ಮಾರಿಕಾಂಬ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ
ಶಿವಮೊಗ್ಗ: ಗ್ರಾಮ ದೇವತೆ ಕೋಟೆ ಮಾರಿಕಾಂಬ ದೇವಾಲಯ ದಲ್ಲಿ ಅ.೧೫ ರಿಂದ ೨೪ ರವರೆಗೆ ಶರನ್ನವರಾತ್ರಿ ಉತ್ಸವ ಆಯೋಜಿಸ ಲಾಗಿದೆ. ನವರಾತ್ರಿಯ ಎ ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆಯ ಲಿದೆ.
ದೇವಿಗೆ ಒಂಬತ್ತು ದಿನಗಳ ಕಾಲ ಕ್ರಮವಾಗಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಯಂಡಾ, ಸ್ಕಂದಮಾತಾ, ಸರ ಸ್ವತಿ, ಕಾತ್ಯಾಯಿನಿ,ದುರ್ಗಾದೇವಿ, ಮಹಿಷಾಸುರ ಮರ್ದಿನಿ ಹಾಗೂ ಚಂಡಿಕಾ ದುರ್ಗಾಪರಮೇಶ್ವರಿ ಅಲಂಕಾರ ಮಾಡಲಾಗುವುದು.
ಅ.೨೨ ರಂದು ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ಚಂಡಿಕಾ ಹೋಮವಿದೆ. ಭಾಗವಹಿಸುವವರ ೧೦೧ ರೂ, ಪಾರಾಯಣ ಸೇವೆಗೆ ೪.೧, ಒಂದು ದಿನದ ಸರ್ವಸೇವೆಗೆ ೧೨೦೧, ಹೂವಿನ ಅಲಂಕಾರ ಸೇವೆಗೆ ೬೦೧, ಪ್ರಸಾದ ಸೇವೆಗೆ ೧೫೦೧ ರೂ.ಗಳನ್ನು ಮುಂಗಡ ವಾಗಿ ಪಾವತಿಸಿ ರಶೀದಿ ಪಡೆಯ ಬಹುದಾಗಿದೆ.
ನವರಾತ್ರಿ ಉತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋಟೆ ಮಾರಿಕಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.