ರಾಜ್ಯಮಟ್ಟದ ಗಾಯನ ಸ್ಪರ್ಧೆಗೆ ಆಯ್ಕೆ…

ಶಿವಮೊಗ್ಗ: ಸ್ಕೌಟ್ ದಳದ ನಾಯಕ ನಾಯಕಿಯರ ಜಿ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ eನದೀಪ ಶಾಲೆಯ ವಿದ್ಯಾರ್ಥಿನಿ ವಿದ್ಯಾ ಎಸ್. ಹಾಗೂ ಹೋಲಿ ರೀಡಿಮರ್ ಎಚ್‌ಪಿಎಸ್ ಶಾಲೆಯ ಟಿ.ಎನ್.ಮಂಜುನಾಥ್ ಅವರು ರಾಜ್ಯಮಟ್ಟದ ದೇಶಭಕ್ತಿ ಗೀತ ಗಾಯನ ವಿಭಾಗಕ್ಕೆ ಆಯ್ಕೆಯಾಗಿzರೆ.
ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಗೋ.ರು. ಚನ್ನಬಸಪ್ಪ ಹೆಸರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿ ಸಂಸ್ಥೆ ವತಿಯಿಂದ ಜಿ ಸ್ಕೌಟ್ ಭವನ ದಲ್ಲಿ ಸ್ಕೌಟ್ ನ ದಳ ನಾಯಕ ನಾಯಕಿಯರ ಜಿ ಮಟ್ಟದ ಗೀತ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾ ಗಿತ್ತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿ ಕಾರ್ಯದರ್ಶಿ ಪರಮೇಶ್ವರ್ ಎಚ್.ಮಾತನಾಡಿ, ದಳ ನಾಯಕರು, ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಲ್ಲಿ ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ಸಂಸ್ಕಾರ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮ ಗಳು ಸಹಕಾರಿ ಆಗುತ್ತವೆ. ರಾಜ್ಯ ಸಂಸ್ಥೆಯು ಎಲ್ಲ ಜಿ ಸಂಸ್ಥೆಗಳಲ್ಲಿ ಸ್ಪರ್ಧೆ ನಡೆಸು ತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ರಾಜ್ಯಮಟ್ಟದಲ್ಲಿ ಸಾಧನೆ ಮಾಡ ಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ ಜಿ ಆಯುಕ್ತ ಕೆ.ಪಿ. ಬಿಂದುಕುಮಾರ್, ಜಿ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ, ಸೇವಾ ಚಟುವಟಿಕೆಗಳ ಜತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಮಕ್ಕಳಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಲು ಅನುಕೂಲ ವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಸಹಾಯಕ ಆಯುಕ್ತ ಭಾರತಿ ಡಯಾಸ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ ವಿ.ಅವಲಕ್ಕಿ, ಮಲ್ಲಿಕಾರ್ಜುನ ಕಾನೂರ್, ತೀರ್ಪುಗಾರರಾದ ಸಂಧ್ಯಾರಾಣಿ, ಅನಿತಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.