ಚಂದ್ರಯಾನದಿಂದ ಭಾರತ ಹೆಸರು ಚಿರಸ್ಥಾಯಿ: ಸ್ವಾಮೀಜಿ

ಹೊಳೆಹೊನ್ನೂರು : ಚಂದ್ರಯಾನದ ಮೂಲಕ ಭಾರತೀಯ ವಿeನಿಗಳು ಇಡೀ ಭಾರತ ದೇಶಕ್ಕೆ ಹೆಮ್ಮೆ ತಂದಿzರೆ. ಭಾರತ ಹೆಸರನ್ನು ಚಿರಸ್ಥಾಯಿಯಾಗಿ ಸಿzರೆ ಎಂದು ಉತ್ತರಾದಿ ಮಠಾ ಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಪ್ರಾತಿನಿಧಿಕವಾಗಿ ಇಲ್ಲಿ ಕೆಲ ವಿeನಿಗಳನ್ನು ಮಾತ್ರ ಸನ್ಮಾನಿಸಲಾಗಿದೆ. ಚಂದ್ರಯಾನದ ಸಫಲತೆಗೆ ಕಾರಣಕರ್ತರಾದ ಎಲ್ಲ ವಿeನಿಗಳನ್ನೂ ನಾವು ಅಭಿನಂದಿ ಸುತ್ತಿದ್ದೇವೆ. ಇಲ್ಲಿ ವಿeನಿಗಳು ತಮ್ಮ ಅಭಿಪ್ರಾಯ ಹೇಳುವಾಗ ಕೇವಲ ವಿeನಿಗಳಾಗಿ ಹೇಳದೆ ತತ್ವeನ ಪೂರ್ವಕವಾಗಿ ಮಾತನಾಡಿzರೆ. ಎಲ್ಲವೂ ಆಗಿದ್ದು ದೇವರ ಅನುಗ್ರಹ ದಿಂದ ಎಂಬ ಅವರ ಮಾತು ಸತ್ಯವಾದದ್ದು ಎಂದರು.
ಚಂದ್ರನ ದಕ್ಷಿಣ ಧೃವಕ್ಕೆ ಇದುವರೆಗೂ ಯಾವ ದೇಶಗಳಿಗೂ ಹೋಗಲು ಸಾಧ್ಯವಾಗಿಲ್ಲ. ಆದರೆ ನಮ್ಮ ವಿeನಿಗಳು ಈ ಸಾಧನೆ ಮಾಡಿರುವುದು ವಿಶೇಷ. ವಿeನಿ ಗಳ ಪರಿಶ್ರಮಕ್ಕೆ ನಾವು ಅಭಿನಂದಿಸ ಬೇಕು. ದೇವರು ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಅನುಗ್ರಹಿಸಲಿ ಎಂದರು.
ಎಲ್ಲ ಕ್ಷೇತ್ರದಲ್ಲಿ ವಿಪ್ರರ ಸಾಧನೆ : ಪಂಡಿತ ಪೂಜ್ಯರಾದ ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಮಾತನಾಡಿ, ವೈದ್ಯಕೀಯ, ವಿeನ, ರಾಜಕೀಯ, ಆಡಳಿತ, ನ್ಯಾಯಾಂಗ ಹಾಗೂ ಐಟಿಬಿಟಿ ಹೀಗೆ ಎಲ್ಲ ರಂಗಗಳಲ್ಲೂ ಬ್ರಾಹ್ಮಣ ಸಮಾಜದ ಕೊಡುಗೆ ಸಾಕಷ್ಟು ಇದೆ. ಏನಾದರೂ ವಿಶೇಷತೆ ನಡೆದಿದ್ದರೆ ಅಲ್ಲಿ ಬ್ರಾಹ್ಮಣರ ಪಾತ್ರ ಇದ್ದೇ ಇರುತ್ತದೆ. ಅದಕ್ಕೆ ಪ್ರಧಾನವಾದ ಕಾರಣ ಗಾಯತ್ರಿ ಮಂತ್ರದ ಸಿದ್ಧಿ ಎಂದರು.
ಇಡೀ ವಿಶ್ವವೇ ಆಶ್ಚರ್ಯ ಪಡುವಂತಹ ಸುದ್ದಿಗೆ ಕಾರಣರಾ ದವರು ಇಲ್ಲಿಗೆ ಬಂದಿರುವ ವಿeನಿಗಳು. ಇದು ಅವರ ಒಂದೆರಡು ದಿನಗಳ ಫಲವಲ್ಲ. ಅನೇಕ ವರ್ಷಗಳ ಸಾಧನೆಯ ಫಲ. ಚಂದ್ರಯಾನದ ಯಶಸ್ಸು ಕಂಡವರು ಈಗ ಮೂಲ ರಾಮಚಂದ್ರ ದೇವರ ದರ್ಶನಾಶೀರ್ವಾದಕ್ಕೆ ಬಂದಿzರೆ ಎಂದರು.
ಕಾರ್ಯಕ್ರಮದಲ್ಲಿ ವಿeನಿ ಗಳಾದ ಪ್ರೋಗ್ರಾಂ ಡೈರೆಕ್ಟರ್ ವಿ.ಆರ್. ಕಟ್ಟಿ, ಡೆಪ್ಯುಟಿ ಡೈರೆಕ್ಟರ್‌ಗಳಾದ ಡಾ.ಎಂ. ರವೀಂದ್ರ, ರಂಗನಾಥ ಎಕ್ಕುಂಡಿ, ಸುಬ್ರಹ್ಮಣ್ಯ ಉಡುಪ, ಡಾ.ಜಿ. ನಾಗೇಶ್, ಗ್ರೂಪ್ ಡೈರೆಕ್ಟರ್‌ಗಳಾದ ವೈ. ಎಲ್. ಮಧುಸೂಧನ್, ರಾಜೇ ಂದ್ರ ಕುಮಾರ್, ಬಿ.ಎಸ್. ಶ್ರೀನಿ ವಾಸ್, ಜಯಸಿಂಹ, ಪ್ರಮೋದ್ ಬೆಳಗೋಂಕರ್, ಎಂ.ಎಸ್. ಶ್ರೀನಿಧಿ ಭಾಗವಹಿಸಲಿzರೆ.
ಈ ಪೈಕಿ ಕೆಲವರು ಮಾತನಾಡಿ ದೇವರು ಹಾಗೂ ಗುರುಗಳ ಅನುಗ್ರಹದಿಂದ ಇದೆಲ್ಲವೂ ಸಾಧ್ಯವಾಯಿತು ಎಂದು ಅಭಿ ಪ್ರಾಯ ವ್ಯಕ್ತಪಡಿಸಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾ ಚಾರ್ಯ, ನವರತ್ನ ರಾಮಾ ಚಾರ್ಯ, ಕಡೂರು ಮಧು ಸೂಧ ನಾಚಾರ್ಯ, ರಘೂತ್ತಮಾ ಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್, ಮುರಳಿ, ಸತ್ಯನಾ ರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.