ಜೀವನದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಅಗತ್ಯ : ಸ್ವಾಮೀಜಿ

ನ್ಯೂಜೆರ್ಸಿ: ಮನುಷ್ಯನು ಧರ್ಮ ಮತ್ತು ಆಧ್ಯಾತ್ಮಿಕತೆಗಳಿಂದ ಶಾಂತಿ, ಸಮಾಧಾನ ಮತ್ತು ನೆಮ್ಮ ದಿಯಿಂದ ಬಾಳಬೇಕು ಎಂದು ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು ತಿಳಿಸಿದರು.
ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣವಾಗಿರುವ ಬ್ಯಾಪ್ಸ್ ಸ್ವಾಮಿ ನಾರಾಯಣ ಅಕ್ಷರ ಧಾಮ ದ ಉದ್ಘಾಟನಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸ್ಫೂರ್ತಿ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಸ್ವಾಮಿ ನಾರಾಯಣ ಸಂಸ್ಥೆಯು ಧಾರ್ಮಿಕ ಕೇಂದ್ರಗಳನ್ನು ಅದ್ಭುತ ವಾಗಿ, ಅತ್ಯಾಧುನಿಕವಾಗಿ ನಿರ್ಮಿ ಸುತ್ತಿದೆ. ಇವು ಅಲ್ಲಿಗೆ ಬರುವ ಭಕ್ತಾದಿಗಳಿಗೆ ಶಾಂತಿ, ನೆಮ್ಮದಿ, ಸೌಹಾರ್ದತೆಗಳನ್ನು ನೀಡುವ ಪವಿತ್ರ ಸ್ಥಳಗಳಾಗಿವೆ ಎಂದರು.
ಇಲ್ಲಿನ ದೇವಸ್ಥಾನಗಳು ಕೇವಲ ಆಚರಣೆಗಳಿಗೆ ಸೀಮಿತವಾ ಗಿರದೆ ಮನುಷ್ಯನ ಮನಸ್ಸಿನ ತಾಪ ವನ್ನು ನಿವಾರಿಸುವ ಕೇಂದ್ರಗಳಾ ಗಿವೆ. ದೇವಸ್ಥಾನಗಳು ಕೇವಲ ಲೌಕಿಕ ಸೌಂದರ್ಯದ ತಾಣಗಳಾ ಗದೇ ಮನುಷ್ಯನ ಜೀವನದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಉದ್ಭೋದಕಗೊಳಿಸುವವುಗಳಾ ಗಿವೆ. ಭಕ್ತರು ಮತ್ತು ಭಗವಂತನ ನಡುವಿನ ಅನುಸಂಧಾನ ಕೇಂದ್ರ ಗಳಾಗಿವೆ. ಈ ಪರಂಪರೆಯ ಐದನೆಯ ಆಧ್ಯಾತ್ಮಿಕ ಗುರುಗಳಾ ಗಿದ್ದ ಶ್ರೀ ಪ್ರಮುಖ್ ಸ್ವಾಮಿಗಳು ಸ್ವಾಮಿ ನಾರಾಯಣ ಸಂಸ್ಥೆಯನ್ನು ಜಗದ್ವ್ಯಾಪಕವಾಗಿ ಬೆಳಸಿದರು. ಅವರ ಉತ್ತರಾಧಿಕಾರಿಗಳಾಗಿರುವ ಶ್ರೀ ಮಹಾಂತ ಸ್ವಾಮಿಗಳ ಆಶ ಯದಂತೆ ಯಶಸ್ವಿಯಾಗಿ ಮುನ್ನ ಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಪ್ಸ್‌ನ ಅಂತರ ರಾಷ್ಟ್ರೀಯ ಸಂಶೋಧನಾ ವಿಭಾಗದ ಸಂಚಾಲಕರಾದ ಈಶ್ವರಚರಣ ಸ್ವಾಮೀಜಿಯವರು ಹಾಗೂ ಶ್ರೀ ಬಾಬ್ ಹೂಗಿನ್ ಮೊದಲಾದವರು ಮಾತನಾಡಿ ದರು.
ಕಾರ್ಯಕ್ರಮದಲ್ಲಿ ಬ್ಯಾಪ್ಸ್‌ನ ನೂರಾರು ಸಾಧುಗಳು, ಅಮಿ ತಾಬ್ ಮಿತ್ತಲ್, ಡಾ. ಸುರೇಶ್ ದೇಸಾಯಿ, ಬಲವಂತ್ ಪಟೇಲ್, ಭೌಮಿಕ್ ರೊಕಾಡಿಯಾ, ಶ್ರೀ ತ್ಯಾಗವಲ್ಲಭ ಸ್ವಾಮೀಜಿ, ಮೈಕೆಲ್ ಆಡಂ, ಮಾರಿಯೋ ಚಾಮರಸ್, ಹರೀಶ್ ಗೋಯೆಲ್, ಡಾ. ಗೌತಮ್ ಷಾ, ಬಿಕ್ಕು ಪಟೇಲ್, ಚಂದು ಪಟೇಲ್ ಮೊದಲಾದ ವರು ಪಾಲ್ಗೊಂಡಿದ್ದರು ಎಂದು ಸುತ್ತೂರ ಮಠದ ವಕ್ತಾರ ಕೆ.ಜಿ.ಲಿ ಂಗಪ್ಪ ಹೊಳಲೂರು ತಿಳಿಸಿದ್ದಾರೆ.