ಶಾಸ್ತ್ರಗಳೆಂಬ ಬೆಳಕಿನಲ್ಲಿ ದೇವರನ್ನು ನೋಡಿ…

ಹೊಳೆಹೊನ್ನೂರು : ಎಲ್ಲ ಕಡೆ ದೇವರಿzನೆ ಎಂಬುದು ನಿಸ್ಸಂಶಯ. ಆದರೆ ಕೆಲವು ಅಧಿಷ್ಠಾ ನಗಳಲ್ಲಿ, ಸ್ಥಾನಗಳಲ್ಲಿ ವಿಶೇಷವಾಗಿ zನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ ೨೮ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ವ್ಯಾಪ್ತನಾದ ಪರಮಾತ್ಮನ ಉಪಾಸನೆ ಮಾಡುವ ಸಾಧಕರಿ zರೆ. ಆದರೆ ಇದು ಸಾಮಾನ್ಯರಿಗೆ ಅಸಾಧ್ಯವಾದುದು. ಹೀಗಾಗಿ ಗುರು ಗಳಲ್ಲಿದ್ದು ಶಿಷ್ಯರಿಗೆ, ತಂದೆ-ತಾಯಿ ಯಲ್ಲಿದ್ದು ಮಕ್ಕಳಿಗೆ ದೇವರು ವಿಶೇಷ ಅನುಗ್ರಹ ಮಾಡುತ್ತಾನೆ. ಅದಕ್ಕಾಗಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎಂದರು.
ಶಾಸ್ತ್ರಗಳೆಂಬ ಬೆಳಕಿನಲ್ಲಿ ಇದ್ದರೆ ಮಾತ್ರ ಆ eನದ ಬಲದಿಂದ ದೇವರನ್ನು ಹೃದಯದಲ್ಲಿ ಆರಾಧನೆ ಮಾಡಲು ಸಾಧ್ಯ. ಇಂತಹ ಪರಮಾತ್ಮನಿಗೆ ಹುಟ್ಟು ಮತ್ತು ಸಾವು ಎರಡೂ ಇಲ್ಲ. ಆನಂದಾದಿ ಗುಣ ಸ್ವರೂಪಿಯಾದ ದೇವರಿಗೆ ತಂದೆ – ತಾಯಿಯೂ ಇಲ್ಲ. ನನಗೆ ಅದರ ಅಗತ್ಯ ಇಲ್ಲ ಎಂದು ತೋರಿಸುವುದ ಕ್ಕಾಗಿಯೇ ನರಸಿಂಹಾವತಾರದಲ್ಲಿ ಸ್ತಂಭದಲ್ಲಿ ಅವತಾರ ಮಾಡಿದ. ಕೃಷ್ಣಾವತಾರದಲ್ಲಿ ವಸುದೇವ ದೇವಕಿಯರು ಕೇವಲ ನಿಮಿತ್ತ ಮಾತ್ರ ಎಂದರು.
ಸಭೆಯಲ್ಲಿ ಮೈಸೂರಿನ ಬಾದರಾಯಣಾಚಾರ್ಯ, ಪೂಜ ಕಾಲದಲ್ಲಿ ಅನಂತಾಚಾರ್ಯ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ಮೊದಲಾದವರಿದ್ದರು.