ಅಕ್ರಮವಾಗಿ ಖಾತೆ ಬದಲಾವಣೆ ಖಂಡಿಸಿ ಪ್ರತಿಭಟನೆ

ಭದ್ರಾವತಿ: ರಾಜ್ಯ ರೈತ ಸಂಘ ಹಾಗು ಹಸೀರು ಸೇನೆ ವತಿಯಿಂದ ಹೊಳೆಹೊನ್ಣೂರು ಹೋಬಳಿ ಮಲ್ಲಿಗೇನಹಳ್ಳಿ ಗ್ರಾಮದ ಲೋಕೇಶಪ್ಪ ಎಂಬುವವರ ಕುಟುಂಬಕ್ಕೆ ಸೇರಿದ ೧.೦೯ ಎಕರೆ ಜಮೀನನ್ನು ಬೇರೋಬ್ಬರ ಹೆಸರಿಗೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ರಾಜಸ್ವ ನೀರೀಕ್ಷರು ಆಕ್ರಮವಾಗಿ ಬೇರೋಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದನ್ನು ಖಂಡಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಭಂಧೀಸಿದವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ಮನವಿ ತಹ ಶೀಲ್ದಾರ್ ಸುರೇಶಾಚಾರ್ ರವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿ ದರು.
ಎಲ್ಲದಕ್ಕಿಂತ ಆಶ್ಚರ್ಯದ ಸಂಗತಿ ಎಂದರೆ ಈ ಖಾತೆ ಬದಲಾ ವಣೆ ಹಿಂದಿರುವ ಕಥೆ ರೊಚಕವಾ ಗಿದೆ. ಮಲ್ಲಿಗೇನಹಳ್ಳಿ ಗ್ರಾಮದ ಲ್ಲಿರುವ ಜಮೀನಿನ ಸರ್ವೆ ನಂ., ೩೧, ಎಂಆರ್ ನಂ., ೮೧/೭೯-೮೦ ೧.೦೯ ಎಕರೆ ಜಮೀನು ಹನುಮಂತಪ್ಪರವರ ಸ್ವಾಧೀನಾನುಭವದಲ್ಲಿದ್ದು ಅವರ ಹೆಸರಿನಲ್ಲಿದೆ. ಅವರ ಪುತ್ರ ಲೋಕೇಶ್ ಸದರಿ ಜಮೀನಿನಲ್ಲಿ ಅಡಿಕೆ ತೋಟ ಮಾಡಿಕೊಂಡು ವ್ಯವಸಾಯ ಮಾಡಿಕೊಂಡಿzರೆ. ಹನುಮಂತಪ್ಪ ಕೆಲ ತಿಂಗಳ ಹಿಂದೆ ಮರಣ ಹೊಂದಿದ್ದು ಅವರು ಈ ಹಿಂದೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಬೆಳೆ ಸಾಲ ಪಡೆದಿದ್ದು ಅದನ್ನು ಮರು ಪಾವತಿ ಮಾಡಿ ಹೊಸದಾಗಿ ಬೆಳೆ ಸಾಲ ಪಡೆಯಲು ಪಹಣಿ ದಾಖಲೆಯನ್ನು ತೆಗೆದುಕೊ ಂಡಾಗ ಹನುಮಂತಪ್ಪ ರವರ ಹೆಸ ರಿನಲ್ಲಿದ್ದ ಜಮೀನನ್ನು ಬೆರೋಬ್ಬರ ಹೆಸರಿಗೆ ಮಾಡಿಕೊಟ್ಟಿರುವುದು ತಿಳಿದು ಬಂದಿದೆ.
ಇವರ ಕುಟುಂಬದವರೆ ಅಲ್ಲದ ಬೇರೋಬ್ಬರ ಹೆಸರಿಗೆ ಹೇಗೆ ಆಕ್ರಮವಾಗಿ ಯಾರು ಹೇಗೆ ಯಾವ ರೀತಿಯಲ್ಲಿ ಖಾತೆ ಮಾಡಿಕೊಟ್ಟಿzರೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.
ಈ ಪ್ರತಿಭಟನಾ ಸಭೆಯಲ್ಲಿ ರಾಮಚಂದ್ರರಾವ್ ಘೋರ್ಪಡೆ, ಹೆಚ್.ಎಸ್.ಮಂಜುನಾಥೇಶ್ವರ, ವಿರೇಶ್, ಚಂದ್ರಣ್ಣ, ಬಸವರಾಜ್, ಚಂದ್ರೋಜೀರಾವ್ ಸೇರಿದಂತೆ ಇತರರು ಭಾಗವಹಿಸಿದದ್ದರು.