ಸೆ.೧೦: ಕಾಂಗ್ರೆಸ್‌ಹೌಸ್ ಕಾದಂಬರಿ ಬಿಡುಗಡೆ

congress-house

ಶಿವಮೊಗ್ಗ: ಬಿಡುಗಡೆಗೆ ಮುನ್ನವೇ ಸಂಚಲನ ಮೂಡಿಸಿದ ವಾಣಿ ಗೌಡರ ಕಾಂಗ್ರೆಸ್ ಹೌಸ್ ಕಾದಂಬರಿ ಸೆ.೧೦ರಂದು ಸಂಜೆ ೬ ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಬಿಡುಗಡೆ ಯಾಗಲಿದೆ ಎಂದು ರಕ್ಷಣಾ ಫೌಂಡೇಷನ್ನಿನ ಪ್ರತಿಭಾ ಡಾಕಪ್ಪ ಗೌಡ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪುಸ್ತಕ ಬಿಡುಗಡೆ ಸಮಾರಂಭ ವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಲಿದ್ದು, ಬೆಂಗಳೂರು ಜಿಧಿಕಾರಿ ಕೆ.ಎ. ದಯಾನಂದ, ಹಿರಿಯ ಸಾಹಿತಿ ಸವಿತಾ ನಾಗಭೂಷಣ್, ಪ್ರಕಾಶಕ ಶರವಣ ಕುಮಾರ್ ಇನ್ನಿತರರು ಉಪಸ್ಥಿತರಿರುವರು ಎಂದರು.
ಕಾದಂಬರಿ ಲೇಖಕಿ ವಾಣಿಗೌಡ ಮಾತನಾಡಿ, ಕಾಂಗ್ರೆಸ್ ಹೌಸ್ ಕಾದಂಬರಿ ನನ್ನ ಮೊದಲ ಕಾದಂಬರಿಯಾಗಿದೆ. ಈ ಕಾದಂಬರಿಯು ಒಂದು ಹೆಣ್ಣಿನ ಸಂಕಟಗಳ ಹೋರಾಟದ ನೈಜ ಕಥೆಯಾಗಿದೆ. ಆ ಹೆಣ್ಣಿನ ಅನುಭವ ಗಳನ್ನು ಆಕೆಯಿಂದಲೇ ಕೇಳಿ ಈ ಕೃತಿಯನ್ನು ರಚಿಸಲಾಗಿದೆ. ಇದಕ್ಕಾಗಿ ೬ ತಿಂಗಳು ಅಧ್ಯಯನ ಮಾಡಿ ದ್ದೇನೆ. ಕಾದಂಬರಿ ಪೂರ್ಣ ಗೊಳಿಸಲು ಎರಡು ವರ್ಷ ಬೇಕಾಯಿತು ಎಂದರು.
ಕಾಂಗ್ರೆಸ್ ಹೌಸ್ ಎಂಬ ಹೆಸರೇ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದೆ. ಕಾದಂಬರಿ ಬಿಡುಗಡೆಗೂ ಮುನ್ನವೇ ಕಾದಂಬರಿಯ ವಸ್ತುವಿನ ಬಗ್ಗೆ ಚರ್ಚೆಯಾಯಿತು. ಇದು ಕಾಂಗ್ರೆಸ ಪಕ್ಷದ ಹಿನ್ನೆಲೆಯಲ್ಲಿ ಇರಬೇಕು ಎಂದುಕೊಂಡವರು ಬಹಳ ಜನ. ಈ ಬಗ್ಗೆ ಅನೇಕರು ನನ್ನ ಬಳಿ ಚರ್ಚಿಸಿzರೆ. ಆದರೆ ಈ ಕಾದಂಬರಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಈ ಕಾದಂಬರಿಯ ಪ್ರಮುಖ ಪಾತ್ರಗಳು ಮತ್ತು ಸನ್ನಿವೇಶ ಬಾಂಬೆಯದು. ಬಾಂಬೆಯಲ್ಲಿ ಕಾಂಗ್ರೆಸ್‌ಹೌಸ್ ಎಂಬ ಬಡಾವಣೆಯೇ ಇದೆ. ಇದನ್ನು ರೆಡ್‌ಲೈಟ್ ಏರಿಯಾ ಎಂದು ಕೂಡ ಕರೆಯುತ್ತಿದ್ದರು. ಅಲ್ಲಿ ವಾಸಿಸುವ ಜನರು ಹೊರ ಜಗತ್ತಿನಿಂದ ವಿಮುಖವಾಗಿರು ತ್ತಾರೆ. ಅಲ್ಲಿಯ ಬದುಕು, ಬವಣೆ, ಇವೆಲ್ಲವೂ ಮಾನವೀಯತೆ ಯೊಳಗಿನ ಮರ್ಮಗಳನ್ನು ಅಣಕಿಸುತ್ತವೆ. ಕೆಣಕಿಸುತ್ತವೆ. ಈ ಎ ಘಟನೆಗಳನ್ನು ಇಟ್ಟುಕೊಂಡು ನನ್ನ ಅಭಿಪ್ರಾಯಗಳನ್ನು ಇದರ ಜೊತೆಗೆ ಹೆಣೆದು ಈ ಕಾದಂಬರಿ ಯನ್ನು ಬರೆದಿದ್ದೇನೆ. ಓದುಗರು ಸ್ವಾಗತಿಸುತ್ತಾರೆ ಎಂದುಕೊಂಡಿದ್ದೇನೆ ಎಂದರು.
ಈ ಪುಸ್ತಕವು ೧೩೦ ಪುಟಗಳನ್ನು ಒಳಗೊಂಡಿದ್ದು, ೧೯೯ ರೂ.ಗಳನ್ನು ಮುಖಬೆಲೆ ಇಡಲಾಗಿದೆ. ಬಿಡುಗಡೆಯ ದಿನದಂದು ೧೫೦ರೂ. ಗಳಿಗೆ ನೀಡಲಾಗುವುದು ಎಂದರು.