಕಿಯರು ಇರು ವುದು ಕಡಿಮೆ. ಅಂದರೆ ಗಂಡಸರ ಜಗತ್ತಿನಲ್ಲಿ ಹೆಣ್ಣು ತಬ್ಬಲಿ ಆಗಿರುವ ವ್ಯವಸ್ಥೆ ಇದು. ಇದು ಬಹಳ ಸೂಕ್ಷ್ಮ ವಿಚಾರ ಒಬ್ಬಳು ಹದಿ ಹರೆಯದ ನಾಚಿಕೆಯ ಮುz ಆಗಿರುವ ಹುಡುಗಿ ತನ್ನ ದೈಹಿಕ ಮಾನಸಿಕ ಕಷ್ಟಗಳನ್ನು ಹೇಗೆ ತಾನೆ ಶಿಕ್ಷಕರ ಜೊತೆ ಹೇಗೆ ಹೇಳಿಕೊಂಡಾಳು? ಈ ಕಾರಣಕ್ಕೆ ನಾನು ಸರ್ಕಾರವನ್ನು ಒತ್ತಾಯಿಸುವೆ. ದಯಮಾಡಿ ಪ್ರತಿ ಶಾಲೆಯ ಹುzಯ ನೇಮಕಾತಿ ಮಾಡುವಾಗ ಕನಿಷ್ಟ ಇಬ್ಬರು ಶಿಕ್ಷಕಿಯನ್ನಾದರೂ ಪ್ರತಿ ಶಾಲೆಯಲ್ಲಿ ಇರುವ ಹಾಗೆ ಮಾಡಿ. ಇದು ಸಮಾನತೆಯ ಹಾದಿಯೂಕೂಡ ಹೌದು ಎಂದು ಅಭಿಪ್ರಾಯಿಸಿದರು
ಏಕರೂಪದ ಶಿಕ್ಷಣ ವ್ಯವಸ್ಥೆ ಜರಿಯಾಗಲಿ.ಕನ್ನಡ ಕನ್ನಡ ಎಂದು ಇಂಗ್ಲೀಷನ್ನು ಅಲ್ಲಗಳೆಯುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷನ್ನು ಒಂದನೇ ತರಗತಿಯಿಂದ ಕಲಿಸುವ ವ್ಯವಸ್ಥೆ ಜರಿಯಾಗಬೇಕು. ನನ್ನೂರಿನ ದ್ವೀಪದಂತಹ ಶಾಲೆ ಗಳಿಗೂ, ಶಿವಮೊಗ್ಗದ ಪಟ್ಟಣದ ಶಾಲೆಯ ಕಲಿಕೆಗೂ ಬಹಳ ಅಂತರವಿದೆ.ಏಕರೂಪದ ಶಿಕ್ಷಣ ವ್ಯವಸ್ಥೆ ಜರಿಯಾಗಲಿ ಎಂಬುದು ನನ್ನ ಆಶಯ ಎಂದರು.
ಬದುಕಿನ ಪಾಠ ಹೇಳುವ ಮೇಷ್ಟರು ಬೇಕಾಗಿzರೆ. ಇಂದು ನನ್ನ ಹಾಗೂ ನನ್ನಂತಹ ಹದಿಹರೆ ಯದ ಅನೇಕ ಮನಸ್ಸುಗಳ ಭಾವನೆ ಗಳನ್ನು ಇಲ್ಲಿವ್ಯಕ್ತಪಡಿಸುತ್ತಿ ದ್ದೇವೆ. ಆದರೆ, ಶಾಲೆಗಳು ಮನಸ್ಸಿನ ಮಾತಿಗೆ ಬೆಲೆಕೊಡದೇ ಬರೇ ಅಂಕಗಳಿಕೆಯ ಜೈಲು ಕೋಣೆಗಳಾಗಿವೆ. ನಮಗೆ ಮಾನವೀಯತೆಯ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ನಮ್ಮ ತಲೆಯಲ್ಲಿ ಅಂಕಗಳಿಕೆಯ ಬೀಜವನ್ನು ಬಿತ್ತಿ ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುತಿ zರೆ. ಈ ಸಮ್ಮೇಳನದ ಮೂಲಕ ಕೇಳಿಕೊಳ್ಳುತ್ತೇನೆ, ನಮಗೆ ಬದುಕಿನ ಪಾಠ ಹೇಳುವ ಮೇಷ್ಟರು ಬೇಕಾಗಿzರೆ. ನನ್ನ ಪೋಷಕರನ್ನೂ ಸೇರಿಸಿ ಇಲ್ಲಿ ಸೇರಿದ ಎಲ್ಲರಲ್ಲಿ ವಿನಂತಿಸುತ್ತೇನೆ, ನಮಗೆ ಬದುಕಿನ ಪಾಠ ಕೇಳುವ ಗುರುಗಳನ್ನು ತಂದುಕೊಡಿ. ಸಮ್ಮೇಳನದ ಆಶಯಗಳು ಜರಿಯಾಗಲಿ. ಆತ್ಮೀಯರೇ, ನನ್ನ ಮನದಾಳದ ಇಷ್ಟು ವಿಷಯಗಳನ್ನು ಇಲ್ಲಿ ತೋಡಿ ಕೊಂಡಿದ್ದೇನೆ. ಈಗ ನಡೆಯುತ್ತಿರುವುದು ೧೯ನೇ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ. ಆದರೆ, ಈ ಹಿಂದೆ ನಡೆದ ೧೮ ಸಮ್ಮೇಳನಗಳ ಯಾವ ಒತ್ತಾಯ ಗಳನ್ನೂ ಸರ್ಕಾರ ಈಡೇರಿಸಲೇ ಇಲ್ಲ. ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಮಕ್ಕಳ ಗ್ರಾಮಸಭೆಯ ನಿರ್ಣಯಗಳಿಗೆ ಸರ್ಕಾರ ಹೆಚ್ಚು ಒತ್ತುಕೊಡಲಿ ಎಂದು ಈ ಸಮ್ಮೇಳ ನದ ಮೂಲಕ ಆಗ್ರಹಿಸುತ್ತೇನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಪೂಜ್ಯಶ್ರೀ ಪ್ರಸನ್ನನಾಥ ಸ್ವಾಮಿಜಿಯವರು ಮಾತನಾಡಿ, ಶಿವಮೊಗ್ಗ ಜಿ ಕುವೆಂಪು, ಲಂಕೇಶ್, ಶಿವರುದ್ರಪ್ಪ ಅನಂತಮೂರ್ತಿಗಳಂತಹ ಮಹಾನ್ ಸಾಹಿತಿಗಳ ನೆಲವಾಗಿದೆ. ಇದು ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತ ಜಿ ದೇಶಕ್ಕೆ ಮಾದರಿ ಯಾಗಿದೆ ಇಂತಹ ಜಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಮಕ್ಕಳ ಮನಸ್ಸುಗಳ ಮೂಲಕ ಉತ್ತಮವಾದ ಸಾಹಿತ್ಯದ ಸಂಸ್ಕಾರ ವನ್ನು ಬೆಳಸಬೇಕಾಗಿದೆ. ದಾರ್ಶಕ ರನ್ನು ಅರಿತುಕೊಳ್ಳುವ ಮೂಲಕ ನಮ್ಮ ನಾಡಿನ ಪರಂಪರೆಯನ್ನು ವಿಶ್ವಕ್ಕೆ ಸಾರುವ ಕೆಲಸ ಎರಿಂ ದಲೂ ಆಗಬೇಕಾಗಿದೆ ಆ ನಿಟ್ಟಿನಲ್ಲಿ ಜಿಯ ಡಿ.ಮಂಜುನಾಥ ಕಳೆದ ಅನೇಕ ವರ್ಷಗಳಿಂದ ಸಮ್ಮೇಳನ ಗಳನ್ನು ನಿರಂತರವಾಗಿ ನಡೆಸಿ ಕೊಂಡು ಬರುತ್ತಿರವುದು ಶ್ಲಾಘನಿಯವಾಗಿದೆ ಎಂದರು.
ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಪ್ರಾಶ್ತಾವಿಕವಾಗಿ ಮಾತನಾಡಿದರು. ಇದೆ ಸಂದರ್ಭ ದಲ್ಲಿ ಭವ್ಯ ಸುಧಾಕರ ಜಗಮನಿ ಇವರ ಪುಟಾಣಿ ಸಂಚಯ ಕೃತಿ ಯನ್ನು ಬಿಡುಗಡೆ ಮಾಡಲಾ ಯಿತು. ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾ ಸಂಸ್ಥೆಯ ಶೋಭಾ ವೆಂಕಟರಮಣ, ಅನನ್ಯ ಶಿಕ್ಷಣ ಸಂಸ್ಥೆಯ ಅನನ್ಯ ಗಿರೀಶ್, ಆಕ್ಸ್ಫರ್ಡ್ ಸಂಸ್ಥೆಯ ಡಿ.ಆರ್. ಶ್ರೀನಿವಾಸ್, ಬಿ.ಜಿ.ಎಸ್.ಶಿಕ್ಷಣ ಸಂಸ್ಥೆಯ ಡಿ.ವಿ.ಸತೀಶ್ ಹಾಗೂ ಪ್ರಮುಖರಾದ ಸುಧಾಮಣಿ ವೆಂಕಟೇಶ್, ಕಸ್ತೂರಿ ಸಾಗರ, ಶಂಕರ್ ಶೇಟ್, ರಾಘವೇಂದ್ರ ನಗರ, ಭಾರತಿ ರಾಮಕಷ್ಣ, ಮಧುಸೂದನ್ ಐತಾಳ್, ಭೈರಾಪುರ ಶಿವಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಾನ್ವಿ ಮತ್ತು ತಂಡದವರು ನಾಡಗೀತೆ ಹಾಡಿದರು, ತನ್ಮಯ್ ಮತ್ತು ಸಂಗಡಿಗರು ಪ್ರಾರ್ಥಿಸಿದರು, ದರ್ಶಿನಿ ಸ್ವಾಗತಿಸಿ ವಿದ್ಯಾಶ್ರೀ ವಂದಿಸಿ, ಮಲ್ಯ ಮತ್ತು ನಿರಂಜನ ನಿರೂಪಿಸಿದರು.