ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಮಿಥುನ್
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ತಂದೆ ತಾಯಿ ಗಿಂತ ಗುರುವಿನ ಪಾತ್ರ ಮಹತ್ತರ ವಾಗಿದೆ ಎಂದು ಜಿ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ಹೇಳಿzರೆ.
ಅವರು ಇಂದು ಜಿ ಒಕ್ಕಲಿಗರ ಸಂಘ ಮತ್ತು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾ ವಿದ್ಯಾಲಯ ವತಿಯಿಂದ ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ೨೦೨೩ -೨೪ ನೇ ಶೈಕ್ಷಣಿಕ ಸಾಲಿನ ವಿದ್ಯಾ ರ್ಥಿ ಪರಿಷತ್ ಮತ್ತು ಸಾಂಸ್ಕೃತಿಕ ಸಂ ಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕರು ಅನೇಕ ವಿದ್ಯಾ ರ್ಥಿಗಳ ಜೀವನದಲ್ಲಿ ಮರೆಯಲಾ ಗದ ಪಾತ್ರ ವಹಿಸುತ್ತಾರೆ. ನಾವೆ ಲ್ಲರೂ ಕೂಡ ಇಷ್ಟೊಂದು ಸಾಧನೆ ಮಾಡಿದ್ದೇವೆ ಎಂದರೆ ಅದಕ್ಕೆ ಗುರುಗಳ ಮಾರ್ಗದರ್ಶನವೇ ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿ ಯೂ ತಮ್ಮ ಜೀವನದ ಮಹತ್ತರ ಪಾತ್ರ ವಹಿಸಿದ ಗುರುಗಳನ್ನು ನೆನೆಸಿಕೊಳ್ಳುತ್ತಾರೆ. ನನ್ನ ಮೂ ರೂವರೆ ವರ್ಷದ ಮಗಳು ಕೂಡ ಬೆಂಗಳೂರಿಂದ ಇಲ್ಲಿಗೆ ವರ್ಗವಾಗಿ ಬಂದಾಗ ನಾನು ಇಲ್ಲಿನ ಶಾಲೆಗೆ ಸೇರಿಸಿದಾಗ ಅಲ್ಲಿಯ ಶಿಕ್ಷಕಿಯ ರನ್ನು ನೆನಪಿಸಿಕೊಂಡು ನಾನು ಅ ಓದುತ್ತೇನೆ ಎಂದು ಮತ್ತೆ ಬೆಂಗಳೂರಿಗೆ ಹೋಗಿ ಅದೇ ಸ್ಕೂಲ್ ನಲ್ಲಿ ಸೇರಿಕೊಂಡಳು. ಕಾರಣ ಆ ಶಿಕ್ಷಕಿಯರು ಆ ಮಗು ವಿನ ಮೇಲೆ ಅಷ್ಟು ಪರಿಣಾಮ ಬೀರಿದ್ದರು. ಇದೊಂದು ಉದಾ ಹರಣೆ ಎಂದರು.
ಇಂದಿನ ದಿನಗಳಲ್ಲಿ ಶಿಕ್ಷಣ ಎಂಬುದು ವ್ಯಾಪಾರೀಕರಣವಾ ಗಿದೆ. ಆದರೆ, ಶಿಕ್ಷಕರು ಸೇವಾ ಮನೋಬಾವದಿಂದ ತನ್ನ ಶಿಷ್ಯನ ಏಳಿಗೆ ಗಮನದಲ್ಲಿಟ್ಟುಕೊಂಡು ವೃತ್ತಿ ಮಾಡಬೇಕಾಗುತ್ತದೆ. ನೀವು ಕಲಿಸಿದ ವಿದ್ಯಾರ್ಥಿಗಳು ಮುಂದೆ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಉತ್ತಮ ವಿದ್ಯಾರ್ಥಿಗಳು ದೇಶಕ್ಕೆ ಆಸ್ತಿಯಾಗುತ್ತಾರೆ. ಮಲ್ಯಯುತ ವಾದ, ಸಂಸ್ಕಾರಯುತವಾದ ಉತ್ತಮ ಶಿಕ್ಷಣ ನೀಡಬೇಕು. ಸದೃಢ ಸಮಾಜಕ್ಕೆ ಮತ್ತು ಒಳ್ಳೆಯ ವ್ಯಕ್ತಿಗಳ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ಈ ಸಂದರ್ಭದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾ ಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊಬೇಷ ನರಿ ಜಿಧಿಕಾರಿ ದಲ್ಜಿತ್ ಕುಮಾ ರ್, ಒಕ್ಕಲಿಗರ ಸಂಘದ ಜಿಧ್ಯಕ್ಷ ಆದಿಮೂರ್ತಿ ಹೆಚ್.ಬಿ., ಸಂಘದ ಪದಾಧಿಕಾರಿಗಳಾದ ಎನ್.ಎಸ್. ನಾಗರಾಜ್, ಪ್ರಭಾಕರ್, ಬಿ.ಕೆ. ನಾಗರಾಜ್, ಸುಮಿತ್ರಾ ಕೇಶವ ಮೂರ್ತಿ, ಕಾಲೇಜಿನ ಪ್ರಾಂಶು ಪಾಲರಾದ ಡಾ. ಮಧು ಜಿ. ಮತ್ತಿತರರು ಇದ್ದರು.