ಮನೆ ಮನಗಳಲ್ಲಿಯೂ ಧಾರ್ಮಿಕ ಜಗೃತಿ:ಸ್ವಾಮೀಜಿ

28-11-2023-chinthana-karthi

ಶಿವಮೊಗ್ಗ: ಮನೆ ಮನ ಗಳಲ್ಲಿಯೂ ಧಾರ್ಮಿಕ ಚಿಂತನೆ ಜಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳು ತ್ತಿದ್ದು, ಮುಂದಿನ ಯುವಪೀಳಿಗೆ ಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.


ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ. ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋ ಜಿಸಿದ್ದ ಚಿಂತನ ಕಾರ್ತಿಕ ಕಾರ್ಯ ಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಚಿಂತನಾ ಕಾರ್ತಿಕ ಮಾಸ ಪೂರ್ಣ ನಡೆಯುತ್ತಿದ್ದು, ಪ್ರತಿ ಯೊಂದು ದಿನವು ಒಂದೊಂದು ವಿಷಯಗಳ ಬಗ್ಗೆ ವಿಶೇಷ ಉಪ ನ್ಯಾಸಗಳ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಶಯಗಳ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಇದು ಅತ್ಯಂತ ಸಾರ್ಥಕ ಕಾರ್ಯ ಎಂದು ತಿಳಿಸಿದರು.
ಬೆಂಗಳೂರಿನ ಟೌನ್ ಹಾಲ್ ಕೊಡುಗೆ ನೀಡಿದ ದಾನಿ ಸರ್ ಕೆ.ಪಿ.ಪುಟ್ಟಣ್ಣ ಶೆಟ್ಟರು ಕುರಿತು ಎಂ.ವಿರೂಪಾಕ್ಷಪ್ಪ ಉಪನ್ಯಾಸದ ನೀಡಿದ ನಂತರ ಪಟ್ಟಣ್ಣ ಅವರು ತಮಿಳು ವ್ಯಕ್ತಿ ಎಂಬ ಕಲ್ಪನೆ ಮರೆಯಾಗಿ ಅಚ್ಚ ಕನ್ನಡಿಗರೆಂದು ಅರಿವಾಯಿತು.
ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ದಲ್ಲಿ ಚಿಂತನ ಲಹರಿ ಕಾರ್ಯಕ್ರಮ ನಡೆಯಿತು. ಸೇವಾರ್ಥಿಗಳಾದ ಜಿ.ವಿಜಯ್‌ಕುಮಾರ್ ಮತ್ತು ಬಿಂದು ವಿಜಯ್‌ಕುಮಾರ್ ದಂಪತಿಯನ್ನು ಅಭಿನಂದಿಸಲಾ ಯಿತು.ಇದೇ ಸಂದರ್ಭದಲ್ಲಿ ಮಹಾ ನಗರ ಪಾಲಿಕೆಯ ಸದಸ್ಯ ವಿಶ್ವಾಸ ಹಾಗೂ ಧೀರಜ್ ಹೊನ್ನವಿಲೆ ಮಾತನಾಡಿದರು. ಮನೆ ಮನಗಳನ್ನು ಬೆಳಗುತ್ತಿರುವ ಚಿಂತನ ಕಾರ್ತಿಕ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಎ ಬಡಾವಣೆಗಳಲ್ಲಿ ನಡೆಯು ತ್ತಿದೆ. ಧಾರ್ಮಿಕ ಜಗೃತಿಯನ್ನು ಮೂಡಿಸುವುದರ ಮುಖಾಂತರ ಸಂಸ್ಕಾರವನ್ನು ಕಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಮನಸ್ಸುಗಳು ಸ್ವಚ್ಛವಾಗುತ್ತವೆ. ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ಧಾರ್ಮಿಕ ಮನೋ ಭಾವನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ವಿಜಯಕುಮಾರ್ ಮತ್ತು ಬಿಂದು ವಿಜಯಕುಮಾರ್ ಅವರು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವ ಕುರಿತು ಮಾತನಾಡಿ ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರಿಗೆ ಪೂಜ್ಯರಿಂದ ಆಶೀರ್ವಾದ ಮತ್ತು ಗೌರವವನ್ನು ಕೊಡಮಾಡಿದರು.
ವಿಭಿನ್ನ ಬಗೆಯ ರುಚಿಕಟ್ಟಾದ ಪ್ರಸಾದ ಸೇವೆಯು ನಡೆಸಲಾಯಿತು. ವೇದಿಕೆ ಕಾರ್ಯಕ್ರಮ ಉತ್ತಮವಾಗಿ ನಿರ್ವಹಿಸಲಾಯಿತು. ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ನೀಲ್ಕಂಠರಾವ್, ಮಲ್ಲಿಕಾರ್ಜುನ್ ಕಾನೂರು, ಗಣೇಶ್, ಸವಿತಾ, ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.