ರಾಗಿ ಗುಡ್ಡ ಅಪರೂಪದ ಜೈವಿಕ ತಾಣ: ಬನ್ನಿ ರಾಗಿ ಗುಡ್ಡ ಉಳಿಸೋಣ….

ಅಯ್ಯೋ ಸುಟ್ಟು ಭಸ್ಮವಾಗಿದೆ ರಾಗಿ ಗುಡ್ಡದ ಸಸ್ಯ ಸಂಪತ್ತು: ನವ್ಮೂರು ಶಿವಮೊಗ್ಗದ ರಾಗಿಗುಡ್ಡ ತನ್ನ ಸಹಜ ಸೌಂದರ್ಯದಿಂದ ಬೀಗುತ್ತಿದ್ದ ಗುಡ್ಡ. ಶಿವಮೊಗ್ಗಕ್ಕೆ ಕಳಸ ಪ್ರಾಯವಾಗಿದ್ದ ಸಹಜ ಸುಂದರ ರಾಗಿ ಗುಡ್ಡದಿಂದ ತೇಲಿ ಬರುತ್ತಿದ್ದ ಮಂದ ಮಾರುತ ಗಾಳಿ ಶಿವಮೊಗ್ಗದ ಜನತೆಗೆ ಶುದ್ಧ ಗಾಳಿ, ಪರಿಶುದ್ಧ ಆಮ್ಲಜನಕ ನೀಡುತ್ತಿತ್ತು. ತನ್ನೊಡಲ ಮೇಲೆ ಮುತ್ತುಗ, ಚಂದ್ರ, ಹೊನ್ನೆ, ಹಾಲುಮಡ್ಡಿ, ತಡಸಲು, ಕದಿರ, ಅತ್ತಿ, ಆಲ, ಸಾಗುವಾನಿ, ಬನ್ನಿಯಂತಹ ನೂರಾರು ಮರ, ಗಿಡಗಳು, ಹೇರಳ ಔಷಧಿಯ ಸಸ್ಯಗಳನ್ನು ಬೆಳೆಸಿಕೊಂಡು ಮಳೆಯ ಮಾರುತಗಳನ್ನು ತನ್ನತ್ತ ಸೆಳೆದು ಈ ಭೂಮಿಗೆ ಸಮದ್ಧವಾದ ನೀರುಣಿಸುವ ಕಾಯಕದಲ್ಲಿ ನಿರತವಾಗಿತ್ತು.
ರಾಗಿ ಗುಡ್ಡದ ಮಣ್ಣಿನ ಗುಣ: ಮೃದು ಕಲ್ಲಿನ ಪದರನ್ನು ಹೊಂದಿ ಸಹಜವಾದ ಪೊಠರೆಯಂತಹ ಬಿಲಗಳನ್ನು ಹೊಂದಿರುವ ಈ ಗುಡ್ಡ ಅನೇಕ ಬಿಲಗಳನ್ನು ಸಹಜವಾಗಿ ನಿರ್ಮಿಸಿಕೊಂಡು ತನ್ನೊಡಲ ಒಳಗೆ ಅದೆಷ್ಟೋ ಜೀವ ಸಂಕುಲಗಳಿಗೆ ಆಶ್ರಯ ನೀಡಿತ್ತು. ಬಗೆಬಗೆಯ ಕೀಟಗಳು, ಸರೀಸಪಗಳು, ಸಣ್ಣ ಪ್ರಾಣಿಗಳ ವಾಸಸ್ಥಾನವಾಗಿ ಜೀರುಂಡೆ, ಜೇನುಗಳುಗಳು, ನವಿಲು, ಮುಂಗುಸಿ, ಅಳಿಲು, ಮೊಲ, ಹಲವು ಬಗೆಯ ಪಕ್ಷಿಗಳ ಇಂಚರವ ಆಲಿಸುತ್ತಾ ತನ್ನಷ್ಟಕ್ಕೆ ತನ್ನ ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯಿಂದ ಇತ್ತು. ಈ ಗುಡ್ಡ. ಎಷ್ಟೆಲ್ಲ ಜೀವ ಸಂಕುಲಗಳ ನೆಲೆಯಾಗಿದ್ದ ರಾಗುಡ್ಡಕ್ಕೆ ಈಗ ಮಾನವ ಧಾಳಿ ಇಟ್ಟು, ಬೆರಳೆಣಿಕೆ ದಿನಗಳಲ್ಲಿ ಶೇ. ೬೦ರಷ್ಟು ಪ್ರದೇಶಕ್ಕೆ ಬೆಂಕಿ ಇಟ್ಟು ಭಸ್ಮ ಮಾಡಿ ಬಿಟ್ಟಿzನೆ. ಅಭಿವೃದ್ಧಿ ಹೆಸರಿನ ಕದಂಬ ಬಾಹುವಿನ ಹಿಡಿತಕ್ಕೆ, ಕೊನೆಯಿಲ್ಲದ ಆಸೆಗೆ ಧುಮುಕಿ ರಾಗಿ ಗುಡ್ಡವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿzನೆ. ಇನ್ನು ತನ್ನ ಕೊನೆಗಾಲ ಸಮೀಪಿಸುತ್ತಿದೆ ಎಂದು ರಾಗಿ ಗುಡ್ಡ ರುದ್ರ ಮನಕ್ಕೆ ಶರಣಾಗಿ ಬಿಟ್ಟಿದ್ದು, ಪರಿಸರ ಪ್ರೇಮಿಗಳು ಪೇಚಾಡುವ ಧನಿ ಕೇಳಿ ಬರುತ್ತಿದೆ.
ನಾಗರೀಕ ಬಾಂಧವರೆ ಇದು ನವ್ಮೂರು ಶಿವಮೊಗ್ಗದ ಒಳಗಿರುವ ನಮ್ಮ ರಾಗಿ ಗುಡ್ಡದ ವ್ಯಥೆಯ ಕಥೆ. ಇಂತಹ ಗುಡ್ಡಗಳು ಅದೆಷ್ಟು ಜನರ ದುರಾಸೆಗೆ ಬಲಿಯಾಗಿದೆಯೋ ಗೊತ್ತಿಲ್ಲ.. ಆದರೆ ನಮ್ಮ ಕಣ್ನೆದುರಿನ ಗುಡ್ಡ ಕರ್ಪೂರದಂತೆ ಕರುಗಿತ್ತಿರುವುದು ಸುಳ್ಳಲ್ಲ.
ಬಂಧುಗಳೆ ನಿಮಗೆ ಗೊತ್ತಿದೆಯೇ? ರಾಗಿಗುಡ್ಡದಲ್ಲಿ ನೀರಿನ ಒರತೆ ಮತ್ತು ಫಲವತ್ತತೆಯನ್ನು ಕಾಪಾಡುವ ಗಿಡಗಳು ಸಾವಿರ ಸಂಖ್ಯೆಯಲ್ಲಿ ಇದ್ದವು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಶೇ. ೭೫ರಷ್ಟು ಮರ, ಗಿಡ, ಪೊದರುಗಳು ಸುಟ್ಟು ಭಸ್ಮವಾಗಿದೆ. ಸಾವಿರಾರು ವರುಷಗಳಿಂದ ನಮ್ಮ ಊರಿನ ರಾಗಿಗುಡ್ಡದಲ್ಲಿ ಔಷಧಿಯ ಸಸ್ಯಗಳು ಮತ್ತು ಅನೇಕ ಧಾರ್ಮಿಕ ಕ್ರಿಯೆಗಳಿಗೆ ಬೇಕಾದ ಸಸ್ಯಗಳನ್ನು ತನ್ನ ಒಡಲಲ್ಲಿ ಹೊಂದಿದ್ದ ಗುಡ್ಡವಿಂದು ಸುಟ್ಟು ಭಸ್ಮವಾಗಿದೆ.
ಪ್ರಾಕತಿಕವಾಗಿ ರಾಗಿಗುಡ್ಡದ ಮಹತ್ವ: ಸೌಂದರ್ಯಕ್ಕೆ ಮುಖ್ಯ ಕಾರಣ ನಮ್ಮ ಸುತ್ತಲಿನ ಪ್ರಕೃತಿ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಗಿ ಗುಡ್ಡವು ೧೦೦ ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶವನ್ನು ಹೊಂದಿದೆ. ೫೦ ವರ್ಷಗಳ ಹಿಂದಿನವರೆಗೂ ತುಂಬ ದಟ್ಟವಾದ ಕಾಡಿನಿಂದ ಈ ರಾಗಿಗುಡ್ಡ ಆವತ್ತವಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಬೆಳಿಗ್ಗೆ ಅಥವಾ ಸಂಜೆ ೫.೩೦ಕ್ಕೆ ಇಲ್ಲಿಗೆ ಭೇಟಿ ನೀಡಿದರೆ ತಂಪಾದ ಹವೆ, ಮೋಡಗಳು ಕೈಗೆಟುಕುವಂತೆ ಪುಲಕ, ಪೂರ್ವದಲ್ಲಿ ಸೋರ್ಯೋದಯ, ಪಶ್ಚಿಮದಲ್ಲಿ ಸೂರ್ಯಾಸ್ತ ನೋಡಲು ಸಿಗುತ್ತದೆ. ಕಿತ್ತಲೆ ಹಣ್ಣಿನ ಆಕಾರದಲ್ಲಿ ಹುಟ್ಟುವ/ ಮುಳುಗುವ ಸೂರ್ಯ, ತನ್ನ ವಿಭಿನ್ನ ಬಣ್ಣಗಳಿಂದ ಸುತ್ತಲಿನ ಪ್ರದೇಶವನ್ನು ಆವರಿಸಿ ರಂಗಿನಾಟದಲ್ಲಿ ನಮ್ಮನ್ನು ಮಿಂದೇಳಿಸುತ್ತದೆ. ಸೊಬಗಿನ ಚಿತ್ತಾರವು ನಾವ್ಯಾವುದೋ ಸ್ವರ್ಗ ಲೋಕದಲ್ಲಿರುವಂತೆ ಭಾಸವಾಗುತ್ತದೆ (ವಾಗುತ್ತಿತ್ತು). ಕಣ್ಣು ಹಾಯಿಸಿದಷ್ಟು ದೂರದವರೆಗೂ ಹಬ್ಬಿದ್ದ ಗಿಡ, ಬೆಟ್ಟಗಳ ಸಾಲು ಬೆಳಗಿನ ಸೂರ್ಯೋದಯ, ಸಂಜೆಯ ಸೂರ್ಯಾಸ್ತದ ಬೆಳಕಿನ ವಕ್ರೀಭವನ ಕ್ರಿಯೆಯನ್ನು ಸಾದರಪಡಿಸುತ್ತಾ, ಮನ ತುಂಬಿಸುತ್ತಿತ್ತು.
ಈ ಗುಡ್ಡದ ಮೇಲೆ ಬಿದ್ದ ಮಳೆ ನೀರು ಭೂಮಿಯೊಳಗೆ ಇಂಗಿ ಹತ್ತಿರದ ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಿ ಗz, ಬಯಲು, ಮನೆ, ಮಠಗಳಿಗೆ ನೀರು ಒದಗಿಸುತ್ತಿತ್ತು ಎನ್ನುತ್ತಾರೆ. ಇದೀಗ ಈ ಗುಡ್ಡದ ಸುತ್ತಲೂ ಇದ್ದ ಹಲವು ಕೆರೆಗಳು ಜನರ ಆಹುತಿಗೆ ಬಲಿಯಾಗಿದ್ದು, ಈಗ ಉಳಿದಿರುವ ಗುಡ್ಡದ ಪಶ್ಚಿಮ ಭಾಗದಲ್ಲಿ ಒಂದು ಕೆರೆ, ಪರ್ವ ಭಾಗಕ್ಕೆ ಎರಡು ಕೆರೆಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿವೆ. ಇತ್ತೀಚಿನವರೆಗೆ ರಾಗಿಗುಡ್ಡದಿಂದ ಪಶ್ಚಿಮ ಭಾಗದ ನವಿಲೆ ಕೆರೆಗೆ ರಾಗಿಗುಡ್ಡದಲ್ಲಿ ಬಿದ್ದ ನೀರು ಜರಿಯಾಗಿ ಹರಿದು ಉಕ್ಕಿ ಹರಿಯುತ್ತಿತ್ತು. ಈಗ ಅಲ್ಲಿ ಕ್ರೀಡಾಂಗಣ ನಿರ್ಮಾಣವಾಗಿ ಕೆರೆ ಇತಿಹಾಸದ ಪುಟಗಳನ್ನು ಸೇರಿರುವುದು ಎಲ್ಲರಿಗೂ ತಿಳಿದ ಕಟು ಸತ್ಯ. ಅವಶೇಷದಂತಿರುವ ಅಳಿದುಳಿದ ಭಾಗವು ಮಾನವನ ನಿರ್ಲಕ್ಷದಿಂದ ಬತ್ತಿದೆ. ಮತ್ತೆ ಕೆರೆಯಲ್ಲಿ ಜಂಡು ತುಂಬಿ ಮಾನವನ ಕದಂಬ ಬಾಹುಗಳು ಯಾವಾಗ ತನ್ನತ್ತ ಚಾಚಬಹುದು ಎಂದು ಬಿರುಗಣ್ಣ ಬಿಟ್ಟು ನೋಡುತ್ತಿದೆ.
ರಾಗಿಗುಡ್ಡ ಉಳಿಸಿ ಹೋರಾಟಗಾರರ ಗುರಿ: ಕೂಗು: ಪ್ರಸ್ತುತ ರಾಗಿಗುಡ್ಡದ ಸುತ್ತಲು ಉಳಿದಿರುವ ಬೆರಳೆಣಿಕೆ ಕೆರೆಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ರಕ್ಷಿಸುವ ದಿಸೆಯಲ್ಲಿ ಬೇಲಿಯನ್ನು ನಿರ್ಮಿಸಿ, ಜೈವಿಕ ವನ ಎಂದು ಘೋಷಿಸಿ, ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಅಳಿದುಳಿದ ಜೀವಿಗಳು, ಸಸ್ಯ ಪ್ರಭೇಧಗಳು, ನೀರಿನ ಒರತೆಗಳನ್ನು ಸಂರಕ್ಷಿಸಬೇಕು ಎಂಬುದಾಗಿದೆ.
ವೈವಿಧ್ಯಮಯ ಮರ, ಗಿಡ ಗಂಟಿಗಳಿಂದ ತುಂಬಿದ್ದ ರಾಗಿಗುಡ್ಡ ಮನುಷ್ಯನ ಧಾಳಿಗೆ ಒಳಗಾಗಿದೆ. ಶೇ. ೭೦ರಷ್ಟು ಆಕ್ರಮಿತ ವಾಗಿರುವ ಪ್ರದೇಶದಲ್ಲಿ ನಿತ್ಯ ಬೆಂಕಿ ಹಚ್ಚುವುದು, ಗ್ರಾನೈಟ್ ಸಿಡಿಸುವುದು, ಗುಡ್ಡ ಕಡಿಯುವುದು ನಡೆದಿದೆ. ಕಳೆದ ೨೫ ವರ್ಷಗಳ ಹಿಂದೆಯೇ ರಾಗಿಗುಡ್ಡದ ವ್ಯಾಪ್ತಿಯಲ್ಲಿದ್ದ ಜಗವನ್ನು ಡಾ: ಅಂಬೇಡ್ಕರ್ ಮಿಷನ್ ವಸತಿ ಶಾಲೆಗೆ ೨೫ ಎಕರೆಯಷ್ಟು ಭೂಮಿಯನ್ನು ನೀಡಿ ಆ ಶಾಲೆ ತನ್ನ ಬಾಹುಗಳನ್ನು ವಿಸ್ತರಿಸಿದೆ. ಇತ್ತೀಚೆಗೆ ಇ.ಎಸ್.ಐ. ಆಸ್ಪತ್ರೆಗ ಜಗವನ್ನು ನೀಡಿ ಆ ಆಸ್ಪತ್ರೆಯ ನಿರ್ಮಾತ ಆಸ್ಪತ್ರೆ ಹೆಸರಿನಲ್ಲಿ ಕಾಂಕ್ರೀಟ್ ಕಾಡು ಎನ್ನುವ ಬಹುಮಹಡಿ ಕಟ್ಟಡವನ್ನು ಎಬ್ಬಿಸಿದ್ದು, ಈ ಕಾರಣದಿಂದ ಇಲ್ಲಿ ನಿತ್ಯ ಓಡಾಡುವ ವಾಹನ, ದೊಡ್ಡ ದೊಡ್ಡ ವಾಹನಗಳ ಭರ್ಜರಿ ಗಲಾಟೆ, ಹೋಗಿ ಬರುವ ಕೆಲಸಗಾರರು, ಅಧಿಕಾರಿಗಳು ಹೀಗೆ ಜನದಟ್ಟಣೆಯಿಂದ ಅನೇಕ ಗಿಡಮರಗಳ ಮಾರಣ ಹೋಮವಾಗಿದೆ. ನಿತ್ಯ ಧೂಳು ಹಬ್ಬುತ್ತ ಪರಿಸರ ಮಾಲಿನ್ಯಕ್ಕೆ ಮೊದಲಿಟ್ಟಿದೆ.
ಇನ್ನು ಈ ನೆಲೆಯಲಿ ಹಿಂದಿನ ಮತ್ತು ಈಗಿರುವ ಸರಕಾರವು ಹಲವು ಇಲಾಖೆಗೆ ಈ ಪ್ರದೇಶದ ಹಲವು ಎಕರೆಗಳ ಭೂಮಿಯನ್ನು ಕಟ್ಟಡ ನಿರ್ಮಿಸಲು ಪರವಾನಿಗೆ ನೀಡಿದ್ದು, ಆಯಾ ಇಲಾಖೆಗಳು ತಮ್ಮ ತಮ್ಮ ಕಟ್ಟಡಗಳ ನಿರ್ಮಾಣಕ್ಕೆ ಬಹಳಷ್ಟು ಕ್ರೂರ ತಯ್ಯಾರಿ ನಡೆಸಿದೆ.
ಜಿಡಳಿತ ಯಾಕೀ ನಿರ್ಧಾರ ತೆಗೆದುಕೊಂಡಿತು ಬಲ್ಲವರ್‍ಯಾರು? ಈ ಗುಡ್ಡ ಮತ್ತು ಗುಡ್ಡದ ಆಜುಬಾಜಿನಲ್ಲಿರುವ ಖಾಲೀ ಜಗವೇ ಈ ಎಲ್ಲ ಸಂಸ್ಥೆಗಳ ಚಟುವಟಿಕೆಗಳ ನಿರ್ಮಾಣಕ್ಕೆಂದು ಭೂಮಿ ಮಂಜೂರು ಮಾಡಬೇಕಿತ್ತೆ? ಶಿವಮೊಗ್ಗದ ಸುತ್ತಮುತ್ತಲು ಬಯಲು ಎನಿಸಿಕೊಂಡ ಅದೆಷ್ಟು ಪ್ರದೇಶಗಳಿಲ್ಲ. ಅಭಿವೃದ್ಧಿ ಕಾರ್ಯಗಳು ರಾಗಿಗುಡ್ಡದ ಸುತ್ತಮುತ್ತಲಿನಲ್ಲಿಯೇ ಯಾಕಾಗಬೇಕು? ಈ ಹಿಂದೆಯೇ ಅನೇಕ ಪರಿಸರವಾದಿಗಳು ಈ ಸ್ಥಳಕ್ಕೆ ಆಗಮಿಸಿ ಈ ಸುತ್ತಮುತ್ತಲ ಸ್ಥಳವನ್ನು ಬಯೋ ಡೈವರ್ಸಿಟಿ ಸ್ಥಳವೆಂದು ಘೋಷಿಸಿ, ರಕ್ಷಣೆ ಮಾಡಬೇಕೆಂಬ ಮನವಿಯನ್ನು ನೀಡಿದ್ದವು. ಆ ಮನವಿ ಎತ್ತ ಹಾರಿ ಹೋಯಿತು? ಈ ಪ್ರದೇಶ ಬಯೋಡೆನ್ಸಿಟಿ ಎಂದು ರಕ್ಷಿಸಲು ಕೇಳಿರುವ ಮನವಿಯನ್ನು ಏತಕ್ಕಾಗಿ ಪುರಸ್ಕರಿಸಿಲ್ಲ ಇದು ರಾಗಿಗುಡ್ಡ ಉಳಿಸಿ ಹೋರಾಟಗಾರರ ಗುರಿ ಮತ್ತು ಕೂಗು:
ರಾಗಿಗುಡ್ಡದ ಪರಿಸರದ ರಕ್ಷಣೆ ಅತೀ ಅಗತ್ಯ: ಇಲ್ಲಿನ ಭೂಮಿ ಬಹಳ ವಿಶಿಷ್ಠವಾಗಿದ್ದು ಜೌಗು ಭೂಮಿ ಆಗಿದೆ. ಕೃತಕವಾಗಿ ಪಾರ್ಕ್ ನಿರ್ಮಿಸುವ ಬದಲು ಇಲ್ಲಿ ಸಹಜವಾಗಿ ಇರುವ ಹಸಿರನ್ನು ಉಳಿಸಿಕೊಂಡು, ಈಗಿರುವ ಈ ಗುಡ್ಡವನ್ನು ಹಾಗೇ ಉಳಿಸಿಕೊಂಡರೆ ಸಹಜ ಸುಂದರ ನೈರ್ಮಲ್ಯಯುತವಾದ ಗಾಳಿ, ನೀರು ದೊರಕಲು ಕಾರಣವಾಗುತ್ತದೆ. ಈ ಗುಡ್ಡದ ಮೇಲಿಂದ ಬೀಸಿ ಬರುವ ಮಂದ ಮಾರುತಗಳು ಶಿವಮೊಗ್ಗದ ಜನತೆಗೆ ಬಹಳಷ್ಟು ಶುದ್ಧ ಗಾಳಿ, ಹಾಗೂ ಸಾವಿರಾರು ಅಂತರ್ ಜಲದ ಒರತೆಗೆ ಕಾರಣವಾಗಿದೆ. ನೈಸರ್ಗಿಕ ಆಮ್ಲಜನಕ, ಹಕ್ಕಿಗಳ ಚಿಲಿಪಿಲಿ ಇಲ್ಲಿ ಅದೆಷ್ಟು ಮೋಹಕ. ಒಮ್ಮೆ ಹೋಗಿ ನೋಡಿದರೆ ನಿಮಗೇ ತಿಳಿಯುತ್ತದೆ.
ಕೇಳುವರಾರು ಅನಾಥರ ಕೂಗು? ಬೆಳ್ಳಂಬೆಳಗ್ಗೆ ತನ್ನ ಗೂಡು ಬಿಟ್ಟು ಹೊಟ್ಟೆ ದುಂಬಿಸಿಕೊಳ್ಳಲು ದೂರ ಹಾರಿ ಹೋಗಿದ್ದ ಹಕ್ಕಿ, ಪಕ್ಷಿ, ಸರೀಸಪ, ಕೀಟಗಳು, ಸಣ್ಣ ಪ್ರಾಣಿಗಳೂ ಸಂಜೆ ಹಿಂದಿರುಗಿ ಬಂದು ತನ್ನ ಗೂಡು, ತನ್ನ ಆಶ್ರಯ ತಾಣ ಕಾಣದೆ ದಿಕ್ಕೆಟ್ಟಿವೆ. ಬುಲ್ಡೋಜರ್, ಗರಗಸದ ಕ್ರೂರ ಧಾಳಿಗೆ ಸಿಲುಕಿ ನೆಲಸಮ ಆಗಿರುವ ತಮ್ಮ ನೆಲೆ ಕಂಡ ಬಿಕ್ಕಳಿಸಿ ಅಳುತ್ತಿವೆ. ದಿಕ್ಕೆಟ್ಟು ಕೂಗುತ್ತಿವೆ. ಗೂಡಲ್ಲಿ ಬಿಟ್ಟು ಹೋದ ಪುಟ್ಟ ಹಕ್ಕಿಗಳು ಧರೆಗಪ್ಪಳಿಸಿ ಜೀವ ಬಿಟ್ಟಿರುವುದ ಕಂಡ ಆಕ್ರಂಧನ ಮಾಡುತ್ತಿವೆ. ಅಯ್ಯೋ ನಮ್ಮ ಹೊಟ್ಟೆ ತುಂಬಿಕೊಳ್ಳಲು ಹೋಗಿ ನಮ್ಮ ಕುಟುಂಬವೇ ನಿರ್ನಾಮವಾಯಿತೇ? ಎಂದು ಜೀವ ಸಂಕುಲಗಳು ಅನಾಥ ಭಾವದಿಂದ ರೋಧಿಸುತ್ತಿರುವುದನ್ನು ಸೂಕ್ಷ್ಮ ಮನಸ್ಸಿನ ಯಾರೂ ಕೂಡ ಕಾಣುವ ಸಾಮಾನ್ಯ ದಶ್ಯವಾಗಿದೆ. ಒಟ್ಟಾರೆ ರಾಗಿಗುಡ್ಡದ ಜೀವ ವೈವಿಧ್ಯತೆ ಸರ್ವನಾಶವಾಗುತ್ತಿದೆ.
ದ್ರೋಣ್ ಮೂಲಕ ಸೆರೆ ಹಿಡಿದ ಚಿತ್ರಲ್ಲಿ ಆಮೆಯಂತೆ ಕಾಣುವ ಈ ರಾಗಿಗುಡ್ಡ ವಿಷ್ಣುವಿನ ಕೂರ್ಮಾವತಾರವನ್ನು ನೆನಪಿಗೆ ತರುತ್ತದೆ. ಅರಣ್ಯವನ್ನು ಪೋಷಿಸಿ, ಬೆಳೆಸುತ್ತೇವೆ ಎನ್ನುವವರು ಪರಿಸರ ಧಾಳಿಗೆ ಮುನ್ನಡೆದಿzರೆ. ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಈ ದಾಳಿ ಮುಂದಿನ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ರಾಗಿ ಗುಡ್ಡ ಇಲ್ಲಿ ಇತ್ತು ಎನ್ನುವುದು ಚಿತ್ರಪಟದಲ್ಲಿ ಮಾತ್ರ ತೋರಿಸುವ ಕಾಲ ಬುರುತ್ತಿದೆ. ಗತಕಾಲದ ಚರಿತ್ರೆಯ ಪುಟಗಳನ್ನು ಸೇರಲು ರಾಗಿಗುಡ್ಡ ಸಿದ್ದವಾಗಿದೆ.
ಆಸೆಬುರುಕ ಮನುಷ್ಯ ತನ್ನ ಹೊಟ್ಟೆ ಹೊರೆದುಕೊಳ್ಳಲು ಇನ್ನು ಇಂತಹ ಅದೆಷ್ಟು ಮರಗಿಡ, ಬೆಟ್ಟಗುಡ್ಡ ಕಡಿದು ಹತ್ತು ತಲೆಮಾರು ತಿಂದರೂ ಕರಗದಷ್ಟು ಹಣ ಮಾಡಿಡುತ್ತಾನೆ ಸಾಯಲಿ ಎಂದು ಭೂಮಾತೆ ಶಪಿಸುತ್ತಿzಳೆ. ನಾವು ವೈeನಿಕ ರಂಗದಲ್ಲಿ ಎಷ್ಟೇ ಮುನ್ನಡೆದಿರಬಹುದು ಆದರೆ, ಒಂದು ಮರ ನೀಡುವ ನೀರಿನ ಒರತೆ ನಾವು ನೀಡಲಾಗುವುದೇ. ಆ ಮರ ನೀಡುವ ನೆರಳು, ತಂಪಾದ ಹವೆ, ಆಶ್ರಯ ತಾಣ ನೀಡಲು ಸಾಧ್ಯವೆ.
ರಾಗಿಗುಡ್ಡ ಉಳಿಸಿ, ಪುನಃಶ್ಚೇತನಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರಗತಿ ಎಂದರೆ ಪರಿಸರದ ಬಲಿದಾನವಲ್ಲ ಎಂಬುದ ಸಾರಿ, ರಾಗಿ ಗುಡ್ಡವನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ರಾಗಿಗುಡ್ಡ ಉಳಿಸಿ ಅಭಿಯಾನ ಸಮಿತಿಯು ಮಾ.೨೫ರ ಶನಿವಾರ ಬೆಳಿಗ್ಗೆ ೯.೩೦ ರಿಂದ ರಾಗಿಗುಡ್ಡದ ಉತ್ತ ಭಾಗದಿಂದ (ಕುವೆಂಪು ನಗರ)ದಿಂದ ಜಥಾ ಹೊರಟು, ಜಿಧಿಕಾರಿಗಳ ಕಛೇರಿ ತಲುಪಿ ರಾಗಿ ಗುಡ್ಡ ಉಳಿಸಿಕೊಡಿ ಎಂಬ ಮನವಿ ಪತ್ರ ನೀಡುತ್ತಿzರೆ. ಈಗಾಗಲೇ ನಡೆಯುತ್ತಿರುವ ಅಂಬೇಡ್ಕರ್ ಮಿಷನ್, ಐ.ಎಸ್.ಐ. ಆಸ್ಪತ್ರೆಯ ಯೋಜನೆ ಹೊರತುಪಡಿಸಿ ಮತ್ಯಾವುದೇ ಕಾಂಕ್ರೀಟ್ ಕೆಲಸ ನಡೆಯಬಾರದು, ಸುಟ್ಟ ಗಿಡ ಮರಗಳಿಗೆ ಅಶ ತರ್ಪಣ ಅರ್ಪಿಸಿ, ಮತ್ತೆ ಹೊಸ ಗಿಡ ಮರ ಬೆಳೆಸಿ ರಾಗಿ ಗಿಡ್ಡ ನಿತ್ಯ ಹರಿಧ್ವರ್ಣವಾಗಿ ಉಳಿಸಬೇಕು ಎಂಬ ಈ ಆಭಿಯಾನದಲ್ಲಿ ಸಾರ್ವಜನಿಕ ಬಾಂಧವರಾದ ನಾವು, ನೀವೆಲ್ಲರೂ ಭಾಗವಹಿಸಿ ಈ ಆಂಧೋಲನಕ್ಕೆ ಶಕ್ತಿ ನೀಡಬೇಕೆಂದು ಅಭಿಯಾನ ಸಮಿತಿ ವಿನಂತಿಸಿಕೊಂಡಿzರೆ. ಬನ್ನಿ ರಾಗಿಗುಡ್ಡ ಉಳಿಸಿ ಅಭಿಯಾನದಲ್ಲಿ ಪಾಲೊಳ್ಳುವ ಮತ್ತು ರಾಗಿಗುಡ್ಡದ ಸಹಜ ಸುಂದರ ಪರಿಸರ ಸಂರಕ್ಷಣೆಗೆ ನೆರವಾಗೋಣ.

ವಿಶೇಷ ಲೇಖನ: ಶ್ರೀರಂಜಿನಿ ದತ್ತಾತ್ರಿ,
೯೪೪೯೯ ೯೮೫೩೧