ಹೊನ್ನಾಳಿ ನೌಕರರ ಸಂಘದ ಅಧ್ಯಕ್ಷರಾಗಿ ಪಾಟೀಲ್ ಆಯ್ಕೆ

ಹೊನ್ನಾಳಿ : ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎಸ್.ಆರ್.ಪಾಟೀಲ್ ಅವರು ಮೂರು ಮತಗಳ ಅಂತರದಿಂದ ಆಯ್ಕೆಯಾಗಿzರೆ ಎಂದು ಚುನಾವಣಾ ಅಧಿಕಾರಿ ಅರುಣ್‌ಕುಮಾರ್ ತಿಳಿಸಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ತಾಲೂಕು ಅಧ್ಯಕ್ಷ ಹುzಗೆ ಆರೋಗ್ಯ ಇಲಾಖೆಯ ಎಸ್.ಆರ್.ಪಾಟೀಲ್ ಹಾಗೂ ಶಿವಪದ್ಮ ನಾಮಪತ್ರ ಸಲ್ಲಿಸಿದರು, ನೌಕರರ ಸಂಘದ ಒಟ್ಟು ೨೦ ಸದಸ್ಯರುಗಳು ಇದ್ದು ತಮ್ಮ ಮತದಾನ ಮಾಡಿದ್ದು. ಈ ಚುನಾವಣೆಯಲ್ಲಿ ಎಸ್.ಆರ್. ಪಾಟೀಲ್ ಅವರಿಗೆ ೧೧ ಹಾಗೂ ಶಿವಪದ್ಮ ಅವರಿಗೆ ೮ ಮತ್ತು ಒಂದು ಮತ ತಿರಸ್ಕೃತಗೊಂಡಿದ್ದು, ೩ ಮತಗಳ ಅಂತರದಲ್ಲಿ .ಎಸ್‌ಆರ್ ಪಾಟೀಲ್ ಅವರು ಆಯ್ಕೆಯಾಗಿ zರೆ ಎಂದು ಘೋಷಿಸಿದರು.
ಇದೇ ವೇಳೆ ರಾಜ್ಯ ಪರಿಷತ್ ಸದಸ್ಯಸ್ಥಾನಕ್ಕೆ ಹರಳಹಳ್ಳಿ ಬೀರೇಶ್ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ವಾಗಿ ಆಯ್ಕೆಗೊಂಡರು.
ಈ ಸಂಧರ್ಭದಲ್ಲಿ ನೌಕರ ಸಂಘದ ನಿಕಟ ಪೂರ್ವ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಕುಮಾರ್, ನೌಕರ ಸಂಘದ ನಿರ್ದೇಶಕರಾದ ಕೋಟ್ಯಪ್ಪ, ಚಂದ್ರಶೇಖರ್, ನಾಗೇಶ್, ಬೀರೇಶ್, ದೀಪಕ್, ರವಿ ಕುಮಾರ್, ಕುಮಾರ್ ನಾಯ್ಕ್, ಮುರುಗೇಶಪ್ಪ, ಮಹೇಂದ್ರ ಕುಮಾರ, ಮೃತ್ಯುಂಜಯ, ಬಸವರಾಜಪ್ಪ, ಮಂಜುನಾಥ, ಮಲ್ಲಿಕಾರ್ಜುನ, ಕಿರಣ್ ಸಹಾಯಕ ಚುನಾವಣಾಧಿಕಾರಿ ಅಪ್ಸರ್ ಅಹಮ್ಮದ್ ಮೊದಲಾದವರು ಇದ್ದರು.