ಶಿವಮೊಗ್ಗದಲ್ಲಿ ರಕ್ಷಾ ವಿವಿ ಕಾರ್ಯಾರಂಭ…
ಶಿವಮೊಗ್ಗ :ದೇಶದ ಯುವ ಜನರಲ್ಲಿ ದೇಶಾಭಿಮಾನ, ದೇಶ ಭಕ್ತಿ ಮತ್ತು ಅಭಿಮಾನ ಮೂಡಿ ಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ ೫ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭಗೊ ಳ್ಳಲಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲ ಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಗೊಳ್ಳುತ್ತಿರುವ ರಾಷ್ಟ್ರೀಯ ರಕ್ಷಾ ವಿವಿ ಉದ್ಘಾಟಿಸಿ ಮಾತನಾ ಡುತ್ತಿದ್ದರು. ದೇಶದ ರಕ್ಷಣಾ ಇಲಾಖೆಗೆ ಬಲತುಂಬುವ ನಿಟ್ಟಿ ನಲ್ಲಿ ಹಾಗೂ ರಾಜ್ಯದ ಯುವ ಜನಾಂಗಕ್ಕೆ ಅಗತ್ಯವಿರುವ ಯೋಜ ನೆಗಳನ್ನು ರೂಪಿಸಿ ಅನುಷ್ಠಾನಗೊ ಳಿಸುವಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಹೆಚ್ಚಿನ ಅನುದಾನವನ್ನು ಖರ್ಚು ಮಾಡುತ್ತಿದೆ ಎಂದವರು ನುಡಿದರು.
ಈ ವಿವಿ ಆರಂಭದಿಂದಾಗಿ ರಾಜ್ಯದ ಯುವಕರು ವಿಶೇಷ ಮಹ ತ್ವದ ಪದವಿ ಮತ್ತು ಸ್ನಾತಕೋತ್ತರ ತರಬೇತಿಗಳನ್ನು ಪಡೆಯಲಿzರೆ ಎಂದ ಅವರು, ಹೆಚ್ಚಿನ ಯುವಕರು ರಕ್ಷಣಾ ಘಟಕಗಳಲ್ಲಿ ಉದ್ಯೋಗಾ ವಕಾಶ ಪಡೆಯಲಿzರೆ ಎಂದ ವರು ನುಡಿದರು.
ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ದೇಶದ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸಲಿಚ್ಚಿಸುವ ಯುವಕರಿಗೆ ಇಲ್ಲಿನ ವಿವಿ ತರಬೇತಿ ಪಡೆಯುವು ದರಿಂದಾಗಿ ಉದ್ಯೋಗಾವಕಾಶ ಗಳು ಲಭಿಸಲಿವೆ. ಅದಕ್ಕಾಗಿ ಇಂದು ರಾಜ್ಯವು ರಕ್ಷಾ ವಿವಿಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿ ಕೊಂಡಿದೆ ಎಂದ ಅವರು, ದೇಶದ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಹಾಗೂ ಸಶಕ್ತ ಭಾರತ ನಿರ್ಮಿಸು ವಲ್ಲಿ ಈ ವಿವಿ ಸಹಕಾರಿಯಾಗಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಉಖಿಸಿ ದಂತೆ ಇಲ್ಲಿ ಶಿಕ್ಷಣ ಪಡೆವ ಪ್ರತಿ ವಿದ್ಯಾರ್ಥಿಯೂ ಭಾರತದ ಅನರ್ಘ್ಯ ರತ್ನಗಳಾಗಿ ಹೊರ ಹೊಮ್ಮಲಿzರೆ. ಇಲ್ಲಿನ ವಿದ್ಯಾ ರ್ಥಿಗಳ ಭವಿಷ್ಯ ಉಜ್ವಲವಾಗಿರ ಲಿದೆ. ಎಂದ ಅವರು, ಇಲ್ಲಿನ ಮೂಲಭೂತ ಸೌಕರ್ಯಗಳು, ಸ್ಮಾರ್ಟ್ ಗ್ರಂಥಾಲಯ, ವಿದ್ಯಾ ರ್ಥಿನಿಲಯ, ಅತ್ಯಾಧುನಿಕ ತರಬೇತಿ ಕೇಂದ್ರಗಳು ಸೇರಿದಂತೆ ಭೌತಿಕ ಸ್ವರೂಪದ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ೧೦ಕೋಟಿ ರೂ.ಗಳ ಅನುದಾನ ಮಂಜೂ ರಾಗಿದೆ ಎಂದರು.
ಜಿಯಲ್ಲಿ ಕಳೆದ ೬-೮ ವರ್ಷಗಳ ಅವಧಿಯಲ್ಲಿ ಹಿಂದೆಂ ದೂ ಕಂಡಿರದ ಅಭಿವೃದ್ಧಿ ಕಾರ್ಯ ಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅವುಗಳಲ್ಲಿ ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆ, ಆಯುಷ್, ರಕ್ಷಾ ವಿವಿ ಆರಂಭ ಗೊಳ್ಳುತ್ತಿರುವುದು ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯಾಗಿದೆ ಎಂದು ಭಾವಿಸ ಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದ ರಾಷ್ಟ್ರೀಯ ರಕ್ಷಾ ವಿವಿಯ ಉಪಕುಲಪತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ನಿರ್ದೇಶಕರ ಡಾ|| ಆನಂದಕುಮಾರ್ ತ್ರಿಪಾಠಿ ಅವರು ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಬೇತಿ ಗಳು ಆರಂಭಗೊಳ್ಳಲಿವೆ.
ಪೊಲೀಸ್ ಆಡಳಿತ ಮತ್ತು ಆಂತರಿಕ ಭದ್ರತೆ, ಕೃತಕ ಬುದ್ದಿ ಮತ್ಯೆ, ಯಂತ್ರಕಲಿಕೆ, ದತ್ತಾಂಶ ವಿeನ, ಅಪರಾಧಶಾಸ್ತ್ರ, ವರ್ತ ನೆಯ ವಿeನ, ಡಿಜಿಟಲ್ ಫೋರೆ ನ್ಸಿಕ್, ಪೋರೆನ್ಸಿಕ್ ಸೈಕಾಲಜಿ, ಮಿಲಿಟರಿ ವ್ಯವಹಾರಗಳು- ತಂತ್ರಗಳು ಮತ್ತು ಲಾಜಿಸ್ಟಿಕ್ಸ್, ಭದ್ರತೆ ಮತ್ತು ಅಪರಾಧ, ಕಾನೂನುಗಳು, ಕರಾವಳಿ ಕಡಲ ಮುಂತಾದ ವಿeನ ಕ್ಷೇತ್ರಗಳಲಿ ವಿದ್ಯಾರ್ಥಿಗಳಿಗೆ ಬೋದನೆ ನಡೆಯಲಿದೆ. ವಾಯು ಮತ್ತು ಬಾಹ್ಯಾಕಾಶ ಭದ್ರತೆ, ಅನ್ವಯಿಕ ವಿeನ ಮತ್ತು ಇಂಜಿನಿಯರಿಂಗ್ ಮತ್ತು ತಂತ್ರeನ, ವಿದೇಶಾಂಗ ವ್ಯವಹಾರಗಳು, ವಿದೇಶಿ ಭಾಷೆ ಗಳು, ರಾಜಕೀಯ ಆರ್ಥಿಕತೆ, ಕ್ರೀಡೆ ಮತ್ತು ದೈಹಿಕ ಶಿಕ್ಷಣ ವಿಷಯಗಳಲ್ಲಿ ತರಬೇತಿ ಗಳು ನಡೆಯಲಿವೆ ಎಂದ ಅವರು, ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್, ಇಂಟರ್ನ್‌ಶಿಫ್ ಮತ್ತು ಪ್ಲೇಸ್‌ಮೆಂಟ್, ಹಣಕಾಸಿನ ನೆರವು ಒದಗಿಸುತ್ತದೆ. ಅಲ್ಲದೆ ಇಲ್ಲಿ ವಿಶೇ ಷ ತರಬೇತಿ ಪಡೆದ ವಿದ್ಯಾರ್ಥಿಗ ಳಿಗೆ ರಾಜ್ಯ ಸರ್ಕಾರವು ನೇಮಕಾತಿ ಯಲ್ಲಿ ಆದ್ಯತೆ ನೀಡು ವಲ್ಲಿ ಕ್ರಮ ವಹಿಸಬೇಕೆಂದವರು ನುಡಿದರು.
ಬೆಂಗಳೂರಿನಲ್ಲಿ ಕೇಂದ್ರ ಗೃಹಸಚಿವ ಅಮಿತ್‌ಶಾ ಅವರು ವರ್ಚುವಲ್ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹಸಚಿವ ಆರಗeನೇಂದ್ರ ಸೇರಿದಂತೆ ಸಂಬಂಧಿತ ಇಲಾಖೆಗಳ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಅಂತೆಯೇ ರಾಗಿಗುಡ್ಡದಲ್ಲಿ ನಡೆದ ಸಮಾರಂಭದಲ್ಲಿ ಜಿಧಿಕಾರಿ ಡಾ|| ಆರ್.ಸೆಲ್ವಮಣಿ, ಜಿ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ರಕ್ಷಾ ವಿವಿಯ ಧರ್ಮೇಂದ್ರಕುಮಾರ್, ವಿ.ಪಿ. ಸಿಂಗ್‌ಶೇಖಾವತ್ ಇದ್ದರು.