ಮಳೆ: ಹನುಮಸಾಗರದಲ್ಲಿ ಎರಡು ಮನೆಗಳಿಗೆ ಹಾನಿ..
ಹೊನ್ನಾಳಿ: ಅ.೨ರ ಬುಧವಾರ ದಿಂದ ಅ.೧೪ರ ನಿನ್ನೆಯವರೆಗೆ ಸುರಿದ ಮಳೆಯಿಂದ ತಾಲ್ಲೂಕಿನಒಟ್ಟು ೯ ಮನೆಗಳಿಗೆ ಹಾನಿಯಾಗಿದ್ದು ಇದುವರೆಗೂ ಯಾವುದೇ ಜೀವ ಹಾನಿಯಾಗಿ ರುವುದಿಲ್ಲವೆಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.
ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಭಾನುವಾರರಾತ್ರಿ ಸುರಿದ ಮಳೆಯಿಂದ ಹಾನಿಯಾದ ದೇವಮ್ಮ ಕೊಂ. ನಾಗೇಶಪ್ಪ, ರೇಖಾಭಾಯಿ ಮನೆಗಳನ್ನು ವೀಕ್ಷಿಸಿ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಸೆ.೩೦ರ ಅವಧಿಯಲ್ಲಿ ಮಳೆಹಾನಿ ಪ್ರಮಾಣದ ಗೈಡ್‌ಲೈನ್ ಮುಗಿದ್ದಿದ್ದು. ಹೊಸ ಗೈಡ್‌ಲೈನ್ ಅಡಿ ಪರಿಶೀಲನೆ ನಡೆಸಿ ಸರ್ಕಾರದಆದೇಶದ ಮೇರಿಗೆ ಮನೆಯೊಂದಕ್ಕೆ ೬೫೦೦ ರೂ ಗಳನ್ನು ಕೊಡಬಹುದೆಂದುತಿಳಿಸಿದರು.
ಭಾನುವಾರರಾತ್ರಿ ಹನುಮ ಸಾಗರ ಗ್ರಾಮದ ೧ ಪಕ್ಕಾ ಮತ್ತು ೧ ಕಚ್ಚಾ ಮನೆಯು ಮಳೆಗೆ ಹಾನಿ ಯಾಗಿದ್ದು, ಇದುವರೆಗೂ ಹಾನಿ ಯಾಗಿರುವ ಮನೆಗಳ ಮಾಹಿತಿ ಯನ್ನು ಜಿಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಲಾಗಿದ್ದು ಶೀಘ್ರ ದಲ್ಲಿಯೇ ಸರ್ಕಾರದ ನಿಯಮಾವ ಳಿಗಳ ಪ್ರಕಾರ ಮನೆಯಿಂದ ಹಾನಿಯಾದವರಿಗೆ ಪರಿಹಾರ ನೀಡುವುದಾಗಿ ತಿಳಿಸಿದರು.
ರಾಜಸ್ವ ನಿರೀಕ್ಷಕ ಸುಧೀರ್, ಗ್ರಾಮ ಆಡಳಿತಾಧಿಕಾರಿ ಮುನೇಶ್ ಮತ್ತು ಹನುಮಸಾಗರಗ್ರಾ.ಪಂ ಸದಸ್ಯ ಎಲ್.ಮಂಜಪ್ಪ ಇದ್ದರು.