ಜನಸಂಖ್ಯೆ ಹೆಚ್ಚಳ – ನಿಯಂತ್ರಣ ಕುರಿತು ಜನಜಾಗೃತಿ ಇಂದಿನ ಅಗತ್ಯ: ಶಿವಕುಮಾರ್

ಶಿವಮೊಗ್ಗ:ಜನ ಸಂಖ್ಯೆಯಿಂ ದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕಾಗಿ ರುವುದು ನಮ್ಮೆಲ್ಲರ ಕರ್ತವ್ಯವಾ ಗಿದೆ ಎಂದು ಮೇಯರ್ ಶಿವ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ನಗರ ಪಾಲಿಕೆ, ಜಿಲ್ಲಾ ಆರೋಗ್ಯ ಇಲಾ ಖೆ, ಎಫ್‌ಪಿಎಐ ಆಶ್ರಯದಲ್ಲಿ ಇಂದು ತುಂಗಾನಗರದ ಪ್ರಸೂತಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಜನ ಸಂಖ್ಯಾ ದಿನಾಚರಣೆ/ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಳದ ದುಷ್ಪರಿ ಣಾಮಗಳು ಹಾಗೂ ಜನಸಂಖ್ಯೆ ನಿಯಂತ್ರದ ಬಗ್ಗೆ ಅಲೆಮಾರಿ, ಸ್ಲಂ, ವಲಸಿಗರು ವಾಸಿಸುವ ಸ್ಥಳ ಗಳಲ್ಲಿ ಹೆಚ್ಚು ಅರಿವು ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಜನಸಂಖ್ಯೆ ಹೆಚ್ಚಾದಷ್ಟು ನಮಗೆ ಎಲ್ಲ ಸೌಲ ಭ್ಯಗಳು ಕಡಿಮೆ ಆಗುತ್ತವೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಎಲ್ಲ ಕೇಂ ದ್ರಗಳಲ್ಲಿ ಜಗೃತಿ ಮೂಡಿಸಬೇ ಕೆಂದರು.


ಉಪ ಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್ ಮಾತನಾಡಿ, ಜನಸಂಖ್ಯೆ ನಿಯಂತ್ರಣದ ಕುರಿತು ನಾವು ನಮ್ಮ ಸುತ್ತಮುತ್ತ ಮುಖ್ಯ ವಾಗಿ ಅಲೆಮಾರಿ, ವಲಸೆ ಬರುವ ಸಮುದಾಯಗಳಿಗೆ ಅರಿವು ಮೂಡಿಸಬೇಕು. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯವನ್ನು ಇವರಿಗೆ ತಲುಪಿಸಬೇಕೆಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗಲೀ ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದ ಜನಸಂಖ್ಯೆಯಲ್ಲಿ ಭಾರತ ನಂ.೧ ದೇಶವಾಗಿ ಹೊರಹೊ ಮ್ಮಿದೆ. ಭಾರತದ ಜನಸಂಖ್ಯೆ ೧೪೨ ಕೋಟಿ ದಾಟಿದೆ. ರಾಜ್ಯದ ಜನ ಸಂಖ್ಯೆ ೭ ಕೋಟಿ ಸನಿಹದಲ್ಲಿದೆ. ಪ್ರತಿದಿನ ೭೯,೭೨೬ ಮಕ್ಕಳ ಜನನವಾಗುತ್ತಿದ್ದು, ಪ್ರತಿ ಗಂಟೆಗೆ ೩೩೨೧ ಮಕ್ಕಳ ಹುಟ್ಟು ಆಗುತ್ತಿದೆ. ಈ ರೀತಿಯ ವೇಗದ ಜನಸಂಖ್ಯೆ ಬೆಳವಣಿಗೆ ದೇಶದ ಪ್ರಗತಿಗೆ ಪೂರಕವಲ್ಲ. ಆರೋಗ್ಯವಂತ ಕುಟುಂಬ ಹೊಂದಲು ಸಾಧ್ಯ ವಾಗುವುದಿಲ್ಲ. ನಿರುದ್ಯೋಗ, ಆಹಾರ, ವಸತಿ, ಆರೋಗ್ಯ ಸಮ ಗಳು ಹೆಚ್ಚುತ್ತವೆ. ಆದ್ದರಿಂದ ಜನಸಂಖ್ಯೆಗೆ ಕಡಿವಾಣ ಹಾಕಲೇ ಬೇಕಿದೆ. ರೂಢಿ, ಸಂಪ್ರದಾಯ, ಮೂಢನಂಬಿಕೆ ಇತರೆ ಆಚರಣೆ ಹಂಗನ್ನು ತೊರೆದು ವೈಜನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು.
ಈ ಬಾರಿಯ ಘೋಷವಾಕ್ಯ ಆಜದಿ ಕಾ ಅಮೃತ್ ಮಹೋತ್ಸ ವದ ಅಂಗವಾಗಿ ಕುಟುಂಬ ಯೋಜನೆ ಯನ್ನು ಅಳವಡಿಸಿಕೊ ಂಡು ಸಂತೋಷ ಮತ್ತು ಸಮೃ ದ್ದಿಯ ಜೀವನವನ್ನು ಆಯ್ಕೆ ಮಾಡಿ ಕೊಳ್ಳುತ್ತೀವೆಂದು ಪ್ರತಿeಯನ್ನು ಮಾಡೋಣ ಎಂಬುದಾಗಿದ್ದು ಇದಂತೆ ಜನಸಂಖ್ಯೆ ಸ್ಥಿರತೆಯನ್ನು ಕಾಪಾಡಿಕೊಳ್ಳೋಣ ಎಂದರು.
ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಮಾತನಾಡಿ, ಹಿಂದೆಲ್ಲ ಮನೆಯಲ್ಲಿ ಆರೆಂಟು ಮಕ್ಕಳು ಸಾಮಾನ್ಯವಾಗಿತ್ತು. ಆದ ರೆ ಜನಸಂಖ್ಯೆ ಸ್ಫೋಟಗೊಳ್ಳು ತ್ತಿರುವ ಪ್ರಸ್ತುತ ದಿನಗಳಲ್ಲಿ ಮಕ್ಕಳು ಹೊರೆ ಅನ್ನೋ ಸ್ಥಿತಿ ಎದುರಾಗಿದೆ. ಜೀವನಶೈಲಿ ಬದಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಎಲ್ಲವನ್ನು ನೀಡಿ ಅವರನ್ನು ಅತ್ಯಂ ತ ಜವಾಬ್ದಾರಿ ನೋಡಿಕೊಳ್ಳುವ ಹೊಣೆಗಾರಿಕೆ ಪೊಷಕರಿಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಜನಸಂಖ್ಯೆ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯ. ಜನಸಂಖ್ಯೆ ಹೆಚ್ಚಿ ದಷ್ಟು ಸಮಸ್ಯೆಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ಆಹಾರ, ಶಿಕ್ಷಣ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಸಮತೋಲನ ಜೀವನ ನಡೆಸಲು ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ. ಎಲ್ಲ ಇಲಾಖೆಗಳು ಕೈಜೋಡಿಸಿ ಜನಸಂಖ್ಯೆ ನಿಯಂ ತ್ರಣ ಕಾರ್‍ಯಕ್ರಮಗಳ ಪರಿಣಾಮ ಕಾರಿ ಅನುಷ್ಟಾನ ಆಗಬೇಕು ಎಂದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ನಗರ ಪ್ರಸೂತಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭೀಮಪ್ಪ, ಡಾ.ಹರ್ಷವರ್ಧನ್, ಎಫ್‌ಪಿಎ ಪ್ರತಿನಿಧಿ ಪುಷ್ಪಾ ಶೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಸಿಬ್ಬಂದಿಗಳು ಹಾಜರಿದ್ದರು.