ಶಿಕಾರಿಪುರ : ಕೋಟ್ಯಾಂತರ ವೆಚ್ಚದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕುಟ್ರಳ್ಳಿ ಸಮೀಪ ನಿರ್ಮಾಣ ವಾದ ಕೆ. ಎಸ್.ಆರ್.ಟಿ.ಸಿ ಬಸ್ ಡಿಪೋ ಇದುವರೆಗೂ ಸರ್ಕಾರಿ ಬಸ್‌ಗಳು ಆಗಮಿಸದೆ ಡಿಪೋ ಕೇವಲ ನಾಮಕಾವಸ್ತೆಯಾಗಿದೆ. ಗ್ರಾಮೀಣ ಮಕ್ಕಳು ಶಾಲೆಗೆ ಆಗಮಿಸಲು ಸಮರ್ಪಕ ಬಸ್ ಸಂಚಾರವಿಲ್ಲದೆ ತೀವ್ರ ತೊಂದರೆ ಯಾಗಿದ್ದು ಕೂಡಲೇ ಹೆಚ್ಚಿನ ಬಸ್ ಸಂಚಾರದ ಜತೆಗೆ ಡಿಪೋ ಪ್ರಯೋಜನ ಜನಸಾಮಾನ್ಯರಿಗೆ ದೊರಕುವಂತಾಗಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.


ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಹುಲಗಿ ಮಾತನಾಡಿ, ಸರ್ಕಾರದ ಕೋಟ್ಯಾ ಂತರ ಹಣದಲ್ಲಿ ನಿರ್ಮಾಣಗೊಂ ಡಿರುವ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮತ್ತು ನಿಲ್ದಾಣಗಳು ನೆಪಕ್ಕೆ ಮಾತ್ರವಾಗಿದ್ದು,ಉದ್ಘಾಟನೆಯಾಗಿ ೬ ತಿಂಗಳಾದರೂ ಇದುವರೆಗೂ ಕನಿಷ್ಠ ಒಂದು ಬಸ್ಸು ಡಿಪೋದಿಂದ ಸಂಚರಿಸಿಲ್ಲ. ಡಿಪೋ ಖಾಲಿಯಾ ಗಿದ್ದು, ನಾಲ್ಕು ನೌಕರರಿಗೆ ಪುಕ್ಕಟೆ ಸಂಬಳವನ್ನು ನೀಡಲಾಗುತ್ತಿದೆ. ಡಿಪೋ ಕಾಯುವ ವಾಚ್‌ಮನ್ ರೀತಿಯಾಗಿರುವ ನೌಕರರ ಜತೆಗೆ ನಿಲ್ದಾಣದಲ್ಲಿ ಇಬ್ಬರು ಟೀಸಿಗಳಿದ್ದು ಸಂಜೆ ೫ -೬ರ ನಂತರ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ನೂತನ ಬಸ್ ನಿಲ್ದಾಣದಲ್ಲಿ ಮಾಹಿತಿ ನೀಡುವ ಅಧಿಕಾರಿ ಗಳಿ ಲ್ಲದೇ ಬೆರಳಣಿಕೆಯಷ್ಟು ಬರುವ ಬಸ್‌ಗಳು ಪಕ್ಕದ ಹಿರೇಕೇರೂರು ತಾಲೂಕು, ಶಿವಮೊಗ್ಗ, ಹೊನ್ನಾಳಿ ಡಿಪೋಗಳಿಂದ ಶಿಕಾರಿಪುರ ಮಾರ್ಗವಾಗಿ ಸಂಚರಿಸುತ್ತಿವೆ. ಇಲ್ಲಿ ಹೇಳುವರು ಕೇಳುವರು ಇಲ್ಲದ ಕಾರಣ ರಾತ್ರಿಯ ಹೊತ್ತು ಬಸ್ಸುಗಳು ಬಸ್ ನಿಲ್ದಾಣದ ಒಳಗೆ ಬರದೇ ಹೊರಗಡೆಯಿಂದಲೇ ಸಂಚರಿಸುತ್ತಿದ್ದು ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಕಾಯು ತ್ತಿರುತ್ತಾರೆ. ತಾಲೂಕಿನ ಸಮಗ್ರ ಅಭಿವೃದ್ಧಿ ಆಗಿದೆ ಎಂದು ಹೇಳುವ ಮಾಜಿ ಮುಖ್ಯಮಂತ್ರಿಗಳು, ಶಾಸಕರು ಹಾಗೂ ಸಂಸದರು ಮೊದಲು ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಬಸ್ ಸೌಕರ್ಯಗಳನ್ನು ಕಲ್ಪಿಸಿ. ಅನೇಕ ಹಳ್ಳಿಗಳಿಗೆ ಬಸ್ ಸಂಚಾರ ವಿಲ್ಲದೇ ಜನ ಪರದಾಡುತ್ತಿzರೆ. ಶಾಸಕ ವಿಜಯೇಂದ್ರರವರು ಈಗಲಾದರೂ ಸರ್ಕಾರದಿಂದ ಎ ಹಳ್ಳಿಗಳಿಗೂ ಬಸ್ ಸೌಲಭ್ಯ ಗಳನ್ನು ಒದಗಿಸಲು ಮುಂದಾಗ ಬೇಕು ಎಂದು ಆಗ್ರಹಿಸಿದರು.
ಮುಖಂಡ ಶಿವಯ್ಯ.ಎನ್ ಶಾಸ್ತ್ರಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ಸ್ತ್ರೀಶಕ್ತಿ ಯೋಜನೆಯಲ್ಲಿ ಮಹಿಳೆ ಯರು ಉಚಿತ ಪ್ರಯಾಣ ಮಾಡು ತ್ತಿದ್ದು ತಾಲೂಕಿನ ಮಹಿಳೆ ಯರು ಮತ್ತು ಪ್ರಯಾಣಿಕರಿಗೆ ಅನುಕೂ ಲವಾಗಲು ಶಿಕಾರಿಪುರ ದಿಂದ ಹೆಚ್ಚಿನ ಬಸ್ ಸಂಚಾರ ಆರಂಭಕ್ಕೆ ಸರ್ಕಾರ ಹೆಚ್ಚು ಗಮನಹರಿಸ ಬೇಕು ಎಂದರು.
ತಾ.ಕಾರ್ಯದರ್ಶಿ ಇಮ್ರಾನ್ ಮಾತನಾಡಿ, ಡಿಪೋ ಬಸ್ ನಿಲ್ದಾಣ ಹಾಗೂ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನೌಕರಿ ಮಾಡು ವವರಿಗೆ ಕೆಲಸವಿಲ್ಲದೆ ಸರ್ಕಾರ ದಿಂದ ಪ್ರತಿ ತಿಂಗಳು ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು ಕೂಡ ಲೇ ರಾಜ್ಯ ಸರ್ಕಾರ ಸಿಎಂಗಳು ಮತ್ತು ಸಾರಿಗೆ ಸಚಿವರು ಶಿಕಾರಿಪು ರದಲ್ಲಿ ಖಾಲಿ ಇರುವ ಡಿಪೋ ಗಳಲ್ಲಿ ಬಸ್ ಗಳ ನ್ನು ಉಳಿದ ನೌಕರರನ್ನು ನೇಮಿಸಿ ಉತ್ತಮ ಸೇವೆ ನೀಡುವಂತೆ ಆಗ್ರಹಿ ಸಿದರು.
ಮಂಜುನಾಥ್ ಆರ್.ಪಿ ಮಾತನಾಡಿ, ಬಸ್ ಸಂಚಾರದ ಬಗ್ಗೆ ಸರ್ಕಾರ ಹಾಗೂ ಶಾಸಕರು ಗಮನ ಹರಿಸದಿದ್ದಲ್ಲಿ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವು ದಾಗಿ ಎಚ್ಚರಿಸಿದರು.ನಂತರದಲ್ಲಿ ಕೂಡಲೇ ಹೆಚ್ಚಿನ ಬಸ್ ಸಂಚಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾ ಯಿತು.
ಈ ಸಂದರ್ಭದಲ್ಲಿ ಸಂಘಟ ನೆಯ ಮುಖಂಡರಾದ ಸುರೇಶ್, ಮಟ್ಟಿಕೋಟೆ ಮಾಲತೇಶ್, ಶಿರಾಳಕೊಪ್ಪ ಸತೀಶ್, ಹುಸೇನ್ ಸಾಬ, ರವಿ, ಇಮ್ರಾನ್ ಖಾನ್, ಮುಕ್ರಂ, ರಾಜಶೇಖರ್, ಯೋ ಗೇಶ್, ರಫೀಕ್ ನರಸಾಪುರ, ಪುನಿ ತ್, ನವೀನ್ ಮತ್ತಿತರರು ಹಾಜ ರಿದ್ದರು. ಆರಂಭದಲ್ಲಿ ಖಾಸಗಿ ಬಸ್ ನಿಲ್ದಾಣದಿಂದ ಘೋಷಣೆ ಹಾಕಿ ಮೆರವಣಿಗೆ ನಡೆಸಲಾಯಿತು.