ಯಶಸ್ಸಿನತ್ತ ಸಾಗಿದ ಪುಣ್ಯಕೋಟಿ ದತ್ತಯೋಜನೆ …

ಶಿವಮೊಗ್ಗ: ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಶಿಕಾರಿ ಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಿರು ವುದನ್ನು ಬಿಜೆಪಿ ಜಿ ಕಾರ್ಯ ದರ್ಶಿ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿzರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಮೀಸಲಾತಿ ಮತ್ತು ಒಳಮೀಸಲಾ ತಿಗೆ ಸಂಬಂಧಿಸಿದಂತೆ ಉತ್ತಮ ಕೆಲಸ ಮಾಡುತ್ತಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಬಂಜರ ಸಮಾಜಕ್ಕೆ ಹಲವು ಕೊಡುಗೆ ನೀಡಿzರೆ. ಮತ್ತು ಒಳಮಿಸ ಲಾತಿಯಲ್ಲಿ ಕೂಡ ಶೇ.ಹೆಚ್ಚುವರಿ ನೀಡಿzರೆ. ಆದರೆ ತಪ್ಪು ತಿಳುವಳಿ ಕೆಯಿಂದ ಈ ಪ್ರತಿಭಟನೆ ಮಾಡ ಲಾಗುತ್ತಿದೆ ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವೇ ಇದೆ. ಇದೊಂದು ಅಕ್ಷಮ್ಯ ಅಪರಾಧ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಗೋ ರಕ್ಷಣೆಗಾಗಿ ಹಲವು ಯೋಜನೆಗಳನ್ನು ಜರಿಗೆ ತಂದಿದೆ. ಪ್ರಮುಖವಾಗಿ ಪುಣ್ಯ ಕೋಟಿ ದತ್ತಯೋಜನೆ ಯಶಸ್ವಿ ಯತ್ತ ಸಾಗಿದೆ. ಆ ಮೂಲಕ ಗೋವುಗಳ ಸಂರಕ್ಷಣೆಯಾಗು ತ್ತಿದೆ. ಒಂದು ಗೋವಿಗೆ ವರ್ಷಕ್ಕೆ ೧೧ ಸಾವಿರ ರೂ. ನೀಡಲಾಗುತ್ತದೆ. ಜಿಯಲ್ಲಿ ಸುಮಾರು ೧೫ಕ್ಕೂ ಹೆಚ್ಚು ಗೋಶಾಲೆಗಳಿವೆ. ಅದರಲ್ಲಿ ಶಿವಮೊಗ್ಗದಲ್ಲಿಯೇ ನಾಲ್ಕು ಗೋಶಾಲೆಗಳಿವೆ. ಸರ್ಕಾರದಿಂದ ಇದುವರೆಗೂ ೧.೭೧ ಕೋಟಿ ರೂ. ನೆರವು ಸಿಕ್ಕಿದೆ ಎಂದರು.
ಗೋ ಸಂರಕ್ಷಣೆಗಾಗಿ ಸರ್ಕಾರ ಸತತವಾಗಿ ಶ್ರಮಿಸುತ್ತಿದೆ. ಗೋ ಹತ್ಯೆ ನಿಷೇದ ಕಾಯಿದೆ ಮತ್ತಷ್ಟು ಬಿಗಿಯಾಗಬೇಕು. ಅದರ ಸಂರ ಕ್ಷಣೆಗಾಗಿ ವಿಶೇಷ ತಂಡ ರಚಿಸ ಬೇಕು. ಗೋಪ್ರಿಯರು ಗೋವು ಗಳ ದತ್ತು ತೆಗೆದುಕೊಳ್ಳುವ ಮೂಲಕ ಗೋ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈ ಪುಣ್ಯ ಕಾರ್ಯ ದಲ್ಲಿ ಎಲ್ಲರೂ ಭಾಗಿಯಾಗಬೇಕು. ರೈತರು ಕೂಡ ತಮ್ಮ ಗೋವುಗ ಳನ್ನು ಕಸಾಯಿಖಾನೆಗೆ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾ ಧ್ಯಕ್ಷ ಜಗದೀಶ್, ಕಾರ್ಯದರ್ಶಿ ಮೋಹನ್ ರೆಡ್ಡಿ, ಪ್ರಮುಖರಾದ eನೇಶ್ವರ್, ಬಾಲು, ಮಂಜು ನಾಥ್ ಇದ್ದರು.