ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ ಮನಸ್ಸು ಸದೃಢ : ಸುನೀಲ್
ಶಿವಮೊಗ್ಗ: ಚಾರಣ ಚಟು ವಟಿಕೆಯಲ್ಲಿ ಎಲ್ಲರೂ ತೊಡಗಿಸಿ ಕೊಳ್ಳಬೇಕು. ಚಾರಣದಲ್ಲಿ ಪಾಲ್ಗೊ ಳ್ಳುವುದರಿಂದ ದೇಹ ಮನಸ್ಸು ಸದೃಢಗೊಳ್ಳುವುದರ ಜತೆಯಲ್ಲಿ ಸಂತೋಷ ನಮ್ಮದಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋ ಸಿಯೇಷನ್ ಆಫ್ ಇಂಡಿಯಾ ಜಿ ಘಟಕದ ಅಧ್ಯಕ್ಷ ಜಿ.ಜಿ. ಸುನೀಲ್‌ಕುಮಾರ್ ಹೇಳಿದರು.
ಯೂತ್ ಹಾಸ್ಟೆಲ್ ಆಫ್ ಅಸೋಸಿಯೇಷನ್ ಇಂಡಿಯಾ ಜಿ ಘಟಕದ ವತಿಯಿಂದ ಆಯೋಜಿಸಿದ್ದ ಮಳೆಗಾಲದ ಚಾರ ಣಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾರಣಗಳನ್ನು ಪ್ರತಿ ವರ್ಷ ಜಿ ಘಟಕದ ಆಯೋ ಜಿಸುತ್ತಿದ್ದು, ನೂರಾರು ಜನರು ಚಾರಣದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿzರೆ ಎಂದು ತಿಳಿಸಿದರು.
ಚಾರಣ ಮಾಡುವುದರಿಂದ ಸಸ್ಯ ಸಂಕುಲ ಹಾಗೂ ಜೀವ ವೈವಿ ಧ್ಯತೆಯ ಪರಿಚಯ ಆಗುತ್ತದೆ. ಪರಿಸರದ ವಿಶೇಷತೆ ಬಗ್ಗೆ ತಿಳಿ ಯುತ್ತದೆ. ಹೋಗೆರೆಖನ ಪರ್ವ ತಕ್ಕೆ ೨೦ ಕಿಮೀ ಚಾರಣದಲ್ಲಿ ೬೪ ಸದಸ್ಯರು ಪಾಲ್ಗೊಂಡಿರುವುದು ವಿಶೇಷ. ಮಹಿಳೆಯರು, ಮಕ್ಕಳು ಅತ್ಯಂತ ಖುಷಿಯಿಂದ ಪಾಲ್ಗೊಂ ಡಿರುವುದು ಸಂತಸದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ಜಿ ಚೇರ್‌ಮನ್ ಹರೀಶ್ ಪಂಡಿತ್ ಮಾತನಾಡಿ, ಚಾರಣದಿಂದ ಸಹ ಪ್ರವಾಸಿ ಗಳೊಂದಿಗೆ ಉತ್ತಮ ಸಂವಹನ ನಡೆಸುವ ಜತೆಯಲ್ಲಿ ಮಾಹಿತಿ ವಿನಿಮಯ ಆಗುತ್ತದೆ. ಮಾನಸಿಕ ದುಗುಡ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ. ದೇಹದ ಶಕ್ತಿ ಸಾಮಾರ್ಥ್ಯದ ಅರಿವಾಗುತ್ತದೆ ಎಂದು ಹೇಳಿದರು.
ಯೂತ್ ಹಾಸ್ಟೆಲ್ ರಾಜ್ಯ ಸಂಘದ ಮಾಜಿ ಉಪಾಧ್ಯಕ್ಷ ಜಿ. ವಿಜಯ್‌ಕುಮಾರ್ ಮಾತನಾಡಿ, ತುಂಬಾ ಕಡಿಮೆ ಖರ್ಚಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಚಾರಣ ಗಳನ್ನು ಯೂತ್ ಹಾಸ್ಟೆಲ್ ಆಯೋಜಿಸುತ್ತದೆ. ಹೆಚ್ಚು ಹೆಚ್ಚು ಜನರು ಯೂತ್ ಹಾಸ್ಟೆಲ್ ಸದಸ್ಯರಾಗಬೇಕು. ಮಳೆಯಲ್ಲಿ ನಡೆದ ಚಾರಣ ವಿಶೇಷ ಅನುಭವ ಎಂದು ತಿಳಿಸಿದರು.
ಚಾರಣದಲ್ಲಿ ಕಾರ್ಯದರ್ಶಿ ಪ್ರಶಾಂತ್, ಉಮೇಶ್ ಅಕ್ಕಸಾಲಿ, ರಾಘವೇಂದ್ರ, ಬದ್ರಿನಾಥ್, ಸುನೀಲ್, ಜಿ ಘಟಕದ ನಿರ್ದೆ ಶಕರು, ಪದಾಧಿಕಾರಿಗಳು ಇದ್ದರು.