ಶ್ರದ್ಧಾ ಭಕ್ತಿಯಿಂದ ಜರುಗಿದ ರಥೋತ್ಸವ…

ಶಿವಮೊಗ್ಗ: ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ, ಅಕ್ಕಮಹಾದೇವಿಯ ಭಾವಚಿತ್ರದೊಂದಿಗೆ ಇಂದು ಚೌಕಿಮಠದ ಆವರಣದಿಂದ ನಡೆಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಪದಾಧಿಕಾರಿಗಳಾದ ಎಸ್.ಪಿ.ದಿನೇಶ್, ಸುಭಾಶ್, ಎನ್.ಜೆ. ರಾಜಶೇಖರ್, ಕೆ.ಎಸ್. ತಾರಾನಾಥ್, ಮಹಾಲಿಂಗಯ್ಯ ಶಾಸ್ತ್ರಿ, ಪಿ. ರುದ್ರೇಶ್, ಡಾ. ಸಿ. ರೇಣುಕಾರಾಧ್ಯ, ಮೋಹನ್‌ಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ ಸೇರಿದಂತೆ ಹಲವು ಭಕ್ತರಿದ್ದರು.