ಹಳೇ ಮಂಡ್ಲಿಯಿಂದ ಗ್ಯಾಸ್ ಪ್ಲಾಂಟ್ ಸ್ಥಳಾಂತರಕ್ಕೆ ಆಗ್ರಹಿಸಿ ಮನವಿ

ಶಿವಮೊಗ್ಗ: ನಗರದ ಹಳೆಮಂಡ್ಲಿ ಬಳಿ ಪ್ರಾರಂಭವಾಗುತ್ತಿರುವ ಗ್ಯಾಸ್ ಪ್ಲಾಂಟ್‌ನ್ನು ಬೇರೆಡೆಗೆ ಸ್ಥಳಾಂತರಿಸ ಬೇಕು ಎಂದು ಆಗ್ರಹಿಸಿ ಮುಸ್ಲಿಮ್ಸ್, ಎಸ್.ಸಿ., ಎಸ್.ಟಿ ಮತ್ತು ಓಬಿಸಿ ಡೆವಲಪ್‌ಮೆಂಟ್ ಫೋರಂನಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಾರ್ಡ್ ನಂ.೩೧, ೩೩ರ ಹಳೇ ಮಂಡ್ಲಿ ಹತ್ತಿರ ಎಜಿಪಿ ಸಿಟಿ ಗ್ಯಾಸ್ ಖಾಸಗಿ ಸಂಸ್ಥೆಯವರು ಗ್ಯಾಸ್ ಪ್ಲ್ಯಾಂಟ್ ನಿರ್ಮಿಸಲು ಹೊರಟಿ ದ್ದಾರೆ. ಈ ಎರಡೂ ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಸುಮಾರು ೪ ಸಾವಿರ ಮನೆ, ಶಾಲೆ, ಅಂಗನ ವಾಡಿ, ಆಸ್ಪತ್ರೆಗಳಿವೆ. ಗ್ಯಾಸ್ ಪ್ಲ್ಯಾಂಟ್ ನಿರ್ಮಿಸುವುದರಿಂದ ಉಸಿರಾಟದ ತೊಂದರೆಯಾಗಿ ಅನಾರೋಗ್ಯಕ್ಕೆ ಈಡಾಗುವ ಸಂಭವವಿದೆ ಎಂದು ಪ್ರತಿಭಟನಕಾರರು ದೂರಿದರು.
ಅಲ್ಲದೆ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿಂದೆಯೂ ಕೂಡ ಇಲ್ಲಿ ಪ್ಲ್ಯಾಂಟ್ ಬೇಡ ಎಂದು ಮನವಿ ಮಾಡಿದ್ದೆವು. ಆದರೆ ಇದುವರೆಗೂ ಸ್ಥಳಾಂತರ ಆದೇಶ ವಾಗಿಲ್ಲ. ಆದ್ದರಿಂದ ಇಲ್ಲಿನ ನಿವಾಸಿ ಗಳ ಆರೋಗ್ಯ ರಕ್ಷಣೆಗಾಗಿ ಈ ಪ್ಲ್ಯಾಂಟ್ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರಮುಖರಾದ ಮಹ್ಮದ್ ವಸೀಕ್, ಮುನಾವರ್ ಪಾಶಾ, ವಸೀಂ ಖಾನ್, ಅಫ್ತರ್ ಪಾಶಾ ಸೇರಿದಂತೆ ಹಲವರಿದ್ದರು.