ಯೋಗದಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿ….

hagaribommanahalli

ಹಗರಿಬೊಮ್ಮನಹಳ್ಳಿ: ಯೋಗದಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚುವುದಲ್ಲದೆ ಯೋಗದಿಂದ eನ ಅಭಿವೃದ್ಧಿಯಾಗಿ ಅeನ ದಿಂದ ರೋಗ ಹೆಚ್ಚಾಗುವುದು ಎಂದು ದಾವಣಗೆರೆ ರಾಷ್ಟ್ರೋತ್ಥಾನ ಕಾಲೇಜಿನ ಕನ್ನಡ ಪನ್ಯಾಸಕಿ ಕೆ.ಎಂ.ಕುಸುಮ ಹೇಳಿದರು.


ತಾಲ್ಲೂಕಿನ ನಂದಿಪುರ ಪುಣ್ಯಕ್ಷೇತ್ರದ ಶ್ರೀಗುರು ದೊಡ್ಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ಫೌಂಡೇಶನ್, ಮಂಗಾಪುರದ ಜಿ.ಎಂ.ಸಿ ಟ್ರಸ್ಟ್ ಹಾಗೂ ಅಸಗೋಡು ಕೋಟೆಮಠದ ವಂಶಸ್ಥರ ಆಶ್ರಯದಲ್ಲಿ ಡಾ.ಎಂ. ಶಿವಮೂರ್ತಿಯವರ ದಿವ್ಯ ಚೈತನ್ಯ ಯೋಗ, ಮಠದ ಚನ್ನವೀರಸ್ವಾಮಿ ಯವರ ಕುರಿತ ಚನ್ನಚೇತನ-೮೨, ಎ.ಎಂ.ಕೊಟ್ರಸ್ವಾಮಿಯರ ಕುರಿತ ಕೋಟೆ ಮಠದ ಕಣ್ಮಣಿ ಎಂಬ ಅಭಿನಂದನಾ ಗ್ರಂಥಗಳ ಕುರಿತು ಅವರು ಮಾತನಾಡಿದರು.
ಅಗಾಧವಾದ ಧಾರ್ಮಿಕ ಹಾಗೂ ಸಾಹಿತ್ಯ ಕೃಷಿಮಾಡಿದ ಡಾ.ಎಂ.ಶಿವಮೂರ್ತಿಯವರು, ಅಹರ್ನಿಶಿ ಸೇವೆ ಸಲ್ಲಿಸಿದ ಚನ್ನವೀರಸ್ವಾಮಿಯವರು ಹಾಗೂ ನೀರಾವರಿ ಹೋರಾಟಗಾರ ಎ.ಎಂ. ಕೊಟ್ರಸ್ವಾಮಿಯವರ ಬದುಕು ಸರ್ವರಿಗೂ ಮಾರ್ಗ ದರ್ಶನವಾಗಲಿ ಎಂದ ಅವರು, ಅಗಮ್ಯ ಚೇತನ ಹೊಂದಿದ ಈ ಮಹನಿಯರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಸಾಧಕರು ಎಂದು ಹೇಳಿದರು. ಇಂದಿನ ಪೀಳಿಗೆ ಇವರ ದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕಿದೆ ಎಂದರು.
ಅಭಿನಂದನಾ ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಾಹಿತಿ ಎಂ.ಪಿ.ಎಂ. ಶಾಂತವೀರಯ್ಯ ಅವರು, ಜಗತ್ತಿನಲ್ಲಿಯೇ eನಕ್ಕೆ ಶ್ರೇಷ್ಠಸ್ಥಾನವಿದ್ದು, ಯುವಕರು ಮೊಬೈಲ್ ಬಳಕೆ ಕಡಿಮೆ ಮಾಡಿ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವತ್ತ ಮುಖಮಾಡಬೇಕಿದೆ ಎಂದರು.
ಅತಿ ಕಡಿಮೆ ಅಧ್ಯಯನ ಮಾಡಿದ ಪಂಪ, ಪೊನ್ನ, ರನ್ನ ಕವಿಗಳ ಕೃತಿಗಳಿಂದು ಸಂಶೋಧನ ಕೃತಿಗಳಿಗೆ ಮಹತ್ವವೆನಿಸಿವೆ. ಸಾವಿರಾರು ಸಂಶೋಧಕರು ಅವರ ಕತಿಗಳನ್ನು ಅಧ್ಯಯನ ಮಾಡುತ್ತಿzರೆ ಎಂದು ಹೇಳಿದರು.
ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಈ ಮೂರು ಕೃತಿಗಳ ಮಹನೀಯರು ಮೇರು ವ್ಯಕ್ತಿತ್ವವನ್ನು ಹೊಂದಿದ ವರು. ಇವರ ಬದುಕೇ ಚಿನ್ನಚೇತನ ವಾಗಿದೆ ಎಂದು ಹೇಳಿದರು. ಈ ಮಹನೀಯರ ಮಡದಿಯರ ಸೇವೆ ಕೂಡ ಸ್ಮರಿಸುವಂತzಗಿದೆ ಎಂದು ಹೇಳಿದರು.
ಸಾನಿಧ್ಯವಹಿಸಿದ್ದ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಮಾತನಾಡಿ, eನಾರ್ನೆಯಿಂದ ಪುಣ್ಯಲಭಿಸು ವುದು ಹಾಗೂ ಹಿರಿಯ ಜೀವಿಗಳನ್ನು ಗೌರವಿಸುವುದರ ಜೊತೆಗೆ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ನಾವಿಂದು ಒತ್ತಡದ ಬದುಕಿನಲ್ಲ ಜೀವಿಸುತ್ತಿದ್ದೇವೆ. ಮಹನೀಯರು ದೇಶ-ವಿದೇಶಗಳನ್ನು ಸಂಚರಿಸಿ ಬಂದರೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮೈಗೂಡಿಸಿಕೊಂಡು ತುಂಬಿದ ಕೊಡದ ಹಾಗೆ eನಿಗಳಾಗಿzರೆ. ಇವರ ಭವ್ಯ ಬದುಕು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದರು.
ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರಿ ಸ್ವಾಮೀಜಿ, ಗದ್ದಿಕೆರಿ ಹಿರೇಮಠದ ಅಭಿನವ ಚರಂತೇಶ್ವರ ಸ್ವಾಮೀಜಿ, ಆಂಧ್ರದ ಜಂಗಮರ ಹೊಸಹಳ್ಳಿಯ ಅಜತ ಶಂಭು ಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಡೂರಿನ ಕಷ್ಣಪಾದರು, ಡಾ.ಎಂ. ಶಿವಮೂರ್ತಿ, ಎಂ. ಚನ್ನವೀರ ಸ್ವಾಮಿ, ಎ.ಎಂ.ಕೊಟ್ರಸ್ವಾಮಿ ಉಪಸ್ಥಿತರಿದ್ದರು.
ಗ್ರಂಥಗಳ ಸಂಪಾದಕ ಎಂ.ಗುರುಸಿದ್ದಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ, ರೇವಣಸಿzಚಾರ್ ಪ್ರಾರ್ಥಿಸಿದರು. ಗಂಗಾವತಿಯ ಹಿರಿಯ ಸಾಹಿತಿ ಎಸ್.ವಿ. ಪಾಟೀಲ್ ಗುಂಡೂರು, ಶಿಕ್ಷಕಿ ಎಂ. ಮಂಗಳಾ, ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ಕಾರ್ಯಕ್ರಮ ನಿರೂಪಿಸಿದರು.