ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ: ಶಿವಸುಂದರ್

ಉಡುಪಿ: ಮಣಿಪುರ ರಾಜ್ಯ ದಲ್ಲಿ ಹಿಂಸಾಚಾರ ಮತ್ತು ಮಹಿಳೆ ಯರ ಮೇಲೆ ಅಮಾನವೀಯ ಲೈಗಿಂಕ ಹ ಖಂಡಿಸಿ ಬೃಹತ್ ಜಥಾಕ್ಕೆ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು.
ನಂತರ ಜಥಾ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನ ದಲ್ಲಿ ಪ್ರತಿಭಟನಾ ಸಮಾವೇಷ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಖ್ಯಾತ ಮಾಧ್ಯಮ ವಿಶ್ಲೇಷಕ ಶಿವಸುಂದರ್ ಅವರು, ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, ನಾವು ಮಾತನ್ನು ಆಯುಧ ಮಾಡಿಕೊಳ್ಳಬೇಕು. ಮಾತನಾಡುವ ಮೂಲಕ, ಪ್ರತಿಭಟನೆಗಳನ್ನು ಮಾಡುವ ಮೂಲಕ ದೇಶವನ್ನು ಎಚ್ಚರಿಸಬೇಕು ಎಂದು ಕರೆ ನೀಡಿದರು.
ಮಣಿಪುರದ ಈ ದುರ್ಘಟನೆಗಳ ಹಿಂದೆ ಇದ್ದದ್ದು ಕೇವಲ ಕಾಮ ಮಾತ್ರವಲ್ಲ. ದ್ವೇಷ, ಅಸೂಯೆಯೂ ಇದೆ. ಇಂತಹ ಘಟನೇಗಳು ಹಲವಷ್ಟು ನಡೆದಿವೆ. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಇದೆಲ್ಲವೂ ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತೆ ಲೇಖಕಿ ಜನೇಟ್ ಬಾರ್ಬೋಜ ಅವರು ಮಾತನಾಡಿ, ಅಲ್ಲಿನ ಮಹಿಳೆಯರ ಮೇಲೆ ಈ ರೀತಿಯ ಮೃಗೀಯ ಹ ನಡೆದಾಗ ಯಾರಿಗೂ ಕರುಣೆ ಬರಲಿಲ್ಲವೇ, ಅಲ್ಲಿದ್ದವರಿಗೆ ಯಾರೂ ಅಕ್ಕ ತಂಗಿ, ತಾಯಿ ಇರಲಿಲ್ಲವೇ, ಅವರೆ ಹೆಣ್ಣಿನ ಮೂಲಕವೇ ಹುಟ್ಟಿದ್ದಲ್ಲವೆ, ಪ್ರಧಾನಿ ಮೋದಿ ಮನ್ಕಿ ಬಾತ್ ಅನ್ನುತ್ತಾ, ಜನರನ್ನು ಮಂಕಿ ಮಾಡಿದರು ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಹಸ್ರ ಸಂಖ್ಯೆಯ ಜನ ಜಥಾದ ಸಮಯದಲ್ಲಿ ಅಕ್ರೋಷದಲ್ಲಿ ಬಿಜೆಪಿ ಸರಕಾರಕ್ಕೆ ಅಲ್ಲಿನ ಮಂತ್ರಿ ಮತ್ತು ಮೋದಿಯ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಈ ಪ್ರತಿಭಟನೆಯಲ್ಲಿ ಸಮಾನ ಮನಸ್ಕರು ಜತಿ ಭೇದ ಮರೆತು ಪಾಲ್ಗೊಂಡರು. ಹಲವಾರು ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಹಲವಾರು ಮುಖಂಡರು ಭಾಗಿಯಾದರು. ಮಣಿಪುರ ಗಲಭೆಯಲ್ಲಿ ಮೃತಪಟ್ಟ ವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ದಸಂಸ ಅಂಬೇಡ್ಕರ್ ಜಿ ಪ್ರಧಾನ ಸಂಚಲಕ ಸುಂದರ ಮಾಸ್ತರ್, ಉಡುಪಿ ಬಿಷಪ್ ಅ|ವಂ||ಡಾ| ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಜಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ’ಅಲ್ಮೆಡಾ, ಭಾರತೀಯ ಕೈಸ್ತ ಸಂಘಟನೆಗಳ ಒಕ್ಕೂಟದ ಜಿ ಗೌರವಾಧ್ಯಕ್ಷ ಲೂವಿಸ್ ಲೋಬೊ, ವೆರೋನಿಕಾ ಕರ್ನೇಲಿಯೊ, ಉಪಸ್ಥಿತರಿದ್ದರು.
ಚಿಂತಕ ಫಣಿರಾಜ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಮಾನ ಮಾನಸ್ಕರ ವೇದಿಕೆಯ ಸಂಚಾಲಕ ಪ್ರಶಾಂತ್ ಜತ್ತನ್ನ ನಿರೂಪಿಸಿದರು, ಉಡುಪಿ ಧರ್ಮಪ್ರಾಂತದ ಪಿಅರೊ ಡೆನಿಸ್ ಡೇಸಾ ವಂದಿಸಿದರು.