ಸ್ಕೌಟ್ ತರಬೇತಿ ಸಂಪನ್ನ:ಶಾಸ್ತ್ರೀ
ಶಿವಮೊಗ್ಗ: ತರಬೇತಿ ಶಿಬಿರಗಳು ಬೌದ್ಧಿಕ ತಿಳವಳಿಕೆ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಮೂಡಿಸಲು ಸಹಕಾರಿ ಆಗುತ್ತವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿ ಘಟಕದ ಪ್ರಧಾನ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.
ಹುಂಚದ ಅತಿಶಯ ಕ್ಷೇತ್ರ ಹೊಂಬುಜ ಶ್ರೀ ಪದ್ಮಾವತಿ ದೇವಸ್ಥಾನದ ಆವರಣದಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಸ್ಕೌಟ್ ಗೈಡ್, ಕಬ್, ಬುಲ್ ಗೈಡ್, ಕ್ಯಾಪ್ಟನ್, ಸ್ಕೌಟ್ ಮಾಸ್ಟರ್, ಬುಲ್, ಫ್ಲಾಕ್ ಲೀಡರ್ ಗಳಿಗೆ ಏಳು ದಿನಗಳ ಕಾಲ ಜಿ ಮಟ್ಟದ ತರಬೇತಿ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.
ತರಬೇತಿ ಪಡೆದಿರುವ ಶಿಕ್ಷಕರು ಶಾಲೆಗಳಲ್ಲಿ ಸ್ಕೌಟ್ ಮತ್ತು ಗೈಡ್ ಘಟಕವನ್ನು ಪರಿಣಾಮಕಾರಿ ಅನುಷ್ಠಾನ ಮಾಡಲು ಮುಂದಾ ಗಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಘಟಕಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿ ಸ್ಕೌಟ್ ಆಯುಕ್ತ ಕೆ.ಪಿ.ಬಿಂದು ಕುಮಾರ್ ಮಾತನಾಡಿ, ತರಬೇತಿ ಶಿಬಿರಗಳು ಯಶಸ್ವಿಯಾಗಲು ಶಿಕ್ಷಕರ ಪಾತ್ರ ಮಹತ್ತರವಾಗಿತ್ತು. ಇಲ್ಲಿ ಸಮಗ್ರ ಮಾಹಿತಿ ತಿಳಿದು ಕೊಂಡಿರುವ ಎಲ್ಲ ಶಿಬಿರಾರ್ಥಿಗಳು ಸಮಾಜಮುಖಿಯಾಗಿ ಕೆಲಸ ಮಾಡುವ ದಿಸೆಯಲ್ಲಿ ಮುನ್ನಡೆ ಯಬೇಕು. ಮಕ್ಕಳು ಸಹ ಉತ್ತಮ ನಾಯಕರಾಗಿ ರೂಪುಗೊಳ್ಳುವಲ್ಲಿ ಸಹಕಾರಿ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್ ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಒಂದು ವಾರ ತರಬೇತಿ ಪಡೆದ ಶಿಕ್ಷಕರು ಅನಿಸಿಕೆ ಹಂಚಿಕೊಂಡರು. ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಶಿಬಿರ ನಡೆಸಲು ಅವಕಾಶ ಮಾಡಿಕೊಟ್ಟ ಹೊಂಬುಜ ಜೈನಮಠದ ಶ್ರೀ ದೇವೆಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಜಿ ಸಂಸ್ಥೆಯು ಅಭಿನಂದಿಸಿತು.
ಕೇಂದ್ರ ಸ್ಥಾನಿಕ ಆಯುಕ್ತ, ಶಿಬಿರದ ನಾಯಕ ಕೆ.ರವಿ, ಶಿವಶಂಕರ್, ತರಬೇತುದಾರರಾದ ಪರಮೇಶ್ವರಯ್ಯ, ಜಿ. ವಿಜಯ್ ಕುಮಾರ್, ಸಂಧ್ಯಾರಾಣಿ, ರಾಧಿಕಾ, ಮುರಳಿ, ವಿನಯಭೂಷಣ್, ಮೀನಾಕ್ಷಮ್ಮ, ಪುಟ್ಟಪ್ಪ, ಗೀತಾ ಚಿಕಮಠ, ಸಿ.ಎಸ್.ಅಶೋಕ್ ಕುಮಾರ್, ಹೇಮಲತಾ, ಪ್ರಹ್ಲಾದ್, ಕಾರ್ಯದರ್ಶಿ ಪರ ಮೇಶ್ವರ್, ವೈ.ಆರ್.ವಿರೇಶಪ್ಪ ಉಪಸ್ಥಿತರಿದ್ದರು.