ಶಿಕಾರಿಪುರ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಮುಂಚೂಣಿಗೆ ಬಂದ ಯುವ ವಕೀಲ ಚಂದ್ರಕಾಂತ ಪಾಟೀಲ..

ಚಂದ್ರಕಾಂತ್ ಪಾಟೀಲ ಲಿಂಗಾಯತ ಸಮುದಾಯದವರು. ಈ ಸಮುದಾಯಕ್ಕೆ ಸೇರಿದ್ದರೂ ಎಲ್ಲರೊಳ ಗೊಂದಾಗುವ ಎ ಸಮುದಾಯ ಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿzರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ರಾಜಕೀಯವಾಗಿ ಧುಮುಕಬೇಕು. ಕೈಪಕ್ಷದ ಬಲ ಪಡಿಸಬೇಕು. ಶಿಕಾರಿಪುರ ಕ್ಷೇತ್ರಕ್ಕೆ ಜನಧ್ವನಿಯಾಗಬೇಕು, ಹೊಸ ಬದಲಾವಣೆಗಳನ್ನು ತರಬೇಕೆಂದು ಚಂದ್ರಕಾಂತ್ ಪಾಟೀಲ ಉತ್ಸುಕರಾಗಿzರೆ. ಯುವ ಸಮುದಾಯವನ್ನು ಪ್ರತಿನಿಧಿಸುವ ಚಂದ್ರಕಾಂತ್ ಪಾಟೀಲ್ ಅವರಿಗೆ ಹಿರಿಯಕಿರಿಯರ ಮೇಲೂ ಗೌರವ ಪ್ರೀತಿ ಇದೆ. ಎಲ್ಲರನ್ನೂ ಸಮಾನ ಮನಸ್ಕರಾಗಿ ಕಾಣುತ್ತಾರೆಂದರೆ ಬಹುಶಃ ಅತಿಶಯೋಕ್ತಿಯಾಗಲಾರದು.
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಟಾಪ್ ೩ ಪಟ್ಟಿಯಲ್ಲಿ ಇವರ ಹೆಸರೂ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುತ್ತಾರೆನ್ನುವ ಮಾತನ್ನು ತೆಗೆದುಹಾಕುವ ಯಾವುದಕ್ಕೂ ಹಿಂದೇಟು ಹಾಕದೇ ಧೈರ್ಯವಾಗಿ ಚುನಾವಣೆಯನ್ನು ಎದುರಿಸುತ್ತೇನೆ ಎನ್ನುವ ದಿಟ್ಟತನ ಇವರದ್ದು.
ಚಂದ್ರಕಾಂತ್ ಪಾಟೀಲರ ಹಿನ್ನಲೆಯನ್ನು ನೋಡುವುದಾದರೆ, ಇವರ ಕುಟುಂಬವೂ ಕಾಂಗ್ರೆಸ್ ಹಿನ್ನಲೆಯುಳ್ಳ ಪಕ್ಷ-ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ಚಂದ್ರಕಾಂತ್ ಪಾಟೀಲ್, ಅವರ ತಂದೆ-ತಾಯಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯಲ್ಲಿ ಸೇರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ ನಂತರ ರಕ್ತದ ಹೋರಾಟ ಹಾಗು ನ್ಯಾಯದ ಪರ ಧ್ವನಿ ಎತ್ತುವ ಮನೋಭಾವದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಚಿಕ್ಕಂದಿನಿಂದ ಸಮಾಜ ಸೇವೆ ಮಾಡುತ್ತಿzರೆ.
ತಂದೆ ಮತ್ತು ತಾಯಿ ಇಬ್ಬರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ಶಿಕಾರಿಪುರ ಪುರಸಭೆಯ ಮಾಜಿ ಅಧ್ಯಕ್ಷರಾಗಿ ಮತ್ತು ೧೯೯೭ ರಿಂದ ೨೦೦೪ ರವರೆಗೆ ಶಿವ ಸಹಕಾರಿ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರಾಗಿ, ಬಸವಾಶ್ರಮದ ನಿರ್ದೇಶಕರಾಗಿ, ಸತ್ಯಕ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಾತೆಯ ಮಡಿಲು ಕೇಂದ್ರದ ಅಧ್ಯಕ್ಷರಾಗಿ, ಕದಳಿ ವೇದಿಯ ಅಧ್ಯಕ್ಷರಾಗಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆಯವರು ಶಿವ ಸಹಕಾರಿ ಬ್ಯಾಂಕ್ (ನಿ)ನ ಅಧ್ಯಕ್ಷರಾಗಿ ಮತ್ತು ಶ್ರೀ ಕಾನೂರು ವೀರಶೈವ ಸಮಾಜ, ಶಿಕಾರಿಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

೧೯೯೭ ರಿಂದ ನಡೆದ ಎ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕಾರಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ. ಏನ್. ಮಹಾಲಿಂಗಪ್ಪ, ಕೆ. ಶೇಖರಪ್ಪ, ಎಸ್. ಬಂಗಾರಪ್ಪ, ಎಚ್.ಎಸ್. ಶಾಂತವೀರಪ್ಪ ಗೌಡ ಮತ್ತು ಗೋಣಿ ಮಾಲತೇಶ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿzರೆ. ಅದೇ ರೀತಿ ಶಿವಮೊಗ್ಗ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್.ಬಂಗಾರಪ್ಪ, ಆಯನೂರು ಮಂಜುನಾಥ್ (ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿzಗ) ಮಂಜುನಾಥ ಭಂಡಾರಿ ಮತ್ತು ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿzರೆ.
ಇನ್ನು ಚಂದ್ರಕಾಂತ್ ಪಾಟೀಲರ ತಾಯಿ ೧೯೯೬ ರಿಂದ ೨೦೦೧ರ ಅವಧಿಯಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಮತ್ತು ೧೯೯೬ ರಿಂದ ೧೯೯೮ ರವರೆಗೆ ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿzರೆ. ೧೯೯೬ ಮತ್ತು ೧೯೯೭ರ ಅವಧಿಯಲ್ಲಿ ಶಿಕಾರಿಪುರದ ಶಿವ ಸಹಕಾರಿ ಬ್ಯಾಂಕ್ ಸಂಸ್ಥಾಪಕ ನಿರ್ದೇಶಕರಾಗಿ ಶಿಕಾರಿಪುರ ತಾಲೂಕಿನ ಹಳ್ಳಿ ಹಳ್ಳಿ ಗಳಿಗೆ ಓಡಾಡಿ ಬ್ಯಾಂಕನ್ನು ಸ್ಥಾಪಿಸುವಲ್ಲಿ ಮತ್ತು ಮತ್ತು ಬ್ಯಾಂಕ್‌ನ ಏಳಿಗೆಗೆ ಶ್ರಮವಹಿಸಿzರೆ.
೧೯೯೯ ರಿಂದ ೨೦೦೯ರ ಅವಧಿಗೆ ಶಿಕಾರಿಪುರ ಶರಣ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಶಿಕಾರಿಪುರದ ಶಿವ ಶರಣೆ ಸತ್ಯಕ್ಕ ಮಹಿಳಾ ಗೃಹ ಕೈಗಾರಿಕಾ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಶಿಕಾರಿಪುರ ತಾಲೂಕು ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಹಾಗು ೨೦೦೨ ರಿಂದ ೨೦೦೭ರ ಅವಧಿಯಲ್ಲಿ ಶಿಕಾರಿಪುರ ಬಸವಾಶ್ರಮದ (ಅನಾಥಾಶ್ರಮ)ದ ಸಂಸ್ಥಾಪಕ ನಿರ್ದೇಶಕರಾಗಿ ಹಾಗು ಶಿಕಾರಿಪುರ ತಾಲೂಕು ಮಾತೆಯ ಮಡಿಲು ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿ, ಶಿಕಾರಿಪುರ ತಾಲೂಕು ಕದಳಿ ಮಹಿಳಾ ವೇದಿಕೆಯ ನಿರ್ದೇಶಕರಾಗಿ, ಶಿಕಾರಿಪುರ ತಾಲೂಕಿನ ಮುಂಚೂಣಿ ಮಹಿಳಾ ನಾಯಕಿಯಾಗಿ ಸಭೆ ಮತ್ತು ಸಮಾರಂಭಗಳಿಗೆ ಆಹ್ವಾನಿತರಾಗಿ ತಾಲೂಕಿನ ಜನರಿಗೆ ಚಿರ ಪರಿಚಿತರಾಗಿ ಮಹಿಳೆ ಮತ್ತು ಮಕ್ಕಳು, ಹಾಗು ದುಃಖಿತ ಮತ್ತು ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ, ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮನದಲ್ಲಿ ಬೆರೆತಿzರೆ.
ಚಂದ್ರಕಾಂತ್ ಪಾಟೀಲರ ತಂದೆ ನಿಜಲಿಂಗಪ್ಪ ಗೌಡ ಕ. ಜಿ. ಇವರು ಶಿಕಾರಿಪುರ ಪಟ್ಟಣದ ಶಿವ ಸಹಕಾರಿ ಬ್ಯಾಂಕ್ (ನಿ) ನ ನಿರ್ದೇಶಕರಾಗಿ, ಮತ್ತು ಅಧ್ಯಕ್ಷರಾಗಿ ಹಾಗು ಶಿಕಾರಿಪುರ ಪಟ್ಟಣದ ಪ್ರತಿಷ್ಠಿತ ಶ್ರೀ ಕಾನೂರು, ವೀರಶೈವ ಸಮಾಜದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶಿಕಾರಿಪುರ ತಾಲೂಕಿನ ಮುಂಚೂಣಿ ನಾಯಕರಾಗಿ ಸಭೆ ಮತ್ತು ಸಮಾರಂಭಗಳಿಗೆ ಆಹ್ವಾನಿತರಾಗಿ ತಾಲೂಕಿನ ಜನರಿಗೆ ಚಿರ ಪರಿಚಿತರಾಗಿ ಮಹಿಳೆ ಮತ್ತು ಮಕ್ಕಳು ಹಾಗು ದುಃಖಿತ ಮತ್ತು ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ, ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮನದಲ್ಲಿ ಬೆರೆತಿzರೆ.
ಸಹೋದರ ಶ್ರೀಕಾಂತ ಪಾಟೀಲರು ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಕಾನೂನು ವಿಷಯದಲ್ಲಿ ಪದವೀಧರರಾಗಿದ್ದು, ವಕೀಲರಾಗಿ ಸೇವೆ ಸಲ್ಲಿಸುತ್ತಿzರೆ.