ಖಾತೆ ಹಂಚಿಕೆ ಹಗ್ಗ ಜಗ್ಗಾಟಕ್ಕೆ ತೆರೆ: ಸಚಿವರಿಗೆ ಸಿಕ್ತು ಖಾತೆ ಗ್ಯಾರೆಂಟಿ

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ಕೊನೆಗೂ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.
ಮೇ ೨೦ ರಂದು ಎಂಟು ಕ್ಯಾಬಿನೆಟ್ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕ್ರಮವಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಮೇ ೨೭ ರಂದು ೨೪ ಹೆಚ್ಚುವರಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
ಈಗ ಮೇ ೨೮ ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಚಿವರಿಗೆ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಶಿಫಾರಸನ್ನು ಅನುಮೋದಿಸಿzರೆ.
ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಜಯಗಳಿಸಿದ ಕೆಲವೇ ದಿನಗಳ ನಂತರ, ಸಚಿವರಿಗೆ ಆಯಾ ಇಲಾಖೆಗಳನ್ನು ನಿಯೋಜಿಸುವುದರೊಂದಿಗೆ ಅಂತಿಮವಾಗಿ ಸಂಪುಟ ರಚನೆಯಾಗಿದೆ.


ಸಾರಿಗೆ ಖಾತೆ ನಿರ್ವಹಿಸಲು ಹಿಂದೇಟು ಹಾಕಿzರೆ ಎಂದು ಹೇಳಲಾದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಜತೆಗೆ ಮುಜರಾಯಿ ಖಾತೆ ನೀಡಲಾಗಿದೆ. ಈ ಮೊದಲು ಅದನ್ನು ಆರ್.ಬಿ. ತಿಮ್ಮಾಪುರ್ ಅವರಿಗೆ ಅಬಕಾರಿ ಯೊಂದಿಗೆ ನೀಡಲಾಗಿತ್ತು.
ಹಿರಿಯ ಸಚಿವ ಹೆಚ್.ಕೆ. ಪಾಟೀಲ್‌ಗೆ ಕಾನೂನು ಸಂಸದೀಯ ವ್ಯವಹಾರಗಳ ಖಾತೆ ಜೊತೆಗೆ ಪ್ರವಾಸೋದ್ಯಮ ನೀಡಲಾಗಿದೆ. ಕರಡು ಪ್ರತಿಯ ಮಾಹಿತಿ ಪ್ರಕಾರ ಎನ್.ಎಸ್. ಬೋಸ್‌ರಾಜ್ ಅವರಿಗೆ ಪ್ರವಾಸೋದ್ಯಮ ಹಂಚಿಕೆ ಯಾಗಿತ್ತು. ಎನ್.ಎಸ್. ಬೋಸ್‌ರಾಜ್ ಅವರಿಗೆ ವಿeನ ತಂತ್ರeನದ ಜೊತೆಗೆ ಸಣ್ಣ ನೀರಾವರಿ ಜವಾಬ್ದಾರಿ ನೀಡಲಾಗಿದೆ.
ಕೆ.ಎನ್.ರಾಜಣ್ಣ ಅವರಿಗೆ ಸಹಕಾರದ ಜೊತೆಗೆ ಕೃಷಿ ಮಾರುಕಟ್ಟೆ ಜವಾಬ್ದಾರಿ ನೀಡಲಾಗಿದೆ. ಬಿ.ನಾಗೇಂದ್ರ ಅವರಿಗೆ ಯುವಜನ ಸೇವೆ, ಕ್ರೀಡೆಯ ಜೊತೆಗೆ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ಜವಾಬ್ದಾರಿ ವಹಿಸಲಾಗಿದೆ, ಈ ಮೊದಲು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯನ್ನು ಶಿವರಾಜ ತಂಗಡಗಿ ಅವರಿಗೆ ನೀಡಲಾಗಿತ್ತು. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನೀಡಲಾಗಿದೆ.


ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಕೌಶಲ್ಯಾಭಿವೃದ್ಧಿ ನೀಡಲಾಗಿತ್ತು, ಈಗ ಕೌಶಲ್ಯಾಭಿವೃದ್ಧಿಯನ್ನು ವೈದ್ಯಕೀಯ ಶಿಕ್ಷಣದ ಜೊತೆಗೆ ಶರಣಪ್ರಕಾಶ್ ಪಾಟೀಲ್‌ರಿಗೆ ನೀಡಲಾಗಿದೆ. ಡಿ.ಸುಧಾಕರ್ ಅವರಿಗೆ ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ಯೋಜನೆ ಮತ್ತು ಸಾಂಖಿಕ ಇಲಾಖೆ ನೀಡಲಾಗಿತ್ತು, ಮುಖ್ಯಮಂತ್ರಿಯವರು ಮೂಲ ಸೌಕರ್ಯವನ್ನು ತಮ್ಮ ಬಳಿಯೇ ಉಳಿಸಿಕೊಂಡಿzರೆ. ಖಾತೆ ಹಂಚಿಕೆಯ ಪೂರ್ಣ ಮಾಹಿತಿ ಕೆಳಕಂಡಂತಿದೆ.


ಸಚಿವರು ಖಾತೆಗಳು :
ಸಿದ್ದರಾಮಯ್ಯ(ಮುಖ್ಯಮಂತ್ರಿ) ಹಣಕಾಸು, ಸಂಪುಟ ವ್ಯವಹಾರಗಳ, ಸಿಬ್ಬಂದಿ, ಆಡಳಿತ ಸುಧಾರಣೆ, ವಾರ್ತಾ, ಐಟಿ-ಬಿಟಿ, ಮೂಲಸೌಲಭ್ಯವೃದ್ಧಿ ಮತ್ತು ಹಂಚಿಕೆಯಾಗದೆ ಉಳಿದ ಖಾತೆಗಳು
ಡಿ.ಕೆ. ಶಿವಕುಮಾರ್ (ಉಪಮುಖ್ಯಮಂತ್ರಿ) ಬೃಹತ್, ಮಧ್ಯಮ ನೀರಾವರಿ, ಬೆಂಗಳೂರು ನಗಾರಾಭಿವೃದ್ಧಿ, ಬಿಡಿಎ, ಬಿಡ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿ, ಬಿಎಂಆರ್‌ಸಿಎಲ್
೧. ಡಾ.ಜಿ.ಪರಮೇಶ್ವರ್ ಗೃಹ (ಗುಪ್ತಚರ ಹೊರತುಪಡಿಸಿ).
೨. ಕೆ.ಹೆಚ್.ಮುನಿಯಪ್ಪ ಆಹಾರ ಮತ್ತು ನಾಗರಿಕ ಪೂರೈಕೆ.
೩. ಕೆ.ಜೆ.ಜರ್ಜ್ ಇಂಧನ.
೪. ಎಂ.ಬಿ.ಪಾಟೀಲ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ.
೫. ಸತೀಶ್ ಜರಕಿಹೊಳಿ ಲೋಕೋಪಯೋಗಿ.
೬. ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್.
೭. ರಾಮಲಿಂಗಾರೆಡ್ಡಿ ಸಾರಿಗೆ, ಮುಜರಾಯಿ.
೮. ಜಮೀರ್ ಅಹ್ಮದ್‌ಖಾನ್ ವಸತಿ, ವ?, ಅಲ್ಪಸಂಖ್ಯಾತ ಅಭಿವೃದ್ಧಿ
೯. ಹೆಚ್.ಕೆ.ಪಾಟೀಲ್ ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ.
೧೦. ಕೃಷ್ಣ ಬೈರೇಗೌಡ ಕಂದಾಯ
೧೧. ಎನ್. ಚಲುವರಾಯಸ್ವಾಮಿ ಕೃಷಿ
೧೨. ಕೆ.ವೆಂಕಟೇಶ್ ಪಶುಸಂಗೋಪನೆ ಮತ್ತು ರೇಷ್ಮೆ.
೧೩. ಡಾ. ಹೆಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ
೧೪. ಈಶ್ವರ್ ಖಂಡ್ರೆ ಅರಣ್ಯ, ಜೀವವೈವಿದ್ಯ, ಪರಿಸರ
೧೫. ಕ್ಯಾತಸಂದ್ರದ ಎನ್. ರಾಜಣ್ಣ ಸಹಕಾರ, ಕೃಷಿ ಮಾರುಕಟ್ಟೆ.
೧೬. ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
೧೭. ಶರಣಬಸಪ್ಪ ದರ್ಶನಾಪೂರ್ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
೧೮. ಶಿವಾನಂದ ಪಾಟೀಲ್ ಜವಳಿ, ಸಕ್ಕರೆ
೧೯. ಆರ್.ಬಿ.ತಿಮ್ಮಾಪೂರ್ ಅಬಕಾರಿ.
೨೦. ಎಸ್.ಎಸ್. ಮಲ್ಲಿಕಾರ್ಜುನ್ ಗಣಿ, ಭೂ ವಿeನ, ತೋಟಗಾರಿಕೆ
೨೧. ಶಿವರಾಜ ಎಸ್.ತಂಗಡಗಿ ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ.
೨೨. ಡಾ. ಶರಣಪ್ರಕಾಶ್ ಆರ್. ಪಾಟೀಲ್ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ.
೨೩. ಮಂಕಾಳವೈದ್ಯ ಮೀನುಗಾರಿಕೆ, ಬಂದರು, ಒಳಸಾರಿಗೆ.
೨೪. ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ -ಮಕ್ಕಳ ಅಭಿವೃದ್ಧಿ.
೨೫. ರಹೀಂಖಾನ್ ಪೌರಾಡಳಿತ, ಹಜ್.
೨೬. ಡಿ.ಸುಧಾಕರ್ ಯೋಜನೆ, ಸಾಂಖ್ಯಿಕ.
೨೭. ಸಂತೋಷ್ ಎಸ್. ಲಾಡ್ ಕಾರ್ಮಿಕ.
೨೮. ಎನ್.ಎಸ್. ಬೋಸರಾಜು ಸಣ್ಣ ನೀರಾವರಿ, ವಿeನ-ತಂತ್ರeನ
೨೯. ಬಿ.ಎಸ್. ಸುರೇಶ ನಗರಾಭಿವೃದ್ಧಿ, ನಗರ ಯೋಜನೆ.
೩೦. ಮಧು ಬಂಗಾರಪ್ಪ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ
೩೧. ಡಾ.ಎಂ.ಸಿ.ಸುಧಾಕರ್ ವೈದ್ಯಕೀಯ ಶಿಕ್ಷಣ
೩೨. ಬಿ.ನಾಗೇಂದ್ರ ಯುವ ಜನಸೇವೆ, ಕ್ರೀಡೆ, ಪರಿಶಿಷ್ಟ ಪಂಗಡ ಅಭಿವೃದ್ಧಿ.