ಸಂಭ್ರಮದಿಂದ ಜರುಗಿದ ಶ್ರೀ ವೀರಭದ್ರೇಶ್ವರಸ್ವಾಮಿ ಶರಬಿ ಗುಗ್ಗಳ…

14NMT1a

ನ್ಯಾಮತಿ : ನ್ಯಾಮತಿ ಪಟ್ಟಣದ ಶ್ರೀ ವೀರಭದ್ರೇ ಶ್ವರ ಸ್ವಾಮಿಯ ಶರಬಿ ಗುಗ್ಗಳ ಸಂಭ್ರಮದಿಂದ ನೆರವೇರಿತು.
ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಸ್ವಾಮೀಯ ಶರಬಿ ಗುಗ್ಗಳದ ಅಂಗವಾಗಿ ಮುಂಜನೆ ಮುತ್ತೈದೆ ಯರಿಂದ ಗಂಗಾಪೂಜೆ ನೆರವೇರಿಸಿ, ಶ್ರೀ ವೀರಭದ್ರೇಶ್ವರ ಸ್ವಾಮೀಯ ಮೂರ್ತಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಜನೆ, ವಿವಿಧ ಧಾರ್ಮಿಕ ಕಾರ್‍ಯಕ್ರಮಗಳು ಪುರೋಹಿತರ ಮಂತ್ರ ಘೋಷಗಳೊಂದಿಗೆ ನಡೆಯಿತು.
ಶ್ರೀ ವೀರಭದ್ರೇಶ್ವರಸ್ವಾಮೀಯ ಶರಬಿ ಗುಗ್ಗಳ ನ್ಯಾಮತಿ ಪುರಂವಂತರ ಪುರವಂತಿಕೆಯಲ್ಲಿ ಸಕಲವಾದ್ಯ ಮೇಳದೊಂದಿಗೆ ಶ್ರೀವೀರಭದ್ರೇಶ್ವರಸ್ವಾಮಿಯ ಮತ್ತು ಶ್ರೀ ಆಂಜನೇಯ ಉತ್ಸವಮೂರ್ತಿ ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪುಗಳನ್ನು ಹಾಡುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹರಕೆ ಹೊತ್ತ ಮಹಿಳೆಯರು-ಪುರುಷರು ಶ್ರz ಭಕ್ತಿಯ ಪೂಜೆಸಲ್ಲಿಸಿ ಬಾಯಿಬೀಗ, ಕೈಗೆ (ಶಸ್ತ್ರವನ್ನು) ಹಾಕಿಕೊಂಡು ವೀರಗಾಸಿ ಹಾಗೂ ಮಂಗಳ ವಾದ್ಯ ಗಳೊಂದಿಗೆ ನಡೆದು ಪಟ್ಟಣದ ಶ್ರೀ ಬನಶಂಕರಿ ದೇಗುಲದಲ್ಲಿ ಶರಬಿ ಗುಗ್ಗಳವನ್ನು ವಿಸರ್ಜಿಸಲಾಯಿತು. ದೇಗುಲದ ಸೇವಾ ಸಮಿತಿಯ ಪದಾಧಿಕಾರಿಗಳು, ಸೇರಿದಂತೆ ಭಕ್ತರು ಭಾಗವಹಿಸಿದ್ದರು.