ಪರಿಷತ್ ಸ್ಥಾನ – ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಆಯ್ನೂರ್ ರಾಜೀನಾಮೆ…

ಶಿವಮೊಗ್ಗ: ನಿರೀಕ್ಷೆಯಂತೆ ಆಯನೂರು ಮಂಜುನಾಥ್ ತಮ್ಮ ಶಾಸಕ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರುವ ಸುಳಿವು ನೀಡಿzರಲ್ಲದೆ ನಾಳೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಇಂದು ವಿಧಾನ ಪರಿಷತ್ ಸಭಾಧ್ಯಕ್ಷರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡುತ್ತೇನೆ. ಇದಕ್ಕಾಗಿ ಹುಬ್ಬಳ್ಳಿಗೆ ತೆರಳುವೆ. ಹಾಗೆಯೇ ಬಿಜೆಪಿಯ ಪ್ರಾಥಮಿಕ ಸದಸ್ಯ ತ್ವಕ್ಕೂ ರಾಜೀನಾಮೆ ನೀಡುತ್ತೇನೆ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ. ಒಂದು ಪಕ್ಷದಲ್ಲಿಯೇ ಸ್ಪರ್ಧಿಸುತ್ತೇನೆ. ಇಂದು ಸಂಜೆಯೊಳಗೆ ಯಾವ ಪಕ್ಷದಿಂದ ಸ್ಪರ್ಧಿಸುವೆ ಎಂದು ಹೇಳುತ್ತೇನೆ. ಪಕ್ಷದ ಮುಖಂಡರ ಜೊತೆ ಮಾತನಾಡ ಬೇಕಾಗಿದೆ ಎಂದು ಹೇಳುವ ಮೂಲಕ ತಾವು ಜೆಡಿಎಸ್ ಸೇರ ಲಿದ್ದೇನೆ ಎಂಬ ಸುಳಿವು ನೀಡಿ zರೆ.
ಪ್ರಮುಖವಾಗಿ ಶಿವಮೊಗ್ಗ ದಲ್ಲಿ ಶಾಂತಿ ನೆಲೆಸಬೇಕು. ಈ ಕ್ಷೇತ್ರದ ಮತದಾರರ ಋಣವನ್ನು ತೀರಿಸಬೇಕು. ಸಾಮರಸ್ಯ, ಸೌಹಾರ್ದತೆಯ ಪರಂಪರೆಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಬಿಜೆಪಿನ್ನು ತೊರೆಯುತ್ತಿದ್ದೇನೆ. ವಿಧಾನ ಪರಿಷತ್ ಸದಸ್ಯನಾ ಗಿzಗ ಸದನದಲ್ಲಿ ಸರ್ಕಾರಿ ನೌಕ ರರ, ಕಾರ್ಮಿಕರ, ಕಾರ್ಖಾನೆಗಳ, ಅನುದಾನ ಹಾಗೂ ಅನುದಾನ ರಹಿತ ಶಿಕ್ಷಕರ ಹಳೆ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮರ್ಥ ಹೋರಾಟ ನಡೆಸಿದೆ. ಶಕ್ತಿಮೀರಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆ. ಆದರೆ ಅದು ಸಾಕಷ್ಟು ಯಶಸ್ವಿಯಾಗಿಲ್ಲ. ಕೆಳಮನೆಯನ್ನು ಪ್ರವೇಶಿಸಿದರೆ ಈ ಎ ಸಮಸ್ಯೆಗಳಿಗೊಂದು ಅರ್ಥ ಹುಡುಕಬಹುದು ಎಂದುಕೊಂಡು ವಿಧಾನ ಸಭೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಈಶ್ವರಪ್ಪ ಅವರ ಕುರಿತಂತೆ ಮತ್ತೆ ವಾಗ್ದಾಳಿ ಮುಂದುವರಿಸಿದ ಅವರು, ನಾನು ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ಮತ್ತು ನಾಲಿಗೆ ಯನ್ನು ನಿಯಂತ್ರಣದಲ್ಲಿ ಇಟ್ಟು ಕೊಂಡಿದ್ದೇನೆ ಸಾಮರಸ್ಯ ಸ್ಥಾಪಿ ಸಲು ಪ್ರಯತ್ನಿಸುತ್ತಿದ್ದೇನೆ. ಗಲಬೆ ಗಳನ್ನು ಹುಟ್ಟುಹಾಕಿಲ್ಲ. ನಾನು ಕೇವಲ ಟಿಕೆಟ್‌ಗಾಗಿ ಪಕ್ಷ ಬಿಡು ತ್ತಿಲ್ಲ. ಮತ್ತು ನನ್ನ ಹೆಸರು ಬರೆ ದಿಟ್ಟು ಯಾವ ಗುತ್ತಿಗೆದಾರನೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಪರೋಕ್ಷ ವಾಗಿ ಈಶ್ವರಪ್ಪ ವಿರುದ್ಧ ಹರಿ ಹಾಯ್ದ ಅವರು, ಕಾಕತಾಳೀಯ ಎಂಬಂತೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಒಂದು ವರ್ಷದ ದಿನದಂದೇ ಈಶ್ವರಪ್ಪ ಕೂಡ ತಮ್ಮ ನಿವೃತ್ತಿಯನ್ನು ಘೋ ಷಿಸಿದರು. ಬಹುಶಃ ಅಂದು ಅವರ ಮನೆಯಲ್ಲಿ ಮತ್ತು ಇವರ ಮನೆ ಯಲ್ಲಿ ಕೂಡ ದುಃಖದ ವಾತಾ ವರಣ ಇದ್ದಿರಬಹುದು ಎಂದರು.
ರಾಜೀನಾಮೆ ಸಲ್ಲಿಸುವ ಮುನ್ನ ಪದವೀಧರರ ಕ್ಷೇತ್ರದ ಮತದಾರರ ಅನುಮತಿ ಪಡೆದಿ ದ್ದೇನೆ ಮತ್ತು ನನಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಹೇಳುತ್ತೇನೆ. ಮುಖ್ಯವಾಗಿ ಕೆಲ ವರ ನಾಲಿಗೆಗಳು ನಿಯಂತ್ರಣಕ್ಕೆ ಬಂದಿವೆ ಎಂದುಕೊಂಡಿದ್ದೇನೆ. ಜತಿ ಹಿನ್ನೆಲೆಯಲ್ಲಿ ಸ್ಪರ್ಧಿಸದೆ ನೈಜ ಅಭ್ಯರ್ಥಿಯಾಗಿ ಸ್ಪರ್ಧಿಸುವೆ. ಕುಬೇರರ ಪುತ್ರರ ಮುಂದೆ ಸ್ಪರ್ಧಿಸಬಹುದು ಎಂಬ ಎಚ್ಚರಿಕೆಯೂ ನನಗಿದೆ. ಆದರೆ ಬಡವರ, ಕಾರ್ಮಿಕರ, ಕೂಲಿಕಾರರ, ಶಿಕ್ಷಕರ ಹೀಗೆ ಎಲ್ಲ ವರ್ಗದ ಆಶೀರ್ವಾದ ನನಗಿದೆ ಎಂದರು.