ಶ್ರೀ ಭಗೀರಥ ಜಯಂತಿ ಆಚರಣೆ…
ಶಿವಮೊಗ್ಗ : ಚುನಾವಣಾ ನೀತಿ ಸಂಹಿತೆ ಜರಿ ಹಿನ್ನೆಲೆಯಲ್ಲಿ ಜಿಡಳಿತದ ವತಿಯಿಂದ ಶ್ರೀ ಭಗೀರಥ ಜಯಂತಿಯನ್ನು ಇಂದು ನಗರದ ಕುವೆಂಪು ರಂಗಮಂದಿರದ ಹೊರ ಆವರಣದಲ್ಲಿ ಶ್ರೀ ಭಗೀರ ಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾ ಯಿತು.
ಈ ವೇಳೆ ಜಿ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಟಿ. ಹಾಲಪ್ಪ, ಜಿ ಖಜಂಚಿ ಮತ್ತು ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಸೇವಾದಳದ ಮುಖ್ಯಸ್ಥ ವೈ.ಹೆಚ್.ನಾಗರಾಜ್, ಸಮಾಜದ ಮುಖಂಡರಾದ ಮುರಳಿ.ಹೆಚ್. ಸಣ್ಣಕ್ಕಿ, ಪ್ರಸನ್ನ ಕುಮಾರ್.ಎಸ್.ಡಿ, ಎಸ್.ಕೆ. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಇತರರು ಪಾಲ್ಗೊಂಡಿದ್ದರು.