ಯಕ್ಷಗಾನ ಉಳಿವಿಗೆ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ :ಜನ್ಸಾಲೆ

ಸಾಗರ : ಯಕ್ಷಗಾನ ಕಲೆ ಯನ್ನು ಉಳಿಸಿ ಬೆಳೆಸುವಲ್ಲಿ ಕಲಾ ಭಿಮಾನಿಗಳ ನಿರಂತರ ಪ್ರೋತ್ಸಾಹ ಅಗತ್ಯ ಎಂದು ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘ ವೇಂದ್ರ ಆಚಾರ್ಯ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಸಿರಿವಂತೆಯ ಶ್ರೀ ತ್ರಿಪುರಾಂತಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷರಂಗ ಸಿರಿವಂತೆ ಇವರ ಸಂಯೋಜನೆ ಯಲ್ಲಿ ಯಕ್ಷ ರಾಘವ ಪ್ರತಿಷ್ಠಾನ ಜನ್ಸಾಲೆ ಇವರಿಂದ ಏರ್ಪಡಿಸಿದ್ದ `ಸಂಪೂರ್ಣ ನಾಗಶ್ರೀ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಯಕ್ಷರಂಗದಲ್ಲಿ ರಜತ ಸಂಭ್ರಮ ಆಚರಿಸುತ್ತಿರುವ ರಾಘವೇಂದ್ರ ಆಚಾರ್ಯರ ಸನ್ಮಾನ ಸಮಾರಂಭ ದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಯಕ್ಷಗಾನವೊಂದು ಸಮೂಹ ಕಲೆ. ಇಲ್ಲಿ ಕಲಾವಿದರು, ಕಲಾಭಿಮಾನಿಗಳ ಸಮ್ಮಿಲನವಾಗ ಬೇಕು. ಕಲಾಭಿಮಾನಿಗಳಿಲ್ಲದಿದ್ದರೆ ಕಲೆಯ ಬೆಳವಣಿಗೆ ಕುಂಠಿತ ಗೊಳ್ಳುತ್ತದೆ ಎಂದರು.
ಈ ಪ್ರಾಂತ್ಯದಲ್ಲಿ ಯಕ್ಷಗಾನ ಕಲೆಗೆ ತುಂಬ ಪ್ರೋತ್ಸಾಹ ಸಿಗುತ್ತಿದೆ. ಬೇರೆ ಬೇರೆ ಮಾಧ್ಯಮಗಳ ಹಾವಳಿಯಲ್ಲೂ ಯಕ್ಷಗಾನ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಇಲ್ಲಿ ಸ್ಥಳದಲ್ಲಿ ಬರುವ ವರ್ಷ ಏಳು ದಿನಗಳ ಕಾಲಮಿತಿಯ ಸಪ್ತಾಹ ವನ್ನು ನಡೆಸುವ ಸಂಕಲ್ಪ ಮಾಡಿ ದ್ದೇನೆ.
ತಮ್ಮ ಸಹಕಾರದಿಂದ ಇದು ಸಾಧ್ಯವಾದೀತು. ನನ್ನ ೨೫ ವರ್ಷ ಗಳ ಯಕ್ಷಗಾನದ ಸೇವೆಯಲ್ಲಿ ಅಭಿಮಾನಿಗಳು ಪ್ರೀತಿ ವಿಶ್ವಾಸ ದಿಂದ ಬೆಳೆಸಿzರೆ ಎಂದರು.
ಯಕ್ಷಗಾನ ಸಂಘಟಕ ರಘು ಪತಿ ಭಟ್ ಸಿರಿವಂತೆ ಮಾತನಾಡಿ, ಜನ್ಸಾಲೆಯವರು ತಮ್ಮ ರಜತ ಸಂಭ್ರಮದ ಹೊತ್ತಲ್ಲಿ ಸಿರಿವಂತೆ ಯಲ್ಲಿ ಒಂದು ಯಕ್ಷಗಾನ ಪ್ರದರ್ಶನ ಮಾಡುವ ಕುರಿತು ತಿಳಿಸಿದಾಗ ಸಂತೋಷದಿಂದ ಒಪ್ಪಿ ಪ್ರದರ್ಶನ ಏರ್ಪಡಿಸಿದ್ದೇವೆ. ಇದಕ್ಕೆ ಮುಖ್ಯವಾಗಿ ಕಲಾಪೋಷಕರಾದ ಎಸ್.ವಿ.ಪ್ರಕಾಶ್, ಪೇಪರ್ ಲಕ್ಷ್ಮಣ್ ಮುಂತಾದವರು ಸಹಕರಿಸಿ zರೆ.
ಈ ಸೀಮೆಯ ಸುತ್ತ ಮುತ್ತಲಿನ ಕಲಾಭಿಮಾನಿಗಳು ಬಂದು ಪ್ರದರ್ಶನಕ್ಕೆ ಮೆರಗು ನೀಡಿzರೆ. ಯಕ್ಷಗಾನ ಕಲೆಯ ನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಸಹ ಕಾರ ಯಾವತ್ತೂ ಇದೆ ಎಂದರು.
ಸಂಘಟನೆಯ ವಿಠ್ಠಲ್ ಎಚ್.ಕೆ., ಪೇಪರ್ ಲಕ್ಷ್ಮಣ್, ಸಿರಿವಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜಪ್ಪ ಇದ್ದರು.
ನಂತರ ಸಂಪೂರ್ಣ ನಾಗಶೀ ಯಕ್ಷಗಾನ ಪ್ರದರ್ಶನಗೊಂಡಿತು. ಜನ್ಸಾಲೆ, ಸುನೀಲ್, ಪ್ರಜ್ವಲ್, ಉದಯ ಹೆಗಡೆ ಕಡಬಾಳ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ನಾಗರಾಜ್, ಶ್ರೀಧರ್, ರವೀಂದ್ರ ದೇವಾಡಿಗ, ಪುರಂದರ, ಕಾರ್ತೀ ಕ್ ಚಿಟ್ಟಾಣಿ, ವಿನಯ್ ಬೆರೊಳ್ಳಿ, ಅಣ್ಣಪ್ಪ, ದರ್ಶನ್ ಭಟ್ ಮುಂ ತಾದ ಕಲಾವಿದರು ಭಾಗವಹಿಸಿ ದ್ದರು.