ಶ್ರೀ ಪ್ರಸನ್ನ ಗಣಪತಿ ದೇವಳದಲ್ಲಿ ಶ್ರೀ ಶರನ್ನವರಾತ್ರೋತ್ಸವ…

ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ದೇವಳದ ಆವರಣ ದಲ್ಲಿ ಅ.೧೫ ರಿಂದ ಅ.೨೯ರವರೆಗೆ ಶ್ರೀ ಶರನ್ನ ವರಾತ್ರೋತ್ಸವ ಹಮ್ಮಿಕೊಳ್ಳ ಲಾಗಿದೆ ಎಂದು ಹಾಗೂ ದೇವಳ ಸಮಿತಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.


ಈ ಬಾರಿಯ ವಿಶೇಷ ಎಂದರೆ ಶ್ರೀ ಧನಲಕ್ಷ್ಮಿ ದೇವಿಯ ಅಲಂಕಾ ರವಾಗಿದೆ. ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿದೆ. ದುರ್ಗಾದೇವಿಯನ್ನು ಒಂದೊಂದು ದಿನ ಒಂಭತ್ತು ರೂಪ ಗಳಲ್ಲಿ ವಿಶೇಷವಾಗಿ ಪೂಜಿಸಲಾಗು ತ್ತದೆ. ೧೦ನೆ ದಿನ ವಿಜಯದಶಮಿ ಆಚರಿಸಲಾಗುತ್ತದೆ. ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕಳೆದ ೩೨ ವರ್ಷ ಗಳಿಂದ ಶರನ್ನವರಾತ್ರಿ ಆಚ ರಿಸುತ್ತಾ ಬಂದಿದ್ದೇವೆ ಎಂದರು.
ಈ ಬಾರಿಯೂ ಕೂಡ ಅ.೧೫ ರಂದು ಪ್ರಾರಂಭವಾಗಿ, ಅ.೨೮ ರಂದು ಸಮಾರೋಪಗೊಳ್ಳುತ್ತದೆ. ಅ.೨೯ ರಂದು ರಾಜಬೀದಿ ಉತ್ಸವ ವಿರುತ್ತದೆ. ಈ ಉತ್ಸವದಲ್ಲಿ ಧನಲಕ್ಷ್ಮಿ ದೇವಿಯ ಭವ್ಯ ಮೆರವ ಣಿಗೆ ನಡೆಯುತ್ತದೆ. ಪ್ರತಿದಿನವೂ ವಿಶೇಷ ಹೋಮ, ಹವನ, ಯಾಗ ಗಳು ನಡೆಯುತ್ತವೆ. ಜೊತೆಗೆ ಪ್ರತಿ ದಿನ ಸಂಜೆ ೬ರಿಂದ ೬.೩೦ರವರೆಗೆ ಸಾಂಸ್ಕೃತಿಕ ಕಾರ್ಯ ಕ್ರಮಗಳಿದ್ದು, ಇದರ ಉದ್ಘಾಟನೆ ಯನ್ನು ಅ.೧೫ ರ ಸಂಜೆ ೬ಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಉದ್ಘಾಟಿ ಸುವರು ಎಂದರು.
ಅ.೨೮ರಂದು ಶತಚಂಡಿಕಾ ಯಾಗ, ಸಾಮೂಹಿಕ ಸತ್ಯನಾರಾ ಯಣ ಪೂಜೆ ಹಾಗೂ ಸಂಜೆ ಭಜನೆ ಕಾರ್ಯಕ್ರಮ ಗಳನ್ನು ಆಯೋಜಿ ಸಲಾಗಿದೆ.
ಅ.೧೫ರಿಂದ ಪ್ರತಿದಿನ ನಡೆ ಯುವ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಜನೆ, ಸತ್ಸಂಗ, ಸುಗಮ ಸಂಗೀತ, ಹರಿ ಕಥೆ, ರಾಮ ಸ್ಮರಣೆ, ವೀಣಾ ವಾದನ, ಸ್ಯಾಕ್ಸೋಫೋನ್ ವಾದನ, ಯಕ್ಷಗಾನ, ಗಮಕ ವಾಚನ, ಭರತನಾಟ್ಯ ಕಾರ್ಯ ಕ್ರಮಗಳಿವೆ ಎಂದರು.
ಅ.೨೮ರಂದು ಶತಚಂಡಿಕಾ ಯಾಗದಲ್ಲಿ ೧೫ಕ್ಕೂ ಹೆಚ್ಚು ಪುರೋಹಿತರು ಭಾಗವಹಿಸ ಲಿದ್ದು, ೧ಲಕ್ಷ ಜಪ ಮಾಡುತ್ತಾರೆ. ೧೦೦ ಸುವಾಸಿನಿಯರಿಗೆ ಬಾಗಿನ ನೀಡುತ್ತಾರೆ. ನಂತರ ಸಂಜೆ ೪-೩೦ಕ್ಕೆ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ಅಮ್ಮನವರನ್ನು ವಿಸರ್ಜಿಸಲಾಗುವುದು ಎಂದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಪ್ರಮುಖರಾದ ಎನ್. ಉಮಾಪತಿ, ಸ.ನಾ. ಮೂರ್ತಿ, ಶಬರೀಶ್ ಕಣ್ಣನ್, ಶಂಕರ್ ಭಟ್, ವಿನಾಯಕ ಬಾಯರಿ ಇದ್ದರು.