ಬದುಕಿನಲ್ಲಿ ನೆಮ್ಮದಿ ಪ್ರಾಪ್ತಿಗೆ ತಾಳ್ಮೆ ಮುಖ್ಯ…

D3-LK1B

ಸೊರಬ: ಧಾವಂತದ ಬದುಕಿನಲ್ಲಿ ನೆಮ್ಮದಿ ಪ್ರಾಪ್ತವಾಗ ಬೇಕಾದರೆ ಎಲ್ಲರಿಗೂ ತಾಳ್ಮೆ ಎಂಬುದು ಅಸ್ತ್ರವಾಗಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.


ತಾಲೂಕಿನ ಚಿಕ್ಕಬ್ಬೂರು ಗ್ರಾಮ ದಲ್ಲಿ ಕಬ್ಬೂರು, ಗುಡುಗಿನಕೊಪ್ಪ ಹೊಸಗುಡುಗಿನಕೊಪ್ಪ, ಕಾನುಕೊಪ್ಪ ಗ್ರಾಮದ ವತಿಯಿಂದ ಪ್ರತಿಷ್ಠಾಪಿಸಿದ ವೀರಾಂಜನೇಯ ಮೂರ್ತಿ ದೇವರ ಮಂಡಲೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಜೀವನದಲ್ಲಿ ನೆಮ್ಮದಿ ಸಿಗುವುದು ಅಪರೂಪ. ಅದನ್ನು ಎಲ್ಲಿಯೂ ಖರೀದಿಸಲು ಆಗದು. ಆದರೆ ನೆಮ್ಮದಿ ಇರದಿದ್ದರೆ ಬದುಕು ಅಪೂರ್ಣ. ಶರಣರು ಹೇಳಿದಂತೆ ಸಂತೆಯೊಳಗೆ ಒಂದು ಮನೆಯ ಮಾಡಿ ಗೌಜು ಗದ್ದಲಗಳಿಗೆ ಹೆದರಿದರೆ ಹೇಗೆ. ಸಮುದ್ರದ ದಡೆಯಲ್ಲಿ ಮನೆಯ ಮಾಡಿ ನೆರೆ ತೊರೆಗಳಿಗೆ ಹೆದರಿದರೆ ಹೇಗೆ. ಕಾಡಿನಲ್ಲಿ ಮನೆಯ ಮಾಡಿ ಕ್ರೂರ ಮೃಗಗಳಿಗೆ ಹೆದರಿದರೆ ಹೇಗೆ. ಹಾಗೆಯೇ ಸಂಸಾರದಲ್ಲಿ ಬಂದ ಬಳಿಕ ಯಾವುದಕ್ಕೂ ಹೆದರದೆ ಜೀವನದ ಸಮಸ್ಯೆಗಳನ್ನು ಎದುರಿಸಬೇಕು. ಇದೆಲ್ಲಕ್ಕೂ ಸಹನೆ ತಾಳ್ಮೆ ಸಮಾಧಾನ ಇರಬೇಕು. ಹೇಗೆ ಕರ್ಣನಿಗೆ ಕರ್ಣಕುಂಡಲದ ರಕ್ಷೆ ಇತ್ತೋ ಹಾಗೆ ನಮಗೆ ಸಹನೆ ಎಂಬುದರ ವಜ್ರ ಕವಚ ಇರಬೇಕು. ಅಂದಾಗ ಬದುಕಿನ ಸಂಕಟಗಳನ್ನು ಧೈರ್ಯವಾಗಿ ಎದುರಿಸಬಹುದು ಆ ಸಹನೆಯ ವಜ್ರ ಕವಚವನ್ನು ನೀಡುವವನು ಶನೈಶ್ಚರ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಜಡೆ ಸಂಸ್ಥಾನಮಠ ಹಾಗೂ ಸೊರಬ ಮುರುಘಾಮಠದ ಡಾ| ಮಹಾಂತ ಮಹಾಸ್ವಾಮಿಗಳು ಮನುಷ್ಯನ ಜನ್ಮ ಅರಿವಿನ ಜನ್ಮ. ಸೃಷ್ಟಿಯ ಎ ಜೀವಿಗಳೂ ಮರೆವಿನ ಜನ್ಮ ಹೊಂದಿದ್ದರೆ ಮನುಷ್ಯ ಮಾತ್ರ ಅರಿವು ಹಾಗೂ ಮರೆವು ಎರಡನ್ನೂ ಹೊಂದಿzನೆ. ಆದ್ದರಿಂದಲೆ ನಾವು ಕೆಲವನ್ನು ಮರೆಯುತ್ತೇವೆ ಮತ್ತೆ ಕೆಲವನ್ನು ನೆನಪಿಸಿಕೊಳ್ಳುತ್ತೇವೆ. ಹಾಗೆ ನೆನಪಿಸಿ ಕೊಳ್ಳುವ ಕಾರ್ಯಕ್ರಮ ಇದಾಗಿದೆ. ದೇವರು ನಮಗೆ ಏನೆಲ್ಲವನ್ನು ಮಾಡಿzನೆ. ಅವನನ್ನು ಸದಾ ಕಾಲವು ನೆನಪಿಸಿಕೊಳ್ಳುತ್ತಿರ ಬೇಕು ಎಂದರು.
ಹಿರೇಮಾಗಡಿ ಮಠದ ಶಿವ ಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ದ್ದರು. ದೇವಾಲಯ ನಿರ್ಮಾಣಕ್ಕೆ ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಊರ ಹಿರಿಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಶನಿಪ್ರಭಾವ ಅರ್ಥಾತ್ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಹಾನಗಲ್ ವಕೀಲರು ಹಾಗು ಅಶೋಕ ಗೌಡ್ರು, ಲೋಕಪ್ಪ, ಬಸವರಾಜಪ್ಪ ಕೊಡಕಣಿ, ಪ್ರಹ್ಲಾದಪ್ಪ, ವಜ್ರ ಮುನಿ, ರಘು, ಪರಸಪ್ಪ, ನಿಂಗಪ್ಪ ಗೌಡ್ರು, ಚಂದ್ರಶೇಖರಪ್ಪ, ನಿಂಗಪ್ಪ ಹಾಗೂ ದೇವಾಲಯ ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮ ಸಮಿತಿಯ ಸದಸ್ಯರು ಹಾಗೂ ಊರ ಗ್ರಾಮಸ್ಥರು ಹಾಜರಿದ್ದರು.