ಪ್ರಜಾ ಪರಿವರ್ತನೆ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ…

ಹೊನ್ನಾಳಿ: ನಗರದ ಬಾಲರಾಜ್ ಘಾಟ್‌ನಲ್ಲಿ ಅಂಬೇಡ್ಕರ್ ಭವನದಲ್ಲಿ ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಕಾರ್ಯದರ್ಶಿ ಎ.ಡಿ. ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನೂತನ ವೇದಿಕೆಯ ಹೊನ್ನಾಳಿ ತಾಲ್ಲೂಕು ಘಟಕವನ್ನು ರಚನೆ ಮಾಡಲಾಯಿತು.
ವೇದಿಕೆ ತಾಲ್ಲೂಕು ಘಟನದ ಅಧ್ಯಕ್ಷರಾಗಿ ಕೆ.ಓ. ಹನುಮಂತಪ್ಪ, ಉಪಾಧ್ಯಕ್ಷರಾಗಿ ಕೆ.ಹೆಚ್. ರಾಜು ಹೊನ್ನಾಳಿ, ಲೋಕೇಶ ಕುಳಗಟ್ಟೆ ,ಸಿದ್ದಪ್ಪ ಸಿಂಗಟಗೆರೆ, ಕೋಟೆ ಮಲ್ಲೂರು ಅಣ್ಣಪ್ಪ ಆಯ್ಕೆಯಾಗಿರುವರು.
ಕಾರ್ಯದರ್ಶಿ ನಾಗರಾಜ ಕಲ್ಕೇರಿ, ಬಸವರಾಜ ಕೋಣನತಲೆ, ವೀರೇಂದ್ರ ಬೇಲಿಮಲ್ಲೂರು ಸದಸ್ಯರು ಹಾಗು ತಾಲ್ಲೂಕು ಯುವ ಘಟಕಕ್ಕೆ ಅವಿನಾಶ್ ಎಂ. ಕೋಣನತಲೆ, ಮಹೇಶ್ ದೊಡ್ಡೇರೆಹಳ್ಳಿ, ತಾಲ್ಲೂಕು ವಿದ್ಯಾರ್ಥಿ ಘಟಕಕ್ಕೆ ಕುಮಾರ ಪಿ. ಕೋಣನತಲೆ ಅವರನ್ನು ಆಯ್ಕೆ ಮಾಡಲಾಯಿತು.
ಹೊನ್ನಾಳಿ ನಗರ ಘಟಕ ಅಧ್ಯಕ್ಷರಾಗಿ ಇರ್ಪಾನ್, ಉಪಾಧ್ಯಕ್ಷರಾಗಿ ಸಂಜಯ್ ಕುಮಾರ್, ರಾಜಶೇಖರ ಕೆ.ಬಿ ಹಾಗು ಕಾರ್ಯದರ್ಶಿ ವಿಜಯ ಕುಮಾರ, ಪುಟ್ಟರಾಜು ಹೋಳೆಮಾದಾಪುರ ಆಯ್ಕೆಯಾಗಿದ್ದು, ಸಾಸ್ವೇಹಳ್ಳಿ ೧ನೇ ಹೋಬಳಿ ಘಟಕದ ಅಧ್ಯಕ್ಷರಾಗಿ ಎ.ಕೆ. ಶಿವಮೂರ್ತಿ ರಾಂಪುರ, ಪ್ರಧಾನ ಕಾರ್ಯದರ್ಶಿ ಹಾಲೇಶ ಕುಳಗಟ್ಟೆ, ಉಪಾಧ್ಯಕ್ಷರಾಗಿ ರಮೇಶ ಐನೂರು, ಮಹೇಶ ಹುರುಳೇಹಳ್ಳಿ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಹುರುಳೇಹಳ್ಳಿ, ಸಲಹಾ ಸಮಿತಿ ನಿಜಲಿಂಗಪ್ಪ ಹುರುಳೇಹಳ್ಳಿ ಯುವಘಟಕದ ಅಧ್ಯಕ್ಷರಾಗಿ ದರ್ಶನ ಸಾಸ್ವೇಹಳ್ಳಿ,ಕೋಣನತಲೆ ಗ್ರಾಮಘಟಕಕ್ಕೆ ಮಂಜಪ್ಪ ಪೂಜರ ಅವರನ್ನು ನೇಮಕ ಮಾಡಲಾಯಿತು.