ವೈದ್ಯಕೀಯ ಸಾಹಿತ್ಯದ ಓದು ಆತ್ಮವಿಶ್ವಾಸ ಹೆಚ್ಚಿಸುತ್ತದೆ…
ಶಿವಮೊಗ್ಗ : ವೈದ್ಯಕೀಯ ಸಾಹಿತ್ಯ ವಿeನದ ಬೃಹತ್ ಶಾಖೆ ಯಾಗಿದ್ದು ಜನಸಾಮಾನ್ಯರಲ್ಲಿ ವೈದ್ಯಕೀಯ ಅರಿವು ಮೂಡಿಸು ವುದರ ಜೊತೆಗೆ ರೋಗಿಯಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಸಹಕಾರಿಯಾ ಗಿದೆ ಎಂದು ಸಿಮ್ಸ್ ಪ್ರಾಧ್ಯಾ ಪಕರು ಸಾಹಿತಿಗಳಾದ ಡಾ.ಕೆ. ಎಸ್.ಗಂಗಾಧರ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ಜಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಜೀವನ ಸಂಜೆ ವೃದ್ಧಾ ಶ್ರಮದಲ್ಲಿ ಏರ್ಪಡಿಸಿದ್ದ ಉಷಾ ನರ್ಸಿಂಗ್ ಹೋಂನ ಡಾ.ಬಿ.ವೆಂಕ ಟರಾವ್ ಅವರು ತಮ್ಮ ತಂದೆ ದಿ.ಸಾಂಗ್ಲಿ ನಾರಾಯಣ ರಾವ್ ದತ್ತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ವೈದ್ಯಕೀಯ ಸಾಹಿತ್ಯದ ಮಹತ್ವ ಕುರಿತು ಮಾತನಾಡಿ ದರು.
ಅನೇಕ ಕ್ಲಿಷ್ಟಕರ ರೋಗಗಳ ಕುರಿತ ಅರಿವು ಸಮರ್ಪಕವಾಗಿ ಗುಣಪಡಿಸುವ ಮೊದಲ ಔಷಧ. ಅಂತಹ ಅರಿವು ಪಡೆಯಲು ವೈದ್ಯ ಸಾಹಿತ್ಯ ಓದಬೇಕು. ಅನೇಕ ವೈದ್ಯ ಸಾಹಿತಿಗಳು ಜನ ಸಾಮಾನ್ಯರಿ ಗಾಗಿ ಹಾಗೂ ವೈದ್ಯರಿಗಾಗಿ ಆರೋಗ್ಯ ಸಂಬಂಧಿತ ಪುಸ್ತಕಗ ಳನ್ನು ಅರ್ಪಿಸಿರುವುದು ಸ್ಮರಣೀ ಯ ಎಂದು ಹೇಳಿದರು.
ದೇವಂಗಿಯ ಡಿ.ಸಿ. ಚೈತನ್ಯ ದೇವ, ಡಾ.ಡಿ.ಸಿ. ಚೈತ್ರಾ, ಶ್ರೀನಿ ವಾಸ ಅವರು ತಮ್ಮ ತಂದೆ ದೇವ ಂಗಿ ಟಿ. ಚಂದ್ರಶೇಖರ ಹೆಸರಿನಲ್ಲಿ ನೀಡಿರುವ ದತ್ತಿ ಆಶಯದಂತೆ ಸಂಗೀತದಿಂದ ಸಾಹಿತ್ಯಕ್ಕೆ ಮೆರಗು ವಿಚಾರವಾಗಿ ಪ್ರಾಧ್ಯಾಪಕರಾದ ಡಾ. ಶುಭಾ ಮರವಂತೆ ಮಾತ ನಾಡಿ, ಸಂಗೀತ ಕೇಳುತ್ತಾ ಮುಖ ಭಾವದಲ್ಲಿ ಬದಲಾವಣೆ ಗಮ ನಿಸಬಹುದು. ಸಂಗೀತದಿಂದ ಅಪರಮಿತ ಅನುಭವ ಪಡೆಯಲು ಸಾಧ್ಯ. ಅದನ್ನು ವಿವರಿಸಲು ಶಬ್ದ ಗಳು, ಪದಗಳು ಬೇಕು. ಆ ಶಕ್ತಿ ತುಂಬಲು ಸಾಹಿತ್ಯದಿಂದ ಸಾಧ್ಯ. ನಾವು ನೀಡುವ ಪದಗಳು ಅರ್ಥ ಕೊಡು ತ್ತಾ ಹೋಗುತ್ತೆ. ಸಂಗೀತ ಸಾಹಿತ್ಯಕ್ಕೆ ಧ್ವನಿಯಾಗುತ್ತೆ ಎನ್ನುವು ದನ್ನು ವಿವರಿಸಿದರು.
ಜಿ ಕನ್ನಡ ಸಾಹಿತ್ಯ ಪರಿ ಷತ್ತು ಅಧ್ಯಕ್ಷರಾದ ಡಿ. ಮಂಜು ನಾಥ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳು ಮತ್ತು ಅವರ ಆಶಯ ಕುರಿತು ವಿವರಿಸಿದರು.
ಗಾಯಕರಾದ ಬಿ.ಟಿ. ಅಂ ಬಿಕಾ, ಮಹಾದೇವಿ, ಧರ್ಮೋ ಜಿರಾವ್ ಅವರು ವಿವಿಧ ಕನ್ನಡ ಗೀತೆಗಳನ್ನು ಹಾಡಿದರು. ಕಸಾಸಾಂ ವೇದಿಕೆ ಪ್ರಧಾನ ಕಾರ್ಯದರ್ಶಿ ಭೈರಾಪುರ ಶಿವಪ್ಪಗೌಡ ಸ್ವಾಗತಿಸಿ, ಕಸಾಪ ಜಿ ಕಾರ್ಯದರ್ಶಿ ಡಿ.ಗಣೇಶ್ ನಿರೂಪಿಸಿ, ಕವಿ ಗಳಾದ ಶ್ರೀನಿವಾಸ ನಗಲಾಪುರ ವಂದಿಸಿದರು.