ಸೆ.೧೪ : ಶಾಹೀ ಗಾರ್ಮೆಂಟ್ಸ್ ಮುಂದೆ ರೈತರ ಪ್ರತಿಭಟನೆ

ಶಿವಮೊಗ್ಗ: ಮಾಚೇನ ಹಳ್ಳಿಯ ಕೈಗಾರಿಕಾ ವಲಯದಲ್ಲಿ ರುವ ಶಾಹಿ ಎಕ್ಸ್‌ಪೋರ್ಟ್‌ರವರ ಪರಿಸರ ಮಾಲಿನ್ಯದ ವಿರುದ್ಧ ಸೆ.೧೪ರಂದು ಬೆಳಿಗ್ಗೆ ೧೦ ಗಂಟೆಗೆ ಶಾಹಿ ಎಕ್ಸ್‌ಪೋರ್ಟ್ಸ್ ನ ಮುಖ್ಯ ದ್ವಾರದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಿದಿಗೆ ಮಾಚೇನಹಳ್ಳಿ ಪರಿಸರ ಸಂರಕ್ಷಣಾ ವೇದಿಕೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಹೆಚ್.ಸಿ. ಬಸವರಾಜಪ್ಪ, ಶಾಹಿ ಎಕ್ಸ್‌ಪೋರ್ಟ್ ಕೈಗಾರಿಕಾ ಸಂಸ್ಥೆ ಯು ಯಾವ ನಿಯಮಗಳನ್ನೂ ಪಾಲಿಸದೆ ಪರಿಸರಕ್ಕೆ ಹಾನಿ ಯುಂಟುಮಾಡುತ್ತಿದೆ. ಅವರ ಕಾರ್ಖಾನೆಯ ಚಿಮಣಿಯಿಂದ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ದೂಳು ಹಾಗೂ ಬಟ್ಟೆಗ ಳಿಗೆ ಅಳವಡಿಸುವ ಕಲರ್ ಡೈನಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದರು.
ಗಾರ್ಮೆಂಟ್ಸ್‌ನ ಕಲುಶಿತ ನೀರು ನಿದಿಗೆ ಹತ್ತಿರದ ಭದ್ರಾ ಎಡನಾಲಾ ಕಾಲುವೆಗೆ ಸೇರು ತ್ತದೆ.ಇದರಿಂದ ನಿದಿಗೆ, ಮಲವ ಗೊಪ್ಪ, ದುಮ್ಮಳ್ಳಿ ರೆಡ್ಡಿ ಕ್ಯಾಂಪ್, ಸೋಗಾನೆ, ಹಾರೋಘಟ್ಟ, ರಾಂಪುರ, ಕಾಚಿನಕಟ್ಟೆ, ಒಡ್ಡಿನ ಕೊಪ್ಪ, ಹರಿಗೆ, ಪುರಲೆ, ಗುರು ಪುರ ಸೇರಿದಂತೆ ಅನೇಕ ಹಳ್ಳಿಗಳ ಜನರಿಗೆ ತೊಂದರೆಯಾಗುತ್ತಿದೆ. ಆರೋಗ್ಯ ಸಂಪೂರ್ಣ ಹದಗೆ ಡುತ್ತಿದೆ ಎಂದು ದೂರಿದರು.
ರೈತಮುಖಂಡ ವೆಂಕಟೇಶ್ ನಾಯ್ಕ ಮಾತನಾಡಿ, ಈ ಗಾರ್ಮೆ ಂಟ್ಸ್ ಕಾರ್ಖಾನೆಯ ಕಲುಶಿತ ನೀರಿನಿಂದ ಸುಮಾರು ೨೦ ಗ್ರಾಮ ಗಳ ಹಾಗೂ ಪಾಲಿಕೆ ಸೇರಿದ ನಾಲ್ಕು ವಾರ್ಡ್‌ಗಳ ಸುಮಾರು ೧೦ ಸಾವಿರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರೇ ಸಿಗುತ್ತಿಲ್ಲ. ಕೆರೆ, ಹಳ್ಳ, ಕೊಳ್ಳ, ಅಚ್ಚುಕಟ್ಟು ಕಾಲುವೆಗಳು ಮಲಿನವಾಗಿ ಯಾವುದಕ್ಕೂ ಬಳಸದಂತಾಗಿದೆ ಎಂದರು.
ಅಂತರ್ಜಲ ಕಲುಶಿತವಾಗು ತ್ತಿದೆ. ವಾಯು ಮಾಲಿನ್ಯ ನಿರಂತರ ವಾಗಿ ನಡೆಯುತ್ತಿದೆ. ಸಣ್ಣ ಕೈಗಾರಿಕಾ ಘಟಕಗಳ ಮೇಲ್ಛಾವಣಿ ಗಳು ಹಾಳಾಗುತ್ತಿವೆ. ಈ ಪ್ರದೇಶದ ಜನರಿಗೆ ಜ್ವರ, ದಮ್ಮು, ಚರ್ಮದ ಕಾಯಿಲೆಗಳು ವಿಪರೀತವಾಗಿವೆ. ವಿಷವನ್ನೇ ಉಸಿರಾಡುವಂತಾಗಿದೆ ಎಂದು ವಿಷಾದಿಸಿದರು.
ದೇವಿಕುಮಾರ್ ಮಾತನಾಡಿ, ಈಗಾಗಲೇ ಈ ಕಾರ್ಖಾನೆಯನ್ನು ಮುಚ್ಚುವಂತೆ ಜಿಧಿಕಾರಿಗಳು ಎಚ್ಚರಿಕೆ ನೀಡಿ ನೋಟೀಸ್ ಕೊಟ್ಟಿzರೆ. ಪರಿಸರ ನಾಶ ಮಾಡುವ ಈ ಕಾರ್ಖಾನೆಗೆ ತಕ್ಷಣ ಬೀಗ ಹಾಕಬೇಕು. ಸಾವಿರಾರು ಎಕರೆ ಭೂಮಿಯನ್ನು ಬಂಜರಾಗು ವುದನ್ನು ತಪ್ಪಿಸಬೇಕು. ಸುಮಾರು ೨೦ ಕೆರೆಗಳಿಗೆ ವಿಷದ ನೀರು ಸೇರ್ಪ ಡೆಯಾಗುತ್ತಿದೆ. ಈ ಕಾರ್ಖಾನೆ ಯಿಂದ ರೈತರನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ನಾವು ಅಭಿವೃದ್ಧಿಯ ವಿರೋ ಧಿಗಳಲ್ಲ. ಕಾರ್ಖಾನಯೂ ಉಳಿಯಬೇಕು. ಉದ್ಯೋಗವೂ ಉಳಿಯಬೇಕು. ಪರಿಸರವನ್ನೂ ರಕ್ಷಿಸಬೇಕು. ಈ ನಿಟ್ಟಿನತ್ತ ಕಾರ್ಖಾನೆ ಮಾಲೀಕರು ಗಮನ ಹರಿಸಬೇಕು. ನೂರಾರು ಕೋಟಿ ರೂ ಬಂಡವಾಳದ ಈ ಕಾರ್ಖಾನೆ ಯಲ್ಲಿ ನೀರು ಶುದ್ಧೀಕರಣ ಮಾಡ ವ ಇಟಿಪಿ ಎಸ್‌ಟಿಪಿ ಪ್ಲ್ಯಾಂಟು ಗಳೇ ಇಲ್ಲ. ಈ ಪ್ಲ್ಯಾಂಟ್ ನಿರ್ಮಿ ಸಲು ಮೂರ್ನಾಲ್ಕು ಕೋಟಿ ಸಾಕು. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಇದನ್ನು ಮಾಡದೆ ವಿಷದ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ಬಿಡುತ್ತಿದೆ ಎಂದು ಆರೋಪಿಸಿದರು.
ಸೆ.೧೪ರಂದು ನಡೆಯುವ ಪ್ರತಿಭಟನೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ. ಜಿಧಿಕಾರಿಗಳು ತಕ್ಷಣವೇ ಈ ಗಾರ್ಮೆಂಟ್ಸ್ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ದುಮ್ಮಳ್ಳಿ ಶಿವಮ್ಮ, ಅನಂತ್, ರಮೇಶ್ ಕುಮಾರ್ ಹೆಗಡೆ, ಗೋವಿಂದರಾಜ್ ಸೇರಿದಂತೆ ಹಲವರಿದ್ದರು.