ಪ್ರಜ್ವಲ್ ವಿಡಿಯೋ ವೈರಲ್: ಸಿಬಿಐ ತನಿಖೆಗೆ ನಿಖಿಲ್ ಆಗ್ರಹ
ಶಿವಮೊಗ್ಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ದ್ದಾರೆ ಎಂದು ಹೇಳಲಾದ ಅಶ್ಲೀಲ ವಿಡಿಯೋ ವೈರಲ್ ಮಾಡಿರುವ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡ ಇದೆ ಎಂದು ಯುವ ಜನತಾದಳ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ನಿಖಿಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ರಾಜಕೀಯ ಹಿತಾಸಕ್ತಿ ಗಾಗಿ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆಯರ ಮುಖವನ್ನು ತೋರಿಸುವ ಮೂಲಕ ಮಹಿಳೆಯರ ಮಾನ ಹಾನಿಗೆ ನೇರ ಕಾರಣಕರ್ತರಾಗಿದ್ದಾರೆಂದು ಆರೋಪಿಸಿರುವ ಅವರು, ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸುವ ಮೂಲಕ ಪಾರದರ್ಶನ ತನಿಖೆಗೆ ಸಹಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಡಿಯೊವನ್ನು ಆಧುನಿಕ ತಂತ್ರeನ ಬಳಸಿ ತಿರುಚಿ ಸೃಷ್ಟಿಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದಂತೆ ಕಾಣುತ್ತಿದೆ, ಪ್ರಕರಣವನ್ನು ಪಾದರ್ಶಕವಾಗಿ ತನಿಖೆ ನಡೆಸಲು ಡಿಕೆಶಿ ಅವರನ್ನು ಸಂಪುಟದಿಂದ ಕೈಬಿಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರ ರಕ್ಷಣೆಗೆ ಮತ್ತಷ್ಟು ಕಠಿಣ ಕಾನೂನು ಜರಿಗೊಳಿಸ ಬೇಕೆಂದು ಎಸ್.ಎಲ್. ನಿಖಿಲ್ ಅವರು ಮನವಿ ಮಾಡಿದ್ದಾರೆ.