ವಿದ್ಯುತ್ ಯೂನಿಟ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಶಿಕಾರಿಪುರ : ಉಚಿತ ವಿದ್ಯುತ್ ಸಹಿತ ಹಲವು ಆಮಿಷಗಳನ್ನು ಒಡ್ಡಿ ಅಧಿಕಾರದ ಗದ್ದುಗೆಯನ್ನು ಏರಿದ ಕಾಂಗ್ರೆಸ್ ಇದೀಗ ಪರೋಕ್ಷವಾಗಿ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆ ಯುತ್ತಿದೆ ಈ ಕೂಡಲೇ ವಿದ್ಯುತ್ ದರ ಏರಿಕೆಯನ್ನು ವಾಪಾಸು ಪಡೆದು ಜನತೆಗೆ ಆರ್ಥಿಕ ಹೊರೆ ತಪ್ಪಿಸಬೇಕು ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಆಗ್ರಹಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿ ಮುಂಭಾಗ ತಾ.ಬಿಜೆಪಿ ವತಿಯಿಂದ ಮಂಗಳವಾರ ವಿದ್ಯುತ್ ಯೂನಿ ಟ್ ದರ ಏರಿಕೆ ಖಂಡಿಸಿ ಹಮ್ಮಿಕೊ ಳ್ಳಲಾಗಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾ ಡಿದರು.
ಚುನಾವಣಾ ಪೂರ್ವದಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಎಂದು ಕಾಂಗ್ರೆಸ್ ಪಕ್ಷ ಆಶ್ವಾಸನೆಗಳನ್ನು ನೀಡಿದ್ದು ಇದ ರೊಂದಿಗೆ ಹಲವು ಯೋಜನೆಗ ಳನ್ನು ಪ್ರಕಟಿಸಿ ಇದೀಗ ಪ್ರತಿಯೊಂ ದು ಯೋಜನೆಗೆ ನಿಭಂದನೆಗಳನ್ನು ವಿಧಿಸಿತೊಡಗಿರುವುದು ಅಕ್ಷಮ್ಯ ಎಂದ ಅವರು ವಿದ್ಯುತ್ ಪ್ರತಿ ಯೊಂದು ಕುಟುಂಬಕ್ಕೂ ಉಚಿತ ಉಚಿತ ಎಂದು ಸಾರಿ ಸಾರಿ ಹೇಳಿ ವಿದ್ಯುತ್ ಯೂನಿಟ್ ದರ ಹೆಚ್ಚಿಸದೆ ಪರೋಕ್ಷವಾಗಿ ಸ್ಲ್ಯಾಬ್ ದರ ತೆಗೆಯಲಾಗಿದೆ ಇದರಿಂದ ಪ್ರತಿ ಕುಟುಂಬಕ್ಕೆ ವಿದ್ಯುತ್ ಬಿಲ್ ಹೊರೆ ಅಽಕವಾಗಿದ್ದು ಇಂತಹ ಕುತಂತ್ರ ಹೆಚ್ಚು ಕಾಲ ನಡೆಯಲು ಬಿಡುವುದಿಲ್ಲ ಜನತೆ ಸರ್ಕಾರದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಿzರೆ ಎಂದು ತಿಳಿಸಿದರು.
ಜನಸಾಮಾನ್ಯರ ಸರ್ಕಾರ ಎಂದು ಘೋಷಿಸಿಕೊಂಡು ಮುಗ್ದ ಜನತೆಯನ್ನು ಮೋಸಗೊಳಿಸುವ ಹುನ್ನಾರವನ್ನು ರೂಪಿಸಿತೊಡಗಿ ರುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಬುದ್ದಿಕಲಿಸುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕಳೆದ ತಿಂಗಳು ಬಳಸಿದ ವಿದ್ಯುತ್‌ಗೆ ಈ ತಿಂಗಳ ಬಿಲ್‌ನಲ್ಲಿ ಬಾಕಿ ಎಂದು ಮುದ್ರಿಸಿ ಬಿಲ್ ನೀಡಲಾಗಿದ್ದು ಹೊಸ ಸರ್ಕಾರ ಇಂತಹ ಹಲವು ವಾಮಮಾರ್ಗ ವನ್ನು ಕಂಡುಹಿಡಿಯುತ್ತಿದೆ ವಿದ್ಯು ತ್ ಕಂಪನಿಗಳ ನಷ್ಟಕ್ಕೆ ಪರಿಹಾರ ನೀಡುವ ಸರ್ಕಾರ ಕಂಪನಿಗಳ ಬಗ್ಗೆ ಪರೋಕ್ಷ ನಿಯಂತ್ರಣ ಹೊಂದಿ ದ್ದು ಬೆಲೆ ಏರಿಕೆ ಮಾತ್ರ ಹಿಂದಿನ ಬಿಜೆಪಿ ಸರ್ಕಾರದ ನಿರ್ಣಯ ಎಂದು ಜವಾಬ್ದಾರಿಯುತ ಸಚಿ ವರು ಹೇಳಿಕೆ ನೀಡಿ ಜನಸಾಮಾನ್ಯ ರನ್ನು ದಿಕ್ಕುತಪ್ಪಿಸುತ್ತಿzರೆ ಎಂದು ಆರೋಪಿಸಿದರು.
ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುತ್ ದರ ಏರಿಕೆಯನ್ನು ವಾಪಾಸು ಪಡೆದು ಚುನಾವಣಾ ಪೂರ್ವದಲ್ಲಿ ನೀಡಿದ ವಾಗ್ದಾನದಂತೆ ಯಾವುದೇ ನಿಭಂ ದನೆ ಇಲ್ಲದೆ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ೨೦೦ ಯೂನಿಟ್ ಅಽಕ ಬಳಕೆದಾ ರರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮ,ಬೆಂಗಳೂರು ಸಾರಿಗೆ ನಿಗಮಕ್ಕೆ ಮೊದಲ ದಿನ ರೂ.೧.೫ ಕೋಟಿ ಮಿಗಿಲಾಗಿ ನಷ್ಟ ವಾಗಿದೆ ಉಚಿತ ಸಾರಿಗೆ ವ್ಯವಸ್ಥೆ ಯಿಂದಾಗಿ ಖಾಸಗಿ ಬಸ್ ಮಾಲಿ ಕರು ತೀವ್ರ ನಷ್ಟ ಅನುಭವಿಸುವ ಸಾದ್ಯತೆ ದಟ್ಟವಾಗಿದ್ದು ಯೋಜನೆ ಯನ್ನು ವಿಸ್ತರಿಸಿ ಖಾಸಗಿ ಬಸ್ ಮಾಲಿಕರಿಗಾಗುವ ನಷ್ಟವನ್ನು ಸರ್ಕಾರ ಬರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಕೆ.ಹಾಲಪ್ಪ,ಅಂಬಾರಗೊಪ್ಪ ಶೇಖರಪ್ಪ,ಹನುಮಂತಪ್ಪ ಸಂಕ್ಲಾಪುರ,ಗಾಯತ್ರಿದೇವಿ, ನಿವೇ ದಿತಾ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ ಭದ್ರಾಪುರ, ರೇಣುಕಸ್ವಾಮಿ,ಪ್ರಶಾಂತ್ ಜೀನಳ್ಳಿ,ವೀರೇಂದ್ರ, ಧಾರವಾಡದ ಗಿರೀಶ್, ಈಸೂರು ಜಗದೀಶ್, ಮಹಾಲಿಂಗಪ್ಪ,ಮಂಜು ಸಿಂಗ್, ಫಕೀರಪ್ಪ,ಜನಕಪ್ಪ, ರಾಘ ವೇಂದ್ರ (ಮಾಜಿ) ಮತ್ತಿತರರು ಹಾಜರಿದ್ದರು.