ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ: ದಾಖಲೆ ಸಹಿತ ಶಾಸಕರ ತಿರುಗೇಟು
ಚನ್ನಗಿರಿ : ಸಾಸ್ವೇಹಳ್ಳಿ ಯೋಜನೆ ತಂದಿದ್ದು ನಾನು ಹಾಗೂ ಮಾಡಾಳು ವಿರೂ ಪಾಕ್ಷಪ್ಪ ಎಂದು ಸಂತೇಬೆನ್ನೂರಲ್ಲಿ ಹೇಳಿಕೆ ನೀಡಿರುವ ಸಂಸದ ಜಿ.ಎಂ ಸಿದ್ಧೇಶ್ವರ್ಗೆ ಶಾಸಕ ಬಸವ ರಾಜು ಶಿವಗಂಗಾ ತಿರುಗೇಟು ನೀಡಿzರೆ.
ಸಿದ್ದೇಶ್ವರ್ ಅವರು ಸುಳ್ಳಿನ ಸರದಾರ. ಇಂಥ ಸುಳ್ಳುಗಳನ್ನ ಹೇಳಿಯೇ ನಾಲ್ಕು ಬಾರಿ ಗೆದ್ದಿರು ವುದು. ಬಿಜೆಪಿ ಪಕ್ಷ ಎಂದರೆ ಅದು ಸುಳ್ಳಿನ ಪಕ್ಷವಾಗಿದ್ದು, ಜನರಿಗೆ ಸುಳ್ಳು ಹೇಳಿ ಇದುವರೆಗೂ ಅಧಿಕಾರಕ್ಕೆ ಬಂದಿರುವುದು ಎಂದು ಖಾರವಾಗಿ ತಿರುಗೇಟು ನೀಡಿzರೆ.
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜರಿ ಬಗ್ಗೆ ಬಹಿರಂಗ ವಾಗಿ ಚರ್ಚೆಗೆ ಬರಲಿ, ದಾಖಲೆ ಸಹಿತ ನಾನು ಚರ್ಚೆ ಮಾಡುತ್ತೇನೆ ಎಂದು ಜಿ.ಎಂ.ಸಿದ್ದೇಶ್ವರ ಅವರಿಗೆ ಸವಾಲು ಹಾಕಿzರೆ.
ಕಾಂಗ್ರೆಸ್ ಪಕ್ಷಕ್ಕೂ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೂ ಕಾಂಗ್ರೆಸ್ಗೂ ಸಂಬಂಧವೇ ಇಲ್ಲ ಎಂದಿzರೆ. ೨೦೧೫-೧೬ನೇ ಸಾಲಿ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಆಯವ್ಯಯ ಭಾಷಣದಲ್ಲಿ ಸಂತೇ ಬೆನ್ನೂರು ಮತ್ತು ಕಸಬಾ ಹೋಬಳಿ ಗಳಲ್ಲಿ ೨ ಹಂತದಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ನೀರಾವರಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ನಂತರ ವರದಿ ಅನುಸಾರ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಗಳ ( ಚನ್ನಗಿರಿ ಕಸಬಾ ಹೋಬಳಿ ೪೬ ಕೆರೆಗಳು) ಒಟ್ಟು ೧೨೧ ಕೆರೆಗಳಿಗೆ ನೀರೊದಗಿಸಲು ಯೋಜನೆ ಉದ್ದೇಶವಾಗಿತ್ತು. ನಂತರ ೨೩/೦೬/೨೦೧೬ ರಂದು ನೀರಾವರಿ ಇಲಾಖೆಯಿಂದ ಈ ಯೋಜನಾ ವರದಿಯನ್ನ ೧೫ ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸಲಾಗಿತ್ತು ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ಮಾಹಿತಿ ನೀಡಿದರು.
ನಂತರ ೧೯/೦೮/೨೦೧೬ ರಲ್ಲಿ ರೂ. ೪೧೫.೬೮ ಕೋಟಿಗಳ ಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರು ತ್ತಾರೆ. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ದಿನಾಂಕ:೧೧/೦೧/೨೦೧೭ ರಂದು ಸಾಸ್ವೇಹಳ್ಳಿ ಏತ ನೀರಾವರಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು ಈ ಯೋಜನೆ ಜರಿಗೆ ಬರಲು ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮ, ಹೋರಾಟ ಕೂಡ ಇದೆ ಎಂದು ಶಾಸಕ ಬಸವರಾಜು ವಿ ಶಿವಗಂಗಾ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರಿಗೆ ತಿರುಗೇಟು ನೀಡಿzರೆ.