ಏ.೧೦ರಿಂದ ಕುಪ್ಪಳಿಯಲ್ಲಿ ಮಳೆಬಿಲ್ಲು ಬೇಸಿಗೆ ಶಿಬಿರ…

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ಸಾಗರದ ಸ್ಪಂದನ ಸಂಸ್ಥೆಯು ಪ್ರತಿ ವರ್ಷ ನಡೆಸುವ ಮಳೆಬಿಲ್ಲು ರಾಜ್ಯ ಮಟ್ಟದ ಮಕ್ಕಳ ರಂಗತರಬೇತಿ ಶಿಬಿರವು ಈ ವರ್ಷ ಏ.೧೦ ರಿಂದ ೨೩ರವರೆಗೆ ನಡೆಯಲಿದೆ.
ಕುವೆಂಪು ಆಶಯಗಳನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ರಸಋಷಿಗೆ ರಂಗನಮನ ಹೆಸರಿನಲ್ಲಿ ಕುವೆಂಪು ಬರಹಗಳನ್ನು ಕೇಂದ್ರ ವಾಗಿಟ್ಟುಕೊಂಡು ಪ್ರತಿ ವರ್ಷ ಮಕ್ಕಳ ರಂಗ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಇದು ೯ನೇ ವರ್ಷದ ರಂಗ ಶಿಬಿರವಾಗಿದ್ದು, ರಾಜ್ಯದ ವಿವಿಧೆಡೆ ಗಳಿಂದ ಬರುವ ಮಕ್ಕಳು ಕುಪ್ಪಳಿ ಯ ಉಳಿದು ಕುವೆಂಪು ಹುಟ್ಟಿ ಬೆಳೆದ ಪರಿಸರವನ್ನು ಆಸ್ವಾದಿಸು ತ್ತಾರೆ, ಕುವೆಂಪು ನಾಟಕಗಳ ಪಾತ್ರವಾಗುತ್ತಾರೆ, ಕುವೆಂಪು ಬರಹಗಳ ಓದುಗರಾಗುತ್ತಾರೆ.
ಸ್ಪಂದನ ತಂಡದ ಎಂ.ವಿ. ಪ್ರತಿಭಾ ನಿರ್ದೇಶನದಲ್ಲಿ ರಂU ಶಿಬಿರ ನಡೆಯಲಿದ್ದು ಏ. ೧೦ರಂದು ಬೆಳಿಗ್ಗೆ ೯.೩೦ಕ್ಕೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಶಿಬಿರವನ್ನು ಉದ್ಘಾಟಿಸುವರು.
ರಂಗ ಕಲೆಯನ್ನೇ ಮುಖ್ಯ ಉದ್ದೇಶವಾಗಿರಿಸಿಕೊಂಡು ನಡೆಯುವ ಶಿಬಿರದಲ್ಲಿ ಚಾರಣ, ಗ್ರಾಮೀಣ ಆಟಗಳು, ಹೋಳಿ, ರಂಗಗೀತೆಗಳ ಕಲಿಕೆ, ಕುವೆಂಪು ಸಾಹಿತ್ಯ ಮತ್ತು ಕವನಗಳ ಕುರಿತಾದ ಚರ್ಚೆ, ಸಿನಿಮಾ ಪ್ರದರ್ಶನ, ಪರಿಸರ ಶಿಕ್ಷಣ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಏ.೨೩ರ ಸಂಜೆ ಸಮಾರೋಪ ಸಮಾರಂಭದಲ್ಲಿ ಶಿಬಿರದ ಮಕ್ಕಳಿಂದ ಕುವೆಂಪುರವರ ನನ್ನ ಗೋಪಾಲ ಹಾಗೂ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ ಪ್ರದರ್ಶನವಿರುತ್ತದೆ.