ಶಂಕರಗೌಡರ ಕಲಾ ಸೇವೆ ಶ್ಲಾಘನೀಯ: ಸ್ವಾಮೀಜಿ

kukanur

(ಹೊಸ ನಾವಿಕ ಸುದ್ಧಿ)
ಕುಕನೂರ : ನಿಸರ್ಗದ ಕಲೆಯನ್ನ ಸೃಷ್ಟಿ ಮಾಡಿದವರು ದೇವರು, ಆ ದೇವರನ್ನ ಸೃಷ್ಟಿ ಮಾಡಿದವ ಕಲಾವಿದ ಎಂದು ಗದಗ ಹಿರಿಯ ಸಾಹಿತಿ ಅನ್ನದಾನಿ ಹಿರೇಮಠ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಲಯ ಕಲಾ ಮನೆ ಗದಗ ಮತ್ತು ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ (ರಿ) ಇವರಿಂದ ನಡೆದ ೭೫ನೇ ರಂಗಭೂಮಿ ಕಲಾವಿದರ ಛಾಯಾಚಿತ್ರ ಮತ್ತು ಲೇಖನ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದರು.
ಇವತ್ತಿನ ವ್ಯಾಪಾರಿ ಮನೋಭಾವದ ಜನರಲ್ಲಿ ಇಂತಹ ಪ್ರದರ್ಶನಗಳಿಂದ ಏನು ಲಾಭವಿದೆ ಎನ್ನುತ್ತಾರೆ. ಆದರೆ ಇಂತಹ ಕಲಾ ಪ್ರದರ್ಶನದಿಂದ ಕಲಾವಿದರ ಕಲೆ ಮತ್ತು ಕಲಾವಿದರು ಜೀವಂತ ವಾಗಿರಿಸಲು ಸಾಧ್ಯವಾಗುತ್ತದೆ, ಕಲಾವಿದರ ಕಲೆಗೆ ಮಲ್ಯ ಕಟ್ಟಲು ಸಾಧ್ಯವಿಲ್ಲ. ಕಲಾವಿದರಿಗೆ ಕಲಾವಿದರೆ ಸಾಟಿ ಮತ್ತು ಕನ್ನಡ ನಾಡಿನ ಇತಿಹಾಸದಲ್ಲಿ ಕುಕನೂರ ಬಾಬಣ್ಣನವರ ಹೆಸರು ಅಜರಾಮರ ಎಂದು ಹೇಳಿದರು.
ಶ್ರೀಮಠದ ಪೂಜ್ಯ ಡಾ. ಮಹಾದೇವ ಸ್ವಾಮೀಜಿ ಮಾತನಾಡಿ, ಶಂಕರಗೌಡ ಅವರು ಸುಮಾರು ಮೂರು ದಶಕಗಳ ಕಾಲ ಕಲೆಯ ಸೇವೆಯನ್ನ ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ, ಇವರ ಸೇವೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸೂಕ್ತ ಗೌರವ ನೀಡಿ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಇವರ ಸೇವೆಯಿಂದ ಈ ನಾಡಿನ ಕಲಾವಿದರು ಜೀವಂತವಾಗಿರಲು ಸಾಧ್ಯವಾಗಿದೆ ಎಂದರು.
ಕಲಾವಿದ ಶರಣಬಸಪ್ಪ ದಾನಕೈ, ಪ್ರಮುಖರಾದ ಶಂಕರಗೌಡ, ರಾಮಣ್ಣ ಬೆದವಟ್ಟಿ, ಮಹಾದೇವಪ್ಪ ,ರಾಮಣ್ಣ ಇಟಗಿ, ಬಸಪ್ಪ ಬಂಗಿ, ನೀಲಕಂಠಯ್ಯ ಕಾಶೀಮಠ, ರಾಜು ಮಠ, ಅಮರೇಶ ಇನ್ನಿತರರಿದ್ದರು.