ಶಂಕರ ಮಠದಲ್ಲಿ ಶಂಕರ ಜಯಂತಿ ಮಹೋತ್ಸವ….

ಶಂಕರ ಮಠದಲ್ಲಿ ಶಂಕರ ಜಯಂತಿ ಮಹೋತ್ಸವ….
ಶಿವಮೊಗ್ಗ : ನಗರದ ಶೃಂಗೇರಿ ಶಂಕರ ಮಠದಲ್ಲಿ ಏ.೨೧ ರಿಂದ ಏ.೨೫ ರವರೆಗೆ ಐದು ದಿನಗಳ ಕಾಲ ಶಂಕರ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರತಿ ದಿನವೂ ರುದ್ರಾ ಭಿಷೇಕ, ಶಂಕರ ವಿಜಯ ಪಾರಾಯಣ, ಶ್ರೀ ಶಂಕರ ಸ್ತೋತ್ರಮಾಲಾ ನಡೆಯಲಿದ್ದು, ಸಂಜೆ ವಿವಿಧ ಗಾಯನ ತಂಡಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ಗಳನ್ನು ಏರ್ಪಡಿಸಲಾಗಿದೆ. ಶಾರದಾ ಶಂಕರ ಭಜನಾ ಮಂಡಳಿಯಿಂದ ಶಾಂಕಾರ ಭಜನೆಗಳು, ವಿದುಷಿ ವಿಜಯಲಕ್ಷ್ಮಿ ರಘು ಶಿಷ್ಯ ವೃಂದದಿಂದ ವಾದ್ಯ ವೈವಿಧ್ಯ, ಸಮ್ಮಿತ್ ನಟೇಶ್ ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮತ್ತೂರು ಸನತ್ ಕುಮಾರ್ ಹಾಗೂ ವಿದ್ವಾನ್ ಅಚ್ಚುತ ಅವಧಾನಿಗಳಿಂದ ‘ಶಂಕರ ವಿಜಯ’ ಗಮಕ ವಾಚನ ವ್ಯಾಖ್ಯಾನ, ಹೆಚ್.ಎಸ್. ಸಂಭ್ರಮ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಶಂಕರಮಠದ ಸತ್ಸಂಗದಿಂದ ಶಂಕರ ದರ್ಶನ ಗೀತರೂಪಕ ಪ್ರದರ್ಶನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶಿವಮೊಗ್ಗ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಡಾ|| ಪಿ.ನಾರಾಯಣ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿzರೆ.