ರೈಲ್ವೇ ಒಹೆಚ್‌ಇ ತಾಮ್ರದ ತಂತಿ ಕಳ್ಳತನ ಮಾಡಿದ ಆರೋಪಿಗಳ ಬಂಧನ

ಶಿವಮೊಗ್ಗ :ಸಾಗರದ ಆನಂದ ಪುರ ಬಳಿ ಸುಮಾರು ರೂ.೨ ಲಕ್ಷ ಮಲ್ಯದ ರೈಲ್ವೇ ಒಹೆಚ್‌ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ ೩ ಮಂದಿ ಆರೋಪಿಗಳು ಮತ್ತು ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಮೈಸೂರು ರೈಲ್ವೇ ರಕ್ಷಣಾ ವಿಶೇಷ ತಂಡ ಬಂಧಿಸಿದೆ.
ಬುಧವಾರ ರಾತ್ರಿ ರೈಲ್ವೆ ರಕ್ಷಣಾ ಪಡೆಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ ನಿಶಾದ್ ನೇತೃತ್ವದಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ.
ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ನಾಲ್ಕು ಚಕ್ರದ ವಾಹನ (ಟಾಟಾ ಏಸ್) ಮತ್ತು ೧ ದ್ವಿಚಕ್ರ ವಾಹನ, ಕಟ್ಟರ್ ಮತ್ತು ಲ್ಯಾಡರ್ ಟ್ರಾಲಿ ಅಥವಾ ರೈಲ್ವೆ ವಿದ್ಯುದ್ದೀ ಕರಣ ಉಪಕರಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.


ಕುಂಸಿಗೆ ಸೇರಿದ ನೂರು ತಂದೆ ಬಾಬಾ ಜನ್, ಮಂಜು ತಂದೆ ಆನಂದಪ್ಪ ಮತ್ತು ಹರೀಶ ತಂದೆ ಮಂಜಪ್ಪ ಇವರನ್ನು ಬಂಧಿಸಲಾಗಿದೆ ಹಾಗೂ ಕಳ್ಳತನ ಮಾಡ ಲಾದ ತಾಮ್ರದ ತಂತಿ ಖರೀದಿಸಿದ್ದ ಶಿವಮೊಗ್ಗದ ಐಶ್ವರ್ಯ ಸ್ಟೀಲ್ಸ್ ಮಾಲೀಕ ನಾರಾಯಣ, ಸ್ವಸ್ತಿಕ್ ಸ್ಟೀಲ್ಸ್ ಮಾಲೀಕ eನೇಶ್ವರ ಒಟ್ಟು ೫ ಮಂದಿಯನ್ನು ಬಂಧಿಸಿ ಇವರಿ ಂದ ಸುಮಾರು ೨ ಲಕ್ಷ ಮಲ್ಯದ ೨೦೦ ಕೆ.ಜಿ ತಾಮ್ರದ ತಂತಿಗಳನ್ನು ದಿನಾಂಕ ೧೪.೦೯.೨೦೨೩ ರಂದು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನದ ಹಿನ್ನೆಲೆ : ಸೆ.೬ ಮತ್ತು ೭ ರಂದು ರಾತ್ರಿ ರೂ. ೨ ಲಕ್ಷ ಮಲ್ಯದ ಸುಮಾರು ೨೬೦ ಮೀಟ ರ್ ರೈಲ್ವೆ ಒಹೆಚ್‌ಇ ತಾಮ್ರದ ತಂತಿಯನ್ನು ಶಿವಮೊಗ್ಗದ ಸಾಗರ ಮತ್ತು ಆನಂದಪುರ ಮಧ್ಯದ ರೈಲು ನಿಲ್ದಾಣ ಕಿ. ಮೀ.ಸಂಖ್ಯೆ ೧೨೦/೮೦೦ ರ ಬಳಿ ಕಳ್ಳತನ ಮಾಡ ಲಾಗಿತ್ತು.
ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾ ಲ್ ರವರ ಸೂಚನೆಯಂತೆ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗೀಯ ರೈಲ್ವೆ ರಕ್ಷಣಾ ಆಯುಕ್ತರಾದ ಜೆ ಕೆ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸ್ ಮತ್ತು ಆರ್‍ಪಿಎಫ್‌ನ ಶ್ವಾನ ದಳವನ್ನು ಸೇವೆಗೆ ಕರೆ ತರತಂದು ಪ್ರಕರಣದ ಪತ್ತೆಗೆ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಂ ನಿಶಾದ್, ಕ್ರೈಂ ಇನ್ಸ್‌ಪೆಕ್ಟರ್ ಮೈಸೂರು ಮತ್ತು ಶಿವಮೊಗ್ಗ ಇನ್ಸ್‌ಪೆಕ್ಟರ್ ಬಿ ಎನ್ ಕುಬೇರಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.
ಈ ತಂಡ ದಿನಾಂಕ ೭/೯/೨೩ ರಂದು ಶಂಕಿರನ್ನು ಗುರುತಿಸಿ, ಮೂಲ ಮಾಹಿತಿಯ ಆಧಾರದ ಮೇಲೆ ಮತ್ತು ಶಂಕಿತರ ಟವರ್ ಡಂಪ್ ಮತ್ತು ಕರೆ ದಾಖಲೆಗಳಿ ಗಾಗಿ ಅರ್ಜಿ ಸಲ್ಲಿಸಿ, ೧೨/೯/೨೩ ರಂದು, ಟವರ್ ಡಂಪ್ ಮತ್ತು ಕರೆ ದಾಖಲೆಗಳನ್ನು ಸ್ವೀಕರಿಸಿ ಶಂಕಿತರ ಗುರುತು, ಪತ್ತೆ ಹಚ್ಚಿತು. ಮತ್ತು ಅವರ ಚಲನ ವಲನಗಳ ಮೇಲೆ ನಿಗಾ ಇಡಲಾಯಿತು. ಬುಧವಾರ (ನಿನ್ನೆ) ವಿಶೇಷ ತಂಡವು ಆರೋಪಿ ಗಳ ವಿಳಾಸ, ಚಲನಗಳನ್ನು ಪತ್ತೆ ಮಾಡಿ, ಅವರನ್ನು ವಶಕ್ಕೆ ಪಡೆದು ಬಂಧಿಸಿತು.ಈ ಎ ೫ ಬಂಧಿತ ಆರೋಪಿ ಗಳನ್ನು ಸಾಗರದ ಘನ ನ್ಯಾಯಾಲ ಯದ ಮುಂದೆ ಹಾಜರು ಪಡಿಸ ಲಾಗಿದೆ. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ರೈಲ್ವೆ ಒಹೆಚ್‌ಇ ಕಳ್ಳರ ಗುಂಪನ್ನು ಸೆರೆ ಹಿಡಿದ ಆರ್. ಪಿ. ಎಫ್ ನ ವಿಶೇಷ ತಂಡದ ಕಾರ್ಯವನ್ನು ಶ್ಲಾಘಿಸಿ zರೆ.
ಸದರಿ ಪ್ರಕರಣವನ್ನು ಭೇದಿಸು ವಲ್ಲಿ ಆರ್. ಪಿ. ಎಫ್ ನ ವಿಶೇಷ ತಂಡದಲ್ಲಿ ಎಸ್‌ಐಗಳಾದ ಸಂತೋ ಷ ಗಾಂಕರ್, ಜ್ಯೋತಿ ಸ್ವರೂಪ್, ಎಎಸ್‌ಐಗಳಾದ ತಮ್ಮಯ್ಯ, ಅನ್ವರ್ ಸಾದಿಕ್, ಬಿ. ಆನಂದ್, ವಿ. ಸುರೇಶ,, ಶರಣಪ್ಪ, ಮತ್ತು ಮುಖ್ಯ ಪೇದೆಗಳಾದ ಎಚ್. ಆರ್. ರಮೇಶ್, ಕುಮಾರ್, ಡಿ. ಚೇತನ್, ಫಯಾಜ್ ಅಹ್ಮದ್, ವಿ. ಕುಮಾರ್ ಮತ್ತು ಪೇದೆಗಳಾದ ಪ್ರವೀಣ್ ಕುಮಾರ್, ಪರಮೇಶ್ವರಪ್ಪ, ಏಳಂಗೋವನ್ ಈರೇಶಪ್ಪ, ಪ್ರಕಾಶ್ ಮತ್ತು ರಾಘವೇಂದ್ರ ಇದ್ದರು.