bankers-meeting.jfif-2

ಶಿವಮೊಗ್ಗ: ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಯ ಬ್ಯಾಂಕುಗಳು ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.
ಜಿ.ಪಂ ಸಭಾಂಗಣದಲ್ಲಿ ಬ್ಯಾಂಕರ್‌ಗಳಿಗೆ ಏರ್ಪಡಿಸಿದ್ದ ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬ್ಯಾಂಕುಗಳು ಆದ್ಯತಾ ವಲಯದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು. ೨೦೨೩-೨೪ನೇ ಸಾಲಿನ ವಾರ್ಷಿಕ ಗುರಿಯಲ್ಲಿ ಈವರೆಗೆ ಕೃಷಿ ವಲಯದಲ್ಲಿ ಶೇ. ೫೧.೨೫, ಎಂಎಸ್‌ಎಂಇ ವಲಯ ದಲ್ಲಿ ಶೇ.೧೦೫.೭೭, ಶಿಕ್ಷಣ ಸಾಲ ಶೇ.೧೦.೭೫, ವಸತಿ ಶೇ.೧೧.೪೬ ಸೇರಿದಂತೆ ಒಟ್ಟಾರೆ ಆದ್ಯತಾ ವಲಯದಲ್ಲಿ ಶೇ.೫೭.೦೨ ಪ್ರಗತಿ ಸಾಧಿಸಿದೆ. ಆದ್ಯತಾ ವಲಯದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು. ಕೃಷಿ, ಶಿಕ್ಷಣ ಮತ್ತು ವಸತಿ ಸಾಲದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಆಗಬೇಕು ಎಂದು ಸೂಚನೆ ನೀಡಿದರು.
ಆದ್ಯತಾ ವಲಯದಲ್ಲಿ ಅತಿ ಕಡಿಮೆ ಪ್ರಗತಿ ಸಾಧಿಸಿದ ಹಾಗೂ ಸಿಡಿ ರೇಷಿಯೋ ಶೇ.೧೫ಕ್ಕಿಂತ ಕಡಿಮೆ ಇರುವ ಬ್ಯಾಂಕುಗಳಿಗೆ ನಿಗದಿತ ಪ್ರಗತಿ ಸಾಧಿಸುವ ಕುರಿತು ಆರ್‌ಬಿಐ ಶಿಸ್ತಿನ ಕ್ರಮ ಜರುಗಿಸ ಬೇಕು ಹಾಗೂ ಇಂದು ಸಭೆಗೆ ಗೈರಾದ ಬ್ಯಾಂಕುಗಳಿಗೆ ನೋಟಿಸ್ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.
ಕೆನರಾ ಬ್ಯಾಂಕಿನ ಡಿಜಿಎಂ ದೇವರಾಜ್ ಆರ್ ಮಾತನಾಡಿ, ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಕೃಷಿ ವಲಯದಲ್ಲಿ ಶೇ.೫೧.೨೫, ಎಂಎಸ್‌ಎಂಇ ವಲಯದಲ್ಲಿ ಶೇ.೧೦೫.೭೭ ಸೇರಿದಂತೆ ಆದ್ಯತಾ ಮತ್ತು ಆದ್ಯತಾರಹಿತ ವಲಯದಲ್ಲಿ ಶೇ.೫೯.೧೮ ಪ್ರಗತಿ ಸಾಧಿಸಿದೆ. ಸಿಡಿ ರೇಷಿಯೋ ಶೇ.೭೬.೪೭ ಸಾಧಿಸಿ ಉತ್ತಮ ಪ್ರಗತಿ ಸಾಧಿಸಿದೆ ಎಂದ ಅವರು ಬ್ಯಾಂಕುಗಳು ಎಲ್ಲ ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಆರ್‌ಬಿಐ ಬ್ಯಾಂಕ್ ಎಲ್‌ಡಿಓ ಬಿಸ್ವಾಸ್ ಮಾತನಾಡಿ, ಆದ್ಯತಾ ವಲಯ, ಎಂಎಸ್‌ಎಂಇ, ಶಿಕ್ಷಣ ಮತ್ತು ವಸತಿ ಸೇರಿದಂತೆ ಬ್ಯಾಂಕು ಗಳಿಗೆ ನೀಡಲಾದ ವಲಯಗಳಲ್ಲಿ ನಿಗದಿತ ಗುರಿಯನ್ನು ಸಾಧಿಸಬೇಕು. ಎಲ್ಲ ಬ್ಯಾಂಕುಗಳು ತಮ್ಮಲ್ಲಿರುವ ಎಲ್ಲ ಉಳಿತಾಯ ಖಾತೆಗಳನ್ನು ಡಿಜಿಟಲ್ ಮೋಡ್‌ಗೆ ತರಬೇಕು. ಜಿಯಲ್ಲಿ ಈವರೆಗೆ ಶೇ.೮೯ ಖಾತೆಗಳು ಡಿಜಿಟಲೈಸ್ ಆಗಿದ್ದು ಶೇ.೧೦೦ ಆಗಬೇಕೆಂದರು.
ಸಭೆಯಲ್ಲಿ ಜಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಗತಿ ಮೂಡಿಸುವ ಪೋಸ್ಟರ್ ಬಿಡುಗಡೆಗೊಳಿಸಿ, ಎ ಬ್ಯಾಂಕು ಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಪೋಸ್ಟರ್ ಪ್ರದರ್ಶಿಸುವಂತೆ ಸಿಇಓ ಸೂಚನೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ್ ಸ್ವಾಗತಿಸಿದರು. ನಬಾರ್ಡ್ ಡಿಡಿಎಂ ಶರತ್‌ಗೌಡ, ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಜಿಪಂ ಮತ್ತು ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.