ದ್ವಿತೀಯ ದರ್ಜೆ ನೌಕರರ ಅಮಾನತ್‌ಗೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸು ತ್ತಿರುವ ದ್ವಿತೀಯ ದರ್ಜೆ ನೌಕರ ನನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ ಗಳ ಒಕ್ಕೂಟ ಇಂದು ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್ ಎಂಬ ದ್ವಿತೀಯ ದರ್ಜೆ ನೌಕರ ದಲಿತ ವಿರೋಧಿಯಾಗಿzರೆ. ಪೌತಿ ಖಾತೆ ಮಾಡಿಸಲು ಹೋದ ಮಹಿಳೆಯೊಬ್ಬರಿಗೆ ಸತಾಯಿಸಿದ್ದು, ಖಾತೆಯನ್ನೂ ಮಾಡದೆ ಮೇಲಧಿಕಾರಿಗಳಿಗೆ ದೂರು ನೀಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ zರೆ. ಅಲ್ಲದೆ ಜತಿ ಹೆಸರು ಹಿಡಿದು ಕರೆದು ಜತಿ ನಿಂದನೆ ಮಾಡಿzರೆ. ಬೆದರಿಕೆ ಹಾಕಿ zರೆ.ಈ ಬಗ್ಗೆ ಕೋಟೆ ಪೊಲಿಸ್ ಠಾಣೆಯಲ್ಲಿ ದೂರನ್ನೂ ಸಲ್ಲಿಸಲಾ ಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪೌತಿ ಖಾತೆ ಮಾಡದ ರವಿಕು ಮಾರ್ ಅವರನ್ನು ಕರ್ತವ್ಯದಿಂದ ವಜಗೊಳಿಸಬೇಕು ಮತ್ತು ನೊಂದ ಮಹಿಳೆ ಗಂಗಮ್ಮ ಬಿನ್ ಲೇಟ್ ಶೇಖರಪ್ಪ ಕುಟುಂಬದ ವರಿಗೆ ತಕ್ಷಣ ಪೌತಿ ಖಾತೆ ಮಾಡಬೇಕು. ಇದರ ಜೊತೆಗೆ ಮಹಾನಗರ ಪಾಲಿಕೆ ನೌಕರರ ಪದನಾಮಕ್ಕೆ ತಕ್ಕಂತೆ ವಿದ್ಯಾರ್ಹತೆ ಬಗ್ಗೆ ತನಿಖೆಗೆ ಒಳಪಡಿಸಬೇಕು. ಬಡವರ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಅರುಣ್ ಕುಮಾ ರ್, ಜಿ.ಎಸ್. ತಿಪ್ಪೇಸ್ವಾಮಿ, ರಾಜ್ ಕುಮಾರ್, ವೆಂಕಟೇಶ್, ಅಶೋ ಕ್‌ಕುಮಾರ್, ಪರಶುರಾಮ್, ರವಿಕುಮಾರ್, ಮಂಜುಳಾ, ಮಂಜುನಾಥ್ ಇದ್ದರು.