ಕನ್ನಡ ಧ್ವಜ ಸ್ತಂಭ ತೆರವು : ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ…
ಶಿವಮೊಗ್ಗ: ನಗರದ ಅಂಬೇ ಡ್ಕರ್ ವೃತ್ತ (ಜೈಲ್ ವೃತ್ತ)ದಲ್ಲಿ ರುವ ಕನ್ನಡ ಧ್ವಜ ಸ್ತಂಭವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಭಿ ವೃದ್ಧಿ ದೃಷ್ಟಿಯಿಂದ ತೆರವುಗೊಳಿ ಸುವ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಧರಣಿ ಕುಳಿತ ಘಟನೆ ನಡೆಯಿತು.
ಜೈಲ್ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಂದರ ವಾದ ಯೋಗಮುದ್ರೆಯ ಕಲಾ ಕೃತಿ ರಚಿಸಿ ಆ ಸ್ಥಳದಲ್ಲಿ ಹಸಿರು ವೃತ್ತವನ್ನು ನಿರ್ಮಿಸುವ ಉದ್ದೇಶ ದಿಂದ ಪಕ್ಕದಲ್ಲಿದ್ದ ಕನ್ನಡ ಧ್ವಜ ಸ್ತಂಭ ತೆರವುಗೊಳಿಸಿ ಸ್ಥಳಾಂತರಿ ಸಲು ಮುಂದಾದಾಗ ಈ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳ ಪ್ರಕಾರ ಧ್ವಜ ಸ್ತಂಭಕ್ಕೆ ಪಕ್ಕದ ವ್ಯವಸ್ಥೆ ಮಾಡಲಾಗಿದೆ. ಈಗಾ ಗಲೇ ನಾಲ್ಕು ತಿಂಗಳ ಹಿಂದೆ ಜಲಾಮುಖಿ ಕನ್ನಡ ಸಂಘದ ಅಧ್ಯಕ್ಷರಾದ ಮೂರ್ತಿಯವರೊಂ ದಿಗೆ ಚರ್ಚಿಸಿ ಅವರಿಗೆ ವಿಷಯ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಧ್ವಜಸ್ತಂಭ ಉದ್ದವಿದ್ದು, ಅದನ್ನು ತಗ್ಗಿಸಿ ಪಕ್ಕದ ಸುಂದರ ಕಟ್ಟೆಯನ್ನು ಮಾಢುವಂತೆ ಅವರ ಕೋರಿಗೆ ಮೇರೆಗೆ ಸಿದ್ಧತೆಯನ್ನು ಮಾಡಲಾಗಿದೆ. ಯೋಗಮು ದ್ರೆಯ ರಚನೆಯನ್ನು ಆ ಸ್ಥಳದಲ್ಲಿ ನಿರ್ಮಾಣ ಮಾಡಲು ತೀರ್ಮಾನಿ ಸಿದ್ದು, ಇಂದು ಹಯ ಕನ್ನಡ ಧ್ವಜದ ಕಟ್ಟಯನ್ನು ಜೆಸಿಬಿಯಿಂದ ತೆರವುಗೊಳಿಸಲು ಅಧಿಕಾರಿಗಳು ಮಂದಾದಾಗ ಇನ್ನಿತರ ಸಂಘಟ ನೆಗಳು ಹಾಗೂ ಸ್ಥಳಿಯ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ನಮ್ಮ ಗಮನಕ್ಕೆ ತಾರದೆ ಏಕಾಏಕಿ ನೀವು ಕನ್ನಡ ಧ್ವಜ ಹಾರಾ ಡುತ್ತಿರುವಾಗಲೇ ಧ್ವಜ ಕಟ್ಟೆಯನ್ನು ಧ್ವಂಸಗೊಳಿಸಿದ್ದು ಸರಿಯಲ್ಲ ಎಂದು ಪ್ರತಿಭಟಿಸಿದರು.
ಡಿವೈಎಸ್‌ಪಿ ಬಾಲರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಸ್ಮಾಟ್ ಸಿಟಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪ್ರತಿಭಟನಕಾರರ ಮನವೊಲಿಸಿ ಸಂಜೆ ನಾಲ್ಕು ಗಂಟೆ ಗೆ ಎ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಿzರೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ರೀತಿಯ ಯೋಜನೆಗಳನ್ನು ಮಾ ಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮತ್ತು ಮೊದಲು ಕನ್ನಡ ಧ್ವಜದ ಕಟ್ಟೆ ನಿರ್ಮಿಸಿ ಸ್ಥಳಾಂತರಿಸಿದ ಬಳಿಕ ನೂತನ ಅಭಿವೃದ್ಧಿ ಯೋಜನೆಯ ನ್ನು ಮಾಡಬೇಕು ಎಂದು ಪಾಲಿಕೆ ಸದಸ್ಯರು ಸೇರಿದಂತೆ ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಮೋಹನ್‌ರಾವ್, ವಿಜಯಕುಮಾರ್, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಪ್ರ ಮುಖರಾದ ರಂಗನಾಥ್, ಐಡಿಯಲ್ ಗೋಪಿ, ವಿಶ್ವನಾಥ್‌ಗೌಡ , ಕಿರಣ್, ಚಂದ್ರ ಶೇಖರ್, ಪದ್ಮನಾಭ್, ಗ.ರಾ. ಶ್ರೀನಿವಾಸ, ಭರತೇಶ್ ಇನ್ನಿತರರಿದ್ದರು.