ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಏ.22 ರಿಂದ ಪುನರ್ ಪ್ರತಿಷ್ಠಾ ಸ್ವರ್ಣ ಮಹೋತ್ಸವ…
ಸಾಗರ: ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಏ. ೨೨ ರಿಂದ ೨೯ ರವರೆಗೆ ಶ್ರೀ ಜಗನ್ಮಾತೆಯ ಪುನರ್ ಪ್ರತಿಷ್ಠಾ ಸ್ವರ್ಣ ಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವವನ್ನು ನಡೆಸಲು ಭರದಿಂದ ಸಿದ್ಧತೆಗಳು ನಡೆದಿವೆ. ಈ ಪ್ರಾಂತ್ಯದ ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕು ಎಂದು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಶಿ ಹೇಳಿದರು.
ಇಲ್ಲಿನ ಅಗ್ರಹಾರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ವಿವರ ನೀಡಿದರು. ಏ.೨೨ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೨ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಹುಕ್ಕೇರಿ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸುವರು. ಕಲ್ಲಡ್ಕ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡುವರು.
ಏ.೨೩ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ೧೨.೩೦ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನಮ್ ನ ಶ್ರೀ ವಿದ್ಯಾರಣ್ಯ ಭಾರತೀ ಮಹಾ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸುವರು. ಡಾ.ಸುಬ್ರಾಯ ವಿ.ಭಟ್ ಉಪನ್ಯಾಸ ನೀಡುವರು. ಏ.೨೪ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೨ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಉದ್ಘಾಟಿಸುವರು. ಶಿರಸಿಯ ಕೆರೆಕೈ ವಿದ್ವಾನ್ ಉಮಾಕಾಂತ್ ಭಟ್ ಧಾರ್ಮಿಕ ಉಪನ್ಯಾಸ ನೀಡುವರು.
ಏ.೨೫ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೧.೩೦ ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ತೀರ್ಥಹಳ್ಳಿ ಶ್ರೀ ಭೀಮನಕಟ್ಟೆಯ ಶ್ರೀ ರಘವೇಂದ್ರತೀರ್ಥ ಮಹಾ ಸ್ವಾಮಿಗಳು ಉದ್ಘಾಟಿಸುವರು. ಸಾಹಿತಿ, ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉಪನ್ಯಾಸ ನೀಡುವರು.
ಏ.೨೬ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೧.೩೦ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಉದ್ಘಾಟಿಸುವರು. ಸಾಹಿತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಉಪನ್ಯಾಸ ನೀಡುವರು.
ಏ.೨೭ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೨ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು, ನರಸಿಂಹರಾಜಪುರದ ಶ್ರೀ ಕ್ಷೇತ್ರ ಸಿಂಹನಗz ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸಿ ಉದ್ಘಾಟಿಸುವರು. ಮಂಗಳೂರಿನ ವಿದ್ವಾನ್ ಡಾ. ಸತ್ಯಕಷ್ಣ ಭಟ್ ಉಪನ್ಯಾಸ ನೀಡುವರು.
ಏ.೨೮ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ೪ ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಗೌರಿಗz ಸ್ವರ್ಣಪೀಠಿಕಾ ಆಶ್ರಮದ ಶ್ರೀ ವಿನಯ್ ಗುರೂಜಿ ಸಾನ್ನಿಧ್ಯ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜ್ಯೋತಿಷಿ ವಿದ್ವಾನ್ ಗೋಪಾಲಕಷ್ಣ ಶರ್ಮ ಉಪನ್ಯಾಸ ನೀಡುವರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ರಚಿಸಿದ ಭೀಮಪಥ ಕೃತಿ ಮತ್ತು ಡಾ.ಕೆಳದಿ ಗುಂಡಾ ಜೋಯಿಸ್ ಮತ್ತು ಡಾ. ವೆಂಕಟೇಶ್ ಜೋಯಿಸ್ ರಚಿಸಿದ ಐತಿಹಾಸಿಕ ಹಿನ್ನೆಲೆಯಲ್ಲಿ ಹೊರ ನಾಡಿನ ಶ್ರೀ ಅನ್ನಪೂರ್ಣೇಶ್ವರಿ ಕತಿ ಲೋಕಾರ್ಪಣೆಗೊಳ್ಳಲಿದೆ.
ಪ್ರತಿದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಶಿಯವರು ವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯಮಾನ್ಯರು ಪ್ರತಿದಿನದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿ ರುವರು.
ಪ್ರತಿದಿನ ಸಭಾ ಕಾರ್‍ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರದ ಸೇವಾ ಸಾಧಕರಿಗೆ ಸನ್ಮಾನ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ರವರೆಗೆ ಕೋಟಿ ಕುಂಕುಮಾರ್ಚನೆ ನಡೆಯಲಿದೆ ಎಂದರು.
ಶ್ರೀ ಕ್ಷೇತ್ರ ಹೊರನಾಡಿನ ಅಮ್ಮನವರಿಗೆ ಎಲ್ಲ ಜತಿ ಜನಾಂ ಗದವರೂ ನಡೆದು ಕೊಳ್ಳುತ್ತಾರೆ. ಇಲ್ಲಿನ ಶಕ್ತಿ, ಮಹಿಮೆ ಅಪಾರವಾ ಗಿದೆ. ೧೯೭೩ರಲ್ಲಿ ನಮ್ಮ ಅಜ್ಜನ ವರು ಅಮ್ಮನವರ ಸಣ್ಣ ವಿಗ್ರಹ ವನ್ನು ಪ್ರತಿಷ್ಠಾಪಿಸಿದ್ದರು. ತಂದೆ ಯವರು ದೊಡ್ಡ ವಿಗ್ರಹ ಮಾಡಿ ದ್ದರು. ಇದೀಗ ಪ್ರತಿಷ್ಠಾಪನೆಗೆ ೫೦ ವರ್ಷ ತುಂಬಿದ್ದು, ಪುನರ್ ಪ್ರತಿಷ್ಠಾಪನೆ ಸ್ವರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಉದ್ಭ ವ ಗಣಪತಿ ವಿಗ್ರಹ ಬೆಳೆಯುತ್ತಿರು ವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ ಎಂದರು. ಅನ್ನಪೂರ್ಣೆ ಕೃಷಿ ದೇವ ತೆಯಾ ಗಿದ್ದು, ಇಲ್ಲಿ ಅನವರತವೂ ಅನ್ನದಾಸೋಹ ನಡೆಯುತ್ತಿದೆ. ಆತಿಥ್ಯಕ್ಕೆ ಈ ಕ್ಷೇತ್ರ ಹೆಸರು ವಾಸಿಯಾಗಿದೆ. ಅಮ್ಮನವರಿಗೆ ಅಕ್ಕಿ, ಹಾಲು, ಹಣ್ಣು ಮಾತ್ರ ನೈವೇದ್ಯ ಮಾಡುತ್ತಿದ್ದು, ಬೇಯಿ ಸಿದ ವಸ್ತುವನ್ನು ನೈವೇದ್ಯ ಮಾ ಡುವು ದಿಲ್ಲ. ದೇವಸ್ಥಾನದಲ್ಲಿ ಹಿಂದಿ ನಿಂದಲೂ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು, ಈಗಲೂ ಮುಂದುವರೆದಿದೆ ಎಂದರು.
ವಿವಿಧ ಸಮಾಜದ ಪ್ರಮು ಖರಾದ ಗಜನನ ಜೋಯಿಸ್, ಮ.ಸ. ನಂಜುಂಡಸ್ವಾಮಿ, ಟಿ.ವಿ. ಪಾಂಡುರಂಗ, ಮೋಹನ್ ಶೇಟ್, ರಘುನಾಥ್, ಗೋಪಿ ದೀಕ್ಷಿತ್, ನವೀನ್ ಜೋಯ್ಸ್ ಹಾಜರಿದ್ದರು.
ವೈ. ಮೋಹನ್ ಸ್ವಾಗತಿಸಿದರು. ಬದರೀನಾಥ್ ವಂದಿಸಿದರು.