ಜೈನಮುನಿ ಹತ್ಯೆ ಖಂಡಿಸಿ ಜೈನ ಸಮಾಜ ಬಾಂಧವರಿಂದ ಪ್ರತಿಭಟನೆ

ಶಿವಮೊಗ್ಗ: ನಂದಿ ಪರ್ವತ ಆಶ್ರಮದ ಕಾಮ ಕುಮಾರ ನಂ ದಿಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಗಾಂಧಿಬಜರಿನ ಜೈನ ಸಮಾಜ ಬಾಂಧವರು ಪ್ರತಿಭಟನಾ ಮೆರ ವಣಿಗೆ ನಡೆಸಿ ಜಿಧಿಕಾರಿಗಳ ಕಚೇರಿ ಆವರಣದಲ್ಲಿ ಸಭೆ ನಡೆಸಿ ನಂತರ ಮನವಿ ಸಲ್ಲಿಸಿದರು.
ಅಹಿಂಸೆಗೆ ಹೆಸರಾಗಿದ್ದ ನಂದಿ ಮಹಾರಾಜರನ್ನು ಕಿಡಿಗೇಡಿಗಳು ಅಪಹರಿಸಿ ಅವರ ದೇಹವನ್ನು ೯ ತುಂಡುತುಂಡಾಗಿ ಅಮಾನುಷ ವಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದಿದ್ದು ಅತ್ಯಂತ ಹೀನ ಕೃತ್ಯ ವಾಗಿದೆ. ನಂದಿ ಮಹಾರಾಜರು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದವರು. ಅಹಿಂಸೆಯೇ ಪರಮಧರ್ಮ ಎಂದುಕೊಂಡ ವರು. ಇಂತಹ ಮುನಿಗಳನ್ನು ಹತ್ಯೆ ಮಾಡಿದ್ದು, ಅತ್ಯಂತ ಅಮಾನುಷ ವಾಗಿದೆ. ಈ ಘೋರ ಕೃತ್ಯದ ಹಿಂದೆ ಅನೇಕರ ಕೈವಾಡವಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರತಿ ಭಟನಕಾರರು ಆಗ್ರಹಿಸಿದರು.
ಜೈನಾಚಾರ್ಯರ, ಮುನಿ ಮಹಾರಾಜರ ರಕ್ಷಣೆಯನ್ನು ರಾಜ್ಯಸರ್ಕಾರವೇ ವಹಿಸಿ ರಕ್ಷಣೆ ನೀಡಬೇಕು. ಜೈನಾಚಾರ್ಯರು ತಂಗುವ ಎ ಶಾಲಾ ಕಾಲೇಜು ಗಳಿಗೆ ರಕ್ಷಣೆ ನೀಡಬೇಕು. ಈ ಕೃತ್ಯವನ್ನು ಸಿಬಿಐಗೆ ನೀಡಬೇಕು ಎಂದು ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗೆ ನೀಡಿರುವ ಮನವಿ ಯಲ್ಲಿ ಆಗ್ರಹಿಸಲಾಗಿದೆ.
ಸಿಬಿಐ ತನಿಖೆಗೆ ಕೆ.ಎಸ್.ಈಶ್ವರಪ್ಪ ಆಗ್ರಹ
ಜೈನ ಮುನಿಗಳ ಹತ್ಯೆ ಅತ್ಯಂತ ಅಮಾನುಷವಾಗಿದ್ದು, ಇಡೀ ಪ್ರಪಂಚವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ತನಿಖೆ ಮಾಡುವುದಾಗಿ ತಿಳಿಸಿದೆ. ಇದನ್ನು ಸ್ವಾಗತಿಸುತ್ತೇವೆ. ಆದರೆ ಇದರ ಜೊತೆಗೆ ಸಿಬಿಐ ತನಿಖೆಯನ್ನು ಕೂಡ ಮಾಡಬೇಕು ಇದರಿಂದ ನೊಂದ ಜೈನ ಬಾಂಧವರಿಗೆ ಸಮಾಧಾನವಾಗುತ್ತದೆ ಎಂದರು.
ಇವರ ಕೊಲೆ ಏಕಾಯಿತು ಎಂಬ ಬಗ್ಗೆಯೇ ವಿವಾದವಿದೆ. ರಾಜ್ಯಸರ್ಕಾರ ಏನೋ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದೆ ಆದರೆ ಇಷ್ಟು ಸಾಲದು. ಇದರ ಹಿಂದೆ ಮತ್ತಷ್ಟು ಶಕ್ತಿಗಳು ಇವೆ. ಅವೆಲ್ಲ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು. ಹಾಗೂ ಹಿಂದುಗಳ ಹತ್ಯೆ ಮುಂದುವರಿಯುತ್ತಿದ್ದು ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಮುಖ ರಾದ ದೇವಿಚಂದ್ ಜೈನ್, ಚಂದ ನ್‌ಮಲ್ ಜೈನ್, ಮೋಹನ್ ಲಾಲ್ ಜೈನ್, ಪ್ರಭಾಕರ ಗೋಗಿ, ಪಿಕೆ. ಜೈನ್, ಧರಣೇಂದ್ರ ದಿನ ಕರ್, ಎಸ್.ದತ್ತಾತ್ರಿ, ರಮೇಶ್ ಬಾಬು, ವಾಸುದೇವ್, ಸುರೇಖಾ ಮುರಳೀಧರ್ ಇದ್ದರು.