ಪ್ರಕಾಶ್ ಪಾಳಂಕರ್‌ಗೆ ವಿಠ್ಠಲಶ್ರೀ ಪ್ರಶಸ್ತಿ

ಶಿಕಾರಿಪುರ: ರಾಜ್ಯ ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದಿಂದ ನೀಡಲಾಗುವ ವಿಠ್ಠಲಶ್ರೀ ಪ್ರಶಸ್ತಿಗೆ ಪ್ರಕಾಶ್ ವಿ ಎನ್ (ಪ್ರಕಾಶ್ ಪಾಳಂಕರ್) ಇವರನ್ನ ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ವಿಠ್ಠಲ ಶ್ರೀ ಪ್ರಕಾಶ್ ಪಾಳಂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಮಂಜುನಾಥ ರೇಳೆಕರವರು ತಿಳಿಸಿzರೆ.
ಇವರು ಶಿವಮೊಗ್ಗ ಜಿಯ ಶಿಕಾರಿಪುರ ತಾಲೂಕು ಹುಲುಗಿನಕೊಪ್ಪ ಗ್ರಾಮದ ಶ್ರೀಮತಿ ಕುಸುಮಾ ಮತ್ತು ಶ್ರೀ ವಿಜಯ ಕುಮಾರ್ ಅವರ ದ್ವಿತೀಯ ಪುತ್ರ.