ಸದಾಶಿವ ಆಯೋಗ ವರದಿ ಜರಿಗೆ ಶಿಫಾರಸು: ಅಭಿನಂದನೆ

ಶಿವಮೊಗ್ಗ: ಮಾದಿಗ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜರಿಮಾಡಲು ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡಿರವುದಕ್ಕೆ ಕರ್ನಾ ಟಕ ಮಾದಿಗ ದಂಡೋರ ಸಮಿತಿ ಯ ಜಿ ಶಾಖೆ ಮುಖ್ಯಮಂತ್ರಿ ಗಳಿಗೆ ಮತ್ತು ರಾಜ್ಯಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸಮಿತಿಯ ಸಂಘಟನಾ ಕಾರ್ಯ ದರ್ಶಿ ಮತ್ತು ಜಿಧ್ಯಕ್ಷ ಶಿವಾಜಿ, ಡಾ.ಬಿ.ಆರ್, ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ಕನಸು ಸಾಕಾರಗೊಂಡಂತಾಗಿದೆ. ಹಲವು ಶತಮಾನಗಳಿಂದ ಶೋಷಣೆಗೆ, ತುಳಿತಕ್ಕೆ ಒಳಗಾಗಿ ಸಮಾಜದ ಕೊನೆಯ ಸ್ಥರದಲ್ಲಿದ್ದ ಮಾದಿಗ iತ್ತು ಅದರ ಉಪಜತಿಗಳಿಗೆ ಒಳಮೀಸಲಾತಿಯಲ್ಲಿ ಮಾನ್ಯತೆ ನೀಡಬೇಕು ಎಂದು ಕಳೆದ ೩೦ ವರ್ಷಗಳಿಂದ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಎ.ಜೆ. ಸದಾಶಿವ ಆಯೊಗದ ವರದಿ ಜರಿ ಮಾಡುವಂತೆ ಕಾಂಗ್ರೆಸ್ ಸೇರಿದಂತೆ ಹಲವು ಸರ್ಕಾರಗಳು ಹಿಂದೆ ಮುಂದೆ ನೋಡಿದ್ದವರು. ಇದರ ವಿರುದ್ಧ ಅಸ್ಪಶ್ಯ ಜತಿಯ ನಾವು ಹೋರಾಟ ಮಾಡುತ್ತಲೇ ಬಂದಿzವು. ನಮ್ಮ ಹೋರಾಟ ಈಗ ಫಲಪ್ರದವಾಗಿದೆ ಎಂದರು.
ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಈಗ ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದಿದೆ. ನಮ್ಮ ಹೋರಾಟಕ್ಕೆ ಸಮಿತಿಯಲ್ಲದೆ ಹಲವು ಅಸ್ಪಶ್ಯ ಜತಿಗಳು ಬೆಂಬಲ ನೀಡಿದ್ದವು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ, ಎ. ನಾರಾಯಣಸ್ವಾಮಿ, ಪ್ರಭು ಚವ್ಹಾಣ್ ಮತ್ತು ಮಂತ್ರಿ ಮಂಡಲಕ್ಕೆ ನಮ್ಮೊಂದಿಗೆ ಸಹಕರಿ ಸಿದ ದಲಿತ ಸಮಿತಿಗಳಿಗೆ ಹೋರಾ ಟಗಾರರಿಗೆ ಅಭಿನಂದನೆಗಳು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಕೆ. ಅಣ್ಣಪ್ಪ, ರಂಗಪ್ಪ, ಹೆಚ್.ಎನ್. ಮಂಜು ನಾಥ್, ಸಿ,ಮೂರ್ತಿ, ಶಿವಪ್ಪ, ಪ್ರಭು, ಬೀರನಕೆರೆ ಮಂಜಣ್ಣ, ರಮೇಶ್ ಮುಂತಾದವರಿದ್ದರು.