ಶಿವಮೊಗ್ಗ: ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶವಾ ಗಿದ್ದು, ಎಲ್ಲಾ ಜೀವ ವೈವಿಧ್ಯ ಪ್ರಾಣಿ. ಪಕ್ಷಿ ಜೀವಜಂತುಗಳ ಮತ್ತು ಪರಿಸರದ ಮಾಹಿತಿ ಛಾಯಾಚಿತ್ರ ಗಳಿಂದ ಲಭ್ಯವಾಗುತ್ತದೆ ಎಂದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದ್ದಾರೆ.
ಅವರು ಇಂದು ನಗರದ ನಿಜಲಿಂಗಪ್ಪ ಸಭಾಂಗಣದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಸಂಘ ಶಿವಮೊಗ್ಗ ವತಿಯಿಂದ ಹಮ್ಮಿ ಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನ, ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಬಂದ ಮೇಲೆ ಎಲ್ಲರೂ ಛಾಯಾಗ್ರಾಹಕರಾಗಿ ದ್ದಾರೆ. ಅತ್ಯಾಧುನಿಕ ಮೊಬೈಲ್‌ಗಳು ಬಂದಿದ್ದು, ಅಡ್ವಾನ್ಸ್ ಟೆಕ್ನಾಲಜಿ ಒಳಗೊಂಡಿದೆ. ಛಾಯಾಗ್ರಹಣ ಒಂದು ಕಲೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು ಮತ್ತು ಈ ಕಲೆಯಲ್ಲಿ ಆಸಕ್ತಿ ಹೊಂದಬೇಕು. ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವುದು ಕಲೆ ಅಲ್ಲ. ಕ್ಯಾಮೆರಾದ ಮೂಲಕ ಸುತ್ತಮು ತ್ತಲ ವೈವಿಧ್ಯತೆ ಸೆರೆಹಿಡಿದು ಅದರ ಬಗ್ಗೆ ಮಾಹಿತಿ ಪಡೆದು ಹಂಚಿ ಕೊಂಡಾಗ ಭವಿಷ್ಯಕ್ಕೆ ಸಹಕಾರಿ ಯಾಗುತ್ತದೆ. ಒಂದು ಛಾಯಾಚಿತ್ರ ದಿಂದ ಅನೇಕ ಮಾಹಿತಿಗಳು ಲಭ್ಯವಾಗುತ್ತದೆ ಎಂದರು.
ಖ್ಯಾತ ವೈದ್ಯರೂ ಹಾಗೂ ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹ ಕರೂ ಆದ ಡಾ| ಶ್ರೀಕಾಂತ್ ಹೆಗಡೆ ಮಾತನಾಡಿ, ಫೋಟೋಗ್ರಫಿ ಒಂದು ಕಲೆಯಾ ಗಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಆವಿಷ್ಕಾರ ವಾಗಿದೆ. ಫೋಟೋಗ್ರಫಿಯ ಬೇರೆ ಬೇರೆ ಆಯಾಮಗಳು ಸೂಕ್ಷ್ಮ ಜೀವಿ ವಲಯ, ಪ್ರಾಣಿ ಪಕ್ಷಿಗಳ, ಜೀವ ಜಂತುಗಳ ಮತ್ತು ಖಾಸಗಿ ಸಮಾರಂಭಗಳ ವಿಶೇಷ ಕ್ಷಣಗಳನ್ನು ಪರಿಚಯಿಸುತ್ತದೆ. ಇದಕ್ಕಾಗಿ ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಡಾ. ಪರಮೇ ಶ್ವರ್ ಶಿಗ್ಗಾಂವ್ ವಹಿಸಿದ್ದರು. ಶಿವಮೊಗ್ಗ ಯೋಗರಾಜ್, ಹೆಚ್. ಪ್ರದೀಪ್‌ಕುಮರ್ ಇನ್ನಿತರರಿದ್ದರು.